»   » 'ಆಹಾ ನನ್ನ ಮದ್ವೆಯಂತೆ' ಎಂದ್ರಂತೆ ಸೋನಾಕ್ಷಿ.! ಹೌದಾ?

'ಆಹಾ ನನ್ನ ಮದ್ವೆಯಂತೆ' ಎಂದ್ರಂತೆ ಸೋನಾಕ್ಷಿ.! ಹೌದಾ?

Posted By:
Subscribe to Filmibeat Kannada

ಇಷ್ಟು ದಿನ ನಟಿಸಿದ್ದು ಸಾಕು, ಇನ್ಮುಂದೆ ಫ್ಯಾಮಿಲಿ ಲೈಫ್ ಕಡೆ ಗಮನ ಕೊಡೋಣ ಅಂತ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮನಸ್ಸು ಮಾಡಿದ್ದಾರಂತೆ!

- ಹೀಗಂತ ಮುಂಬೈನ ದಿನಪತ್ರಿಕೆಯೊಂದು ಕೆಲ ದಿನಗಳ ಹಿಂದೆ ವರದಿ ಮಾಡಿತ್ತು. ಅದರ ಬೆನ್ನಲ್ಲೇ, ಸೋನಾಕ್ಷಿ ಸಿನ್ಹಾ ಸದ್ಯದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಅಂತ ಯಾರೋ ಹಬ್ಬಿಸಿದ ಸುದ್ದಿ ಬಾಲಿವುಡ್ ಸುತ್ತ ಗಿರಗಿಟ್ಲೆಯಂತೆ ಗಿರಕಿ ಹೊಡೆಯಿತು. ಅದೂ ಸೋನಾಕ್ಷಿ ಕಿವಿಗೂ ಬಿದ್ದಿದೆ. [ಈಡೇರಿದ್ದಾಯ್ತು ಸೋನಾಕ್ಷಿಯ ಬಹುದಿನಗಳ ಬಯಕೆ!]

ಅದರ ಪರಿಣಾಮ ತಮ್ಮ ಮದುವೆ ಬಗ್ಗೆ ಸೋನಾಕ್ಷಿ ಬಾಯ್ಬಿಟ್ಟಿದ್ದಾರೆ. ಹಾಗಾದ್ರೆ, ಸೋನಾಕ್ಷಿ ಸಿನ್ಹಾ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದು ನಿಜವೇ? ಉತ್ತರ ತಿಳಿಯಲು ಕೆಳಗಿರುವ ಫೋಟೋ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಎಲ್ಲಾ ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್

ಎಂಗೇಜ್ ಮೆಂಟ್ ಕುರಿತು ಹಬ್ಬಿದ ಎಲ್ಲಾ ಅಂತೆ-ಕಂತೆ ಪುರಾಣಗಳಿಗೆ ನಟಿ ಸೋನಾಕ್ಷಿ ಸಿನ್ಹಾ ಫುಲ್ ಸ್ಟಾಪ್ ಇಟ್ಟಿದ್ದಾರೆ. [ಚಿರಂಜೀವಿ ಪುತ್ರನಿಗೆ ಸೋನಾಕ್ಷಿ ಮೇಲೆ ಮನಸ್ಸು]

ಏನಂತಾರೆ ಸೋನಾಕ್ಷಿ?

''ಇದೆಲ್ಲ ಸುಳ್ಳು ಸುದ್ದಿ. ನಾನು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ'' ಅಂತ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ಸೋನಾಕ್ಷಿ ಸಿನ್ಹಾ ಸ್ಪಷ್ಟವಾಗಿ ಹೇಳಿದ್ದಾರೆ.

ಟ್ವಿಟ್ಟರ್ ನಲ್ಲೂ ಬೆಂಡೆತ್ತಿದ್ದರು

ನಿಶ್ಚಿತಾರ್ಥದ ಬಗ್ಗೆ ಖ್ಯಾತ ದಿನಪತ್ರಿಕೆಯೊಂದು ವರದಿ ಮಾಡಿದಾಗಲೂ, ಟ್ವಿಟ್ಟರ್ ನಲ್ಲಿ ಸೋನಾಕ್ಷಿ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು.

ಸೋನಾಕ್ಷಿ ಬಾಯ್ ಫ್ರೆಂಡ್ ಯಾರು?

ಬಾಲಿವುಡ್ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿರುವ ಗುಸು ಗುಸು ಪ್ರಕಾರ, ಸೋನಾಕ್ಷಿ ಸಿನ್ಹಾ ರವರ ಬಾಯ್ ಫ್ರೆಂಡ್ ಬಂಟಿ ಸಚ್ ದೇವಾ.

ಸೋನಾಕ್ಷಿ ಮುಂದಿನ ಸಿನಿಮಾ ಯಾವುದು?

ಎ.ಆರ್.ಮುರುಗದಾಸ್ ನಿರ್ದೇಶಿಸಿರುವ 'ಅಕಿರ' ಎಂಬ ಆಕ್ಷನ್ ಚಿತ್ರಕ್ಕೆ ಸೋನಾಕ್ಷಿ ಸಿನ್ಹಾ ನಾಯಕಿ. ಸೆಪ್ಟೆಂಬರ್ 2 ರಂದು 'ಅಕಿರ' ಬಿಡುಗಡೆ ಆಗಲಿದೆ.

English summary
Bollywood Actress Sonakshi Sinha has denied all the rumours surrounding her engagement with Bunty Sachdeva.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada