»   » 'ಡಿಡಿಎಲ್ ಜೆ' ಸೀನ್ ರೀಕ್ರಿಯೇಟ್ ಮಾಡಿ ಶಾರುಖ್ ಅಣಕಿಸಿದ ಹಾಟ್ ಬಾಯ್

'ಡಿಡಿಎಲ್ ಜೆ' ಸೀನ್ ರೀಕ್ರಿಯೇಟ್ ಮಾಡಿ ಶಾರುಖ್ ಅಣಕಿಸಿದ ಹಾಟ್ ಬಾಯ್

Posted By:
Subscribe to Filmibeat Kannada

ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚೆಗೆ ನೀಡಿದ ಸಂದರ್ಶನ ವೊಂದರಲ್ಲಿ ತಮ್ಮ ಮುತ್ತಿನ ಕಥೆಗಳನ್ನು ಹೇಳಿ ಸುದ್ದಿಯಲ್ಲಿದ್ದರು. ಆದರೆ ಇದೀಗ ಶಾರುಖ್ ಖಾನ್ ಅಭಿನಯದ ''ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರದ ಸೀನ್ ಒಂದನ್ನು ರಿಮೇಡ್ ಮಾಡಿ ಎಲ್ಲರ ಬಾಯಲ್ಲು ಅವರದೇ ಸುದ್ದಿ.

ಹೌದು, ಹಾಟ್ ಬಾಯ್ ರಣವೀರ್ ಇತ್ತೀಚೆಗೆ ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ 'ಡಿಡಿಎಲ್ ಜೆ' ಚಿತ್ರದ ರೈಲು ದೃಶ್ಯವನ್ನು ರಿಕ್ರಿಯೇಟ್ ಮಾಡಿದ್ದಾರೆ. ಡ್ಯಾನ್ಸ್ ಮಾಸ್ಟರ್ ಗಣೇಶ್ ಆಚಾರ್ಯ ಅವರೊಂದಿಗೆ ಚಿತ್ರೀಕರಿಸಿರುವ ಈ ದೃಶ್ಯವನ್ನು ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, 'ಡಿಡಿಎಲ್ ಜೆ' ಚಿತ್ರದಷ್ಟೇ ಸದ್ದು ಮಾಡುತ್ತಿದೆ.[ರಣವೀರ್-ದೀಪಿಕಾ ನಡುವೆ ಇದ್ದಕ್ಕಿದ್ದಂತೆ ಏನಾಯ್ತು?]

Actor Ranveer Singh recreate SRK’s ‘DDLJ’ train stunt

'ಡಿಡಿಎಲ್ ಜೆ' ಚಿತ್ರದಲ್ಲಿ 'ತುಜೆ ದೆಖಾ ತೊ ಯೆ ಜಾನಾ ಸನಂ' ಹಿನ್ನೆಲೆ ಸಂಗೀತದಲ್ಲಿ ಬರುವ ರೈಲು ದೃಶ್ಯವನ್ನು ಮರುಸೃಷ್ಟಿಸಿರುವ ರಣವೀರ್, ಈ ಸ್ಟಂಟ್ ಅನ್ನು ಮನೆಯಲ್ಲಿ ಆಗಲಿ ಅಥವಾ ಟ್ರೈನ್ ಹೋಗುವ ವೇಳೆ ಆಗಲಿ ಪ್ರಯತ್ನಿಸಬೇಡಿ ಎಂದು ಮೆಸೇಜ್ ಸಹ ನೀಡಿದ್ದಾರೆ.[XXX ಟ್ರೈಲರ್: ಗ್ಲಾಮರ್-ಡೇರಿಂಗ್-ಡ್ಯಾಶಿಂಗ್ ಲುಕ್ ನಲ್ಲಿ ದೀಪಿಕಾ]

ಶಾರುಖ್ ಖಾನ್ ರನ್ನು ಇಮಿಟೇಟ್ ಮಾಡಿರುವ ಈ ದೃಶ್ಯ ಅತಿಹೆಚ್ಚು ರೀಟ್ವೀಟ್ ಆಗಿ, ಅಪಾರ ಅಭಿಮಾನಿಗಳು ಲೈಕ್ ಮಾಡಿದ್ದಾರೆ. ಈ ವಿಡಿಯೋ ಒಂದು ರೀತಿ ರ್ಯಾಗ್ ಮಾಡುವಂತೆ ಇದ್ದರೂ, ನಗಿಸುವಲ್ಲಿ ಫೇಲ್ ಅಂತೂ ಹಾಗೊಲ್ಲ. ಆ ವಿಡಿಯೋ ಇಲ್ಲಿದೆ ನೋಡಿ.

English summary
Ranveer Singh is a pro at pulling off Shah Rukh Khan's most famous scenes from his iconic movies. The 'Befikre' actor recently imitated SRK's memorable train sequence from 'Dilwale Dulhania Le Jayenge' in the funniest manner possible.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada