For Quick Alerts
  ALLOW NOTIFICATIONS  
  For Daily Alerts

  ರಣವೀರ್-ದೀಪಿಕಾ ನಡುವೆ ಇದ್ದಕ್ಕಿದ್ದಂತೆ ಏನಾಯ್ತು?

  By ಸೋನು ಗೌಡ
  |

  ಬಾಲಿವುಡ್ ನ ಬೆಸ್ಟ್ ಕಪಲ್ ಅಂತ ಹೆಸರು ಗಿಟ್ಟಿಸಿಕೊಂಡಿರುವ, 'ರಾಮ್ ಲೀಲಾ' ಮತ್ತು 'ಬಾಜೀರಾವ್ ಮಸ್ತಾನಿ' ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವೆ ಮುನಿಸು ಉಂಟಾಗಿದೆಯಂತೆ.

  ರಣವೀರ್ ಸಿಂಗ್ ಅವರು ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಅವರ ಮೇಲೆ ಲೈಟಾಗಿ ಕೋಪ ಮಾಡಿಕೊಂಡಿದ್ದಾರಂತೆ. ಕಾರಣ ತುಂಬಾ ದೊಡ್ಡದೇನಲ್ಲಾ, ಸಣ್ಣ ವಿಚಾರಕ್ಕೆ ಡಿಪ್ಪಿ ಮೇಲೆ ರಣವೀರ್ ಸಿಂಗ್ ಅವರು ಬೇಜಾರು ಮಾಡಿಕೊಂಡಿದ್ದಾರೆ ಅಷ್ಟೇ.[XXX ಟ್ರೈಲರ್: ಗ್ಲಾಮರ್-ಡೇರಿಂಗ್-ಡ್ಯಾಶಿಂಗ್ ಲುಕ್ ನಲ್ಲಿ ದೀಪಿಕಾ]

  ಹೌದು ರಣವೀರ್ ಸಿಂಗ್ ಅವರು ದೀಪಿಕಾ ಪಡುಕೋಣೆ ಅವರ ಯಾವುದೇ ಸಿನಿಮಾ ಬಂದರೆ, ಅಥವಾ ದೀಪಿಕಾ ಅವರು ಯಾವುದೇ ಒಳ್ಳೆ ಕೆಲಸ ಮಾಡಿದರೆ, ಅದರ ವಿಚಾರವಾಗಿ ಫೇಸ್ ಬುಕ್/ಟ್ವಿಟ್ಟರ್ ನಲ್ಲಿ ಬರೆದು, ಅಭಿನಂದನೆ ಸಲ್ಲಿಸೋದೋ ಅಥವಾ ಕಾಮೆಂಟ್ ಮಾಡುವುದೋ ಮಾಡುತ್ತಾರೆ.

  ಆದ್ರೆ ಅದೇ ದೀಪಿಕಾ ಅವರು ಮಾತ್ರ ರಣವೀರ್ ಸಿಂಗ್ ಅವರ ಯಾವುದೇ ಸಿನಿಮಾದ ಬಗ್ಗೆ ಆಗಲಿ ಅಥವಾ ಇನ್ನಿತರೇ ವಿಚಾರದ ಬಗ್ಗೆ ಚರ್ಚೆ ಮಾಡೋ ಗೋಜಿಗೆ ಹೋಗಿಲ್ಲ. ಇದು ಸಿಂಗ್ ಸಾಹೇಬ್ರ ಮನಸ್ಸಿಗೆ ಬೇಸರ ತಂದ ವಿಚಾರ.[ದೀಪಿಕಾಗಿಂತ ರಣವೀರ್ ಸಂಭಾವನೆ ತುಂಬಾ ಕಡಿಮೆಯಂತೆ ಹೌದಾ.?]

  Bollywood Actor Ranveer Singh Unhappy With Deepika Padukone

  ಇತ್ತೀಚೆಗಷ್ಟೇ ರಣವೀರ್ ಸಿಂಗ್ ಮತ್ತು ವಾಣಿ ಕಪೂರ್ ನಟನೆಯ 'ಬೇಫಿಕ್ರಿ' ಚಿತ್ರದ ಟ್ರೈಲರ್ ಬಂತು. ಎಲ್ಲರೂ ಎರ್ರಾ-ಬಿರ್ರಿ ಕಾಮೆಂಟ್ ಮಾಡಿದ್ರು, ಜೊತೆಗೆ ಅಭಿನಂದನೆ ಕೂಡ ಸಲ್ಲಿಸಿದರು. ಆದರೆ ಸಿಂಗ್ ಅವರ ಆತ್ಮೀಯ ಜೀವ ದೀಪಿಕಾ ಅವರ ಕಡೆಯಿಂದ ಮಾತ್ರ ನೋ ರೆಸ್ಪಾನ್ಸ್.

  ಇದರಿಂದ ರಣವೀರ್ ಕೊಂಚ ಬೇಸರ ಮಾಡಿಕೊಂಡಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಎಲ್ಲರೂ, ಇವರಿಬ್ಬರ ನಡುವೆ ಏನಿಲ್ಲ, ಎಲ್ಲಾ ಮುಗಿದು ಹೋಯಿತು, ಇವರಿಬ್ಬರ ಸಂಬಂಧ ಬ್ರೇಕ್ ಅಪ್ ವರೆಗೂ ಬಂದಿದೆ. ಇವರು ಕಟ್ಟಿದ ಪ್ರೇಮ ಸೌಧ ಕುಸಿದು ಬೀಳುವ ಹಂತದಲ್ಲಿದೆ. ಹಾಗೆ-ಹೀಗೆ ಅಂತ ಇಡೀ ಬಿಟೌನ್ ನಲ್ಲಿ ಟಾಂ-ಟಾಂ ಮಾಡಿಕೊಂಡು ಬರುತ್ತಿದ್ದಾರೆ.[ದೀಪಿಕಾ ಜೊತೆ ಮದುವೆ ಬಗ್ಗೆ ರಣವೀರ್ ಏನಂತಾರೆ.?]

  ಯಾರ್ ಏನೇ ಅಂದ್ರೂ ಈ ವಿಚಾರದ ಬಗ್ಗೆ ದೀಪಿಕಾ ಅಥವಾ ರಣವೀರ್ ಸಿಂಗ್ ಅವರು ಎಲ್ಲೂ ಬಾಯಿ ಬಿಟ್ಟಿಲ್ಲ. ಇವರಿಬ್ಬರ ಹತ್ತಿರದ ವಕ್ತಾರರು ಮಾತ್ರ, ಅವರಿಬ್ಬರ ನಡುವೆ ಏನೂ ಆಗಿಲ್ಲ ಎಲ್ಲವೂ ಸರಿ ಇದೆ ಅಂತ ಬೇರೆ ಹೇಳಿದ್ದಾರೆ.

  ಆದ್ದರಿಂದ ಸದ್ಯಕ್ಕೆ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಅನ್ನೋ ಕನ್ ಫ್ಯೂಶನ್ ಇದೆ. ಅಂತೂ ಎಲ್ಲದಕ್ಕೂ ರಣವೀರ್-ದೀಪಿಕಾ ಉತ್ತರ ಕೊಡೋವರೆಗೂ ಅಭಿಮಾನಿಗಳು ಕಾಯಲೇಬೇಕು.

  English summary
  Ranveer Singh and Deepika Padukone are the most admired couple of Bollywood. Ranveer Singh is very upset with Deepika Padukone and the couple might call it quits, ''Ranveer and Deepika's relationship isn't going very well it seems.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X