»   » ಸೋನಾಕ್ಷಿ ಮೊದಲ ಪ್ರೇಮ ಕಹಾನಿಗೆ ತಂದೆಯೇ ವಿಲನ್..!

ಸೋನಾಕ್ಷಿ ಮೊದಲ ಪ್ರೇಮ ಕಹಾನಿಗೆ ತಂದೆಯೇ ವಿಲನ್..!

Posted By:
Subscribe to Filmibeat Kannada

ನಾಟ್ಯ ಮಯೂರಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಗಾಳಿಸುದ್ದಿ ಇತ್ತೀಚಿನ ಕೆಲ ತಿಂಗಳಷ್ಟೇ ಹರಿದಾಡಿತ್ತು. ಇದಕ್ಕೆ ನೇರವಾಗಿ ಪ್ರತಿಕ್ರಿಯಿಸಿದ್ದ ಸೋನಾಕ್ಷಿ ಸಿನ್ಹಾ ಇದೆಲ್ಲ ಸುಳ್ಳು ಸುದ್ದಿ ಎಂದು ಪ್ರತಿಕ್ರಿಯೆ ನೀಡಿದ್ದರು. 'ದಬಾಂಗ್' ಖ್ಯಾತಿಯ ಸೋನಾಕ್ಷಿ ಸಿನ್ಹಾ ಬಗ್ಗೆ ಈಗೊಂದು ಹೊಸ ಸುದ್ದಿ ಹರಿದಾಡುತ್ತಿದೆ.['ಆಹಾ ನನ್ನ ಮದ್ವೆಯಂತೆ' ಎಂದ್ರಂತೆ ಸೋನಾಕ್ಷಿ.! ಹೌದಾ?]

ಸೋನಾಕ್ಷಿ ಸಿನ್ಹಾ ಮತ್ತು ಬಂಟಿ ಸಚ್ ದೇವ್ ಇಬ್ಬರೂ ಜೊತೆಯಲ್ಲಿ ಓಡಾಡುತ್ತಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಮತ್ತೆ ಬಿಟೌನ್ ನಲ್ಲಿ ಹರಿದಾಡುತ್ತಿದೆ. ಹೀಗಿರುವಾಗ ಇದರ ಜೊತೆಗೆ ಸಿನ್ಹಾ ಬಗ್ಗೆ ಇನ್ನೊಂದು ಹೊಸ ಸುದ್ದಿ ಹೊರಬಿದ್ದಿದೆ.

Actress Sonakshi Sinha Love Rumours

ಅಂದಹಾಗೆ ಬಂಟಿ ಗಿಂತ ಮೊದಲೇ ಸೋನಾಕ್ಷಿ ಸಿನ್ಹಾ ಮನಸ್ಸಿನಲ್ಲಿ ಬೇರೆಯವರ ಮೇಲೆ ಪ್ರೀತಿ ಹುಟ್ಟಿತ್ತಂತೆ. ಆದ್ರೆ ಅವರ ತಂದೆ ಕೋಪಗೊಂಡಿದ್ದರಿಂದ ಆ ಪ್ರೀತಿಗೆ ಬ್ರೇಕ್‌ ಹಾಕಿದ್ದರಂತೆ. ಬಂಟಿ ಸಚ್ ದೇವ್ ಗೂ ಮೊದಲೇ ಸೋನಾಳ ಹೃದಯವನ್ನು ಗೆದ್ದ ಆ ಗ್ಲಾಮರ್ ಹುಡುಗ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬಹುದು. ಅವರು ರಣವೀರ್ ಸಿಂಗ್. ಎಲ್ಲರಿಗೂ ಅಶ್ಚರ್ಯ ಎನಿಸಿದರೂ ಈ ಗಾಸಿಪ್ ಸುದ್ದಿ ಹರಿದಾಡುತ್ತಿರುವುದು ಮಾತ್ರ ಸುಳ್ಳಲ್ಲ.[ಈಡೇರಿದ್ದಾಯ್ತು ಸೋನಾಕ್ಷಿಯ ಬಹುದಿನಗಳ ಬಯಕೆ!]

ಸೋನಾಕ್ಷಿ ಸಿನ್ಹಾ ಮತ್ತು ರಣವೀರ್ ಸಿಂಗ್ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಹೊಸತರಲ್ಲಿ 'ಲೂಟೆರಾ' ಚಿತ್ರದಲ್ಲಿ ಒಟ್ಟಿಗೆ ನಟಿಸುವ ವೇಳೆ, ಇಬ್ಬರ ಪ್ರೇಮ ಕಹಾನಿ ಶುರುವಾಗಿತ್ತು. ಈ ವಿಷಯ ವ್ಯಾಲೆಂಟೈನ್ ಡೇ ದಿನದಂದು ಸೋನಾಕ್ಷಿ ರವರ ತಂದೆ ಶತ್ರುಘ್ನ ಸಿನ್ಹಾ ಗೆ ತಿಳಿದು ವಾರ್ನ್‌ ಮಾಡಿದ್ದರಂತೆ. ಅಲ್ಲಿಂದ ರಣವೀರ್ ಸಿಂಗ್ ಮತ್ತು ಸೋನಾಕ್ಷಿ ಪ್ರೇಮ ಕಹಾನಿಗೆ ಬ್ರೇಕ್‌ ಬಿತ್ತು ಎಂಬ ಮಾಹಿತಿ ಈಗ ಎಲ್ಲೆಲ್ಲೂ ಹರಿದಾಡುತ್ತಿದೆ.

English summary
Bollywood Actress Sonakshi Sinha related new rumours surrounding her Love hearing by Btown. Here is what is new rumours.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X