»   »  ಅಕ್ಷಯ್ ಕುಮಾರ್ ಗೆ ಮೂರ್ತಿ ಪೂಜೆಯಲ್ಲಿ ನಂಬಿಕೆ ಇಲ್ವಂತೆ: ಏಕೆ ಗೊತ್ತಾ?

ಅಕ್ಷಯ್ ಕುಮಾರ್ ಗೆ ಮೂರ್ತಿ ಪೂಜೆಯಲ್ಲಿ ನಂಬಿಕೆ ಇಲ್ವಂತೆ: ಏಕೆ ಗೊತ್ತಾ?

Posted By:
Subscribe to Filmibeat Kannada

ಆಕ್ಷನ್, ಕಾಮಿಡಿ, ದೇಶಭಕ್ತಿ, ರೊಮ್ಯಾನ್ಸ್ ಡ್ರಾಮಾ ಸೇರಿದಂತೆ 100 ಕ್ಕೂ ಹೆಚ್ಚು ಸಿನಿಮಾ ಗಳಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. 25 ವರ್ಷ ಗಳನ್ನು ಚಿತ್ರರಂಗದಲ್ಲಿ ಪೂರೈಸಿರುವ ಅಕ್ಷಯ್, ತಮ್ಮ ಹಲವು ಉತ್ತಮ ಚಿತ್ರಗಳು ಪಾಸ್ ಆಗಲಿಲ್ಲ ಎಂಬುದನ್ನು ಹೈಲೈಟ್ ಮಾಡಿದ್ದಾರೆ.[ಅಕ್ಷಯ್ ಕುಮಾರ್ ಗೆ ಹೆಂಡತಿ ಆಗಲು ಒಪ್ಪಿದ್ರು ರಾಧಿಕಾ ಆಪ್ಟೆ!]

ಅಂದಹಾಗೆ ನಟ ಅಕ್ಷಯ್ ಕುಮಾರ್ ತಮ್ಮ ಸಿನಿಮಾಗಳಲ್ಲಿ ಯಾರಿಗೂ ಬೋಧನೆ ಮಾಡಲು ಮತ್ತು ಯಾರ ಮೈಂಡ್ ಸೆಟ್ ಬದಲಾಯಿಸುವ ಉದ್ದೇಶವನ್ನು ಇಟ್ಟುಕೊಳ್ಳುವುದಿಲ್ಲವಂತೆ. ಸಿನಿಮಾ ಪಯಣದ ಬಗ್ಗೆ ಸೂಪರ್ ಸ್ಟಾರ್ 'ಜಾಲಿ ಎಲ್ ಎಲ್ ಬಿ 2' ಹಿನ್ನೆಲೆಯಲ್ಲಿ ಇನ್ನೂ ಏನೇನೆಲ್ಲಾ ಹೇಳಿದ್ರು ನೋಡೋಣ ಬನ್ನಿ.

'ನಾನು ನಂಬಿದ ಚಿತ್ರಗಳನ್ನು ಮಾತ್ರ ಮಾಡುತ್ತಾನೆ'

'ನಾನು ಜನರ ಮೈಂಡ್ ಸೆಟ್ ಚೇಂಜ್ ಮಾಡುವ ಸಲುವಾಗಿ ಸಿನಿಮಾ ಮಾಡುವುದಿಲ್ಲ. ನಾನು ನಂಬಿದ ಸಿನಿಮಾಗಳಲ್ಲಿ ನಟಿಸಿ ನನ್ನನ್ನು ಪ್ರೆಸೆಂಟ್ ಮಾಡುತ್ತೇನೆ. ಸಿನಿಮಾ ಲೈಕ್ ಮಾಡುವುದು, ಬಿಡುವುದು ಜನರಿಗೆ ಬಿಟ್ಟಿ ವಿಷಯ', ಎಂದು ಅಕ್ಷಯ್ ಕುಮಾರ್ ಇತ್ತೀಚೆಗೆ 'ಜಾಲಿ ಎಲ್ ಎಲ್ ಬಿ 2' ರಿಲೀಸ್ ಹಿನ್ನೆಲೆ ವೇಳೆ ಐಎಎನ್ ಎಸ್ ಗೆ ಹೇಳಿದ್ದಾರೆ.[ಬಾಲಿವುಡ್‌ ನಲ್ಲಿ ಮೂವರು ದಿಗ್ಗಜರ ಸಂಗಮದ ಚಿತ್ರ ತೆರೆಗೆ]

'ಮೂರ್ತಿ ಪೂಜೆಯಲ್ಲಿ ನಂಬಿಕೆ ಇಲ್ಲ'

49 ವರ್ಷದ ಹಿಂದಿ ಸಿನಿಮಾ ಖಿಲಾಡಿ "ನಾನು 'OMG- Oh My God' ಚಿತ್ರದಲ್ಲಿ ನಟಿಸಿದೆ, ಕಾರಣ ಮೂರ್ತಿ ಪೂಜೆಯಲ್ಲಿ ನನಗೆ ನಂಬಿಕೆ ಇಲ್ಲ. ನನ್ನೊಳಗಿನ ದೇವರನ್ನು ನಾನು ನಂಬುತ್ತೇನೆ. ದೇವರ ವಿಗ್ರಹಗಳ ಮೇಲೆ ಹಾಲನ್ನು ಸುರಿದು ವೇಸ್ಟ್ ಮಾಡುವ ಬದಲು ಅದನ್ನು ಬಡವರಿಗೆ ಕೊಡಬೇಕು" ಎಂದು ಹೇಳಿದ್ದಾರೆ.

ಅಕ್ಷಯ್ ಕುಮಾರ್ ರನ್ನು ಒಪ್ಪಲೇ ಬೇಕು

'ಹಲವು ಜನರು 'OMG- Oh My God' ಚಿತ್ರ ಇಷ್ಟವಾಯಿತು ಎಂದು ಹೇಳುತ್ತಾರೆ. ಆದರೆ ಈಗ ಹಾಗೆ ಫಾಲೋ ಮಾಡಬೇಡಿ(ಮೂರ್ತಿ ಪೂಜೆಯಲ್ಲಿ ನಂಬಿಕೆ ಇಡಬೇಡಿ)'.

ಅಕ್ಷಯ್ ಕುಮಾರ್ ಅವರಲ್ಲಿ ಇಷ್ಟಪಡಬೇಕಾದ ಗುಣ

ಅಕ್ಷಯ್ ಕುಮಾರ್ ಉದ್ದೇಶ ಪೂರ್ವಕವಾಗಿ ಯಾವುದೇ ಸಿನಿಮಾಗಳನ್ನು ಬೋಧನೆ ಮಾಡುವ ದೃಷ್ಟಿಯಿಂದ ನಿರ್ಮಿಸುವುದಿಲ್ಲ. ಆದರೆ ಅವರೇ ಹೇಳಿದಂತೆ 'ನನಲ್ಲೇ ವೈಯಕ್ತಿಕವಾಗಿ ಥಿಂಕ್ ಮಾಡಬೇಕಾದ ಸಿನಿಮಾಗಳಲ್ಲಿ ಅಭಿನಯಿಸುತ್ತೇನೆ' ಎಂದಿದ್ದಾರೆ.

ವಿವಿಧ ಪ್ರಕಾರಗಳ ಸಿನಿಮಾಗಳಲ್ಲಿ ಅಕ್ಷಯ್

ಅಕ್ಷಯ್ ಕುಮಾರ್ ಕೇವಲ ಒಂದೇ ಪ್ರಕಾರದ ಸಿನಿಮಾಗಳಿಗೆ ಫಿಕ್ಸ್ ಆಗುವುದಿಲ್ಲ. ಕಾಮಿಡಿ ಚಿತ್ರಗಳಲ್ಲೂ ಕಾಣಿಸಿಕೊಂಡಿರುವ ಅಕ್ಷಯ್, ಇತ್ತೀಚೆಗೆ ದೇಶಪ್ರೇಮ ಬಿಂಬಿಸುವ 'ಏರ್‌ ಲಿಫ್ಟ್', 'ಹೌಸ್ ಫುಲ್ 3', 'ರುಸ್ತುಮ್' ಮತ್ತು 'ಬೇಬಿ' ಚಿತ್ರಗಳಲ್ಲೂ ನಟಿಸಿದ್ದಾರೆ. ಅಲ್ಲದೇ ದೀರ್ಘ ಸಮಯದ ನಂತರ ತಮ್ಮ ಕಂಫರ್ಟ್ ಜೋನ್ ನಿಂದ ಹೊರಬಂದು ಡಿಫರೆಂಟ್ ಸಿನಿಮಾ ಕೋರ್ಟ್ ಡ್ರಾಮಾ 'ಜಾಲಿ ಎಲ್ ಎಲ್ ಬಿ 2' ನಲ್ಲಿ ಕೋಟ್ ಧರಿಸಿದ್ದಾರೆ.

'ಜಾಲಿ ಎಲ್ ಎಲ್ ಬಿ 2' ಟಾರ್ಗೆಟ್ ಆಡಿಯನ್ಸ್

" 'ಜಾಲಿ ಎಲ್ ಎಲ್ ಬಿ 2' ಚಿತ್ರಕ್ಕೆ ಮೇನ್ ಟಾರ್ಗೆಟ್ ಆಡಿಯನ್ಸ್ ಯೂತ್. ಅಲ್ಲದೇ ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರು ಇಬ್ಬರಿಗು ಸಹ. 'ಜಾಲಿ ಎಲ್ ಎಲ್ ಬಿ 2' ಸೀರಿಯಸ್ ಟಾಪಿಕ್ ಚಿತ್ರವಾಗಿದ್ದು, ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸರಿಯಲ್ಲ ಎಂಬುದನ್ನು ಹೇಳಲಾಗಿದೆ. ಹಾಗೆ ಎಲ್ಲವೂ ಚೆನ್ನಾಗಿರುತ್ತದೆ ಎಂಬುದೂ ಸಹ ಇದೆ" ಎಂದು ಅಕ್ಷಯ್ ಹೇಳಿದ್ದಾರೆ.

'ಜಾಲಿ ಎಲ್ ಎಲ್ ಬಿ 2' ಗಾಗಿ ಪ್ರಿಪರೇಷನ್ ಇಲ್ಲ

" ಲಾಯರ್ ಜಗದೀಶ್ವರ್ ಮಿಶ್ರಾ ಆಗಿ ನಟಿಸಲು ನಾನು ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲ. ಕಾನ್ಸೆಪ್ಟ್, ಸ್ಕ್ರಿಪ್ಟ್ ಮತ್ತು ಡಯಲಾಗ್ ಗಳು ಇಷ್ಟವಾದವು. ಹಾಗೆ ಲಾಯರ್ ಪಾತ್ರವನ್ನು ಈ ಹಿಂದೆ ಒಮ್ಮೆಯೂ ಕಾಣಿಸಿಕೊಂಡಿರಲಿಲ್ಲ. ಆದ್ದರಿಂದ ಈ ಸಿನಿಮಾಗೆ ಒಪ್ಪಿಕೊಂಡೆ' ಎಂದು ಅಕ್ಷಯ್ ಐಎಎನ್ ಎಸ್ ಜತೆ ಹೇಳಿದ್ದಾರೆ.

'ಜಾಲಿ ಎಲ್ ಎಲ್ ಬಿ 2' ರಿಲೀಸ್

ಅಕ್ಷಯ್ ಜೊತೆ ಹುಮಾ ಕುರೇಶಿ, ಸೌರಭ್ ಶುಕ್ಲ ಮತ್ತು ಅನ್ನು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಜಾಲಿ ಎಲ್ ಎಲ್ ಬಿ 2' ಚಿತ್ರವನ್ನು ಸುಭಾಷ್ ಕಪೂರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಫೆಬ್ರವರಿ 10 ರಂದು ತೆರೆ ಕಾಣುತ್ತಿದೆ.

English summary
Bollywood Actor Akshay Kumar Doesn't Believe In Idol Worship! Here's why Superstar doesn't believe in idol worship.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada