»   » ಅಕ್ಷಯ್ ಕುಮಾರ್ ಗೆ ಹೆಂಡತಿ ಆಗಲು ಒಪ್ಪಿದ್ರು ರಾಧಿಕಾ ಆಪ್ಟೆ!

ಅಕ್ಷಯ್ ಕುಮಾರ್ ಗೆ ಹೆಂಡತಿ ಆಗಲು ಒಪ್ಪಿದ್ರು ರಾಧಿಕಾ ಆಪ್ಟೆ!

Posted By:
Subscribe to Filmibeat Kannada

'ಕಬಾಲಿ' ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಸಖತ್ ಬೋಲ್ಡ್ ನಟಿ ರಾಧಿಕಾ ಆಫ್ಟೆ, ಇತ್ತೀಚೆಗೆ ಯಾವುದಾದರೊಂದು ಸುದ್ದಿಯಲ್ಲಿರುತ್ತಾರೆ. ವಾಣಿಜ್ಯೇತರ ಚಿತ್ರಗಳಿಂದ ಬಂದ ರಾಧಿಕಾ ಆಪ್ಟೆ ಈಗ ಬಾಲಿವುಡ್ ನ ಪಕ್ಕಾ ಕಮರ್ಶಿಯಲ್ ಸಿನಿಮಾ ಗಳಲ್ಲಿ ಕುತೂಹಲಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.[ಹಾಟ್ ನಟಿ ರಾಧಿಕಾ ಆಪ್ಟೆ 'ರತಿ' ವಿಡಿಯೋ ರಹಸ್ಯ]

ರಾಧಿಕಾ ಆಪ್ಟೆ ಹೆಚ್ಚಾಗಿ ಜನಪ್ರಿಯತೆ ಗಳಿಸಿದ್ದು ಫೋಬಿಯಾ ಮತ್ತು ಪಾರ್ಚ್ಡ್ ಸಿನಿಮಾ ಗಳಲ್ಲಿ ತಾವು ಅಭಿನಯಿಸಿದ ಪಾತ್ರಗಳ ಮೂಲಕ. ಆದರೆ ಈಗ ರಾಧಿಕಾ ಆಪ್ಟೆ ಬಗ್ಗೆ ಹೊಸ ಸುದ್ದಿಯೊಂದು ಬಿ ಟೌನ್‌ ಕಡೆಯಿಂದ ಬಂದಿದೆ. ಮೂಲಗಳ ಪ್ರಕಾರ ರಾಧಿಕಾ ಆಪ್ಟೆ ಅಕ್ಷಯ್‌ ಕುಮಾರ್ ಗೆ ವೈಫ್‌ ಆಗಲು ಒಪ್ಪಿಕೊಂಡಿದ್ದಾರಂತೆ. ಈ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೆ..

ಅಕ್ಷಯ್‌ ಕುಮಾರ್ ಗೆ ಹೆಂಡತಿ ಆಗಲು ಒಪ್ಪಿದ ರಾಧಿಕಾ ಆಪ್ಟೆ

ಎಂಥವರನ್ನೂ ಮೂಕವಿಸ್ಮಿತಗೊಳಿಸುವ ನೋಟ ಹೊಂದಿರುವ ನಟಿ ರಾಧಿಕಾ ಆಪ್ಟೆ ಈಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ವೈಫ್ ಆಗಲು ಒಪ್ಪಿಕೊಂಡಿದ್ದಾರೆ. ಏನಿದು ಹೆಂಡಿತಿನಾ.. ಅಂತ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳಬೇಡಿ. ಯಾಕಂದ್ರೆ ರಾಧಿಕಾ ಆಪ್ಟೆ, ಅಕ್ಷಯ್‌ ಕುಮಾರ್ ರವರ 'ಪದ್ಮನ್' ಚಿತ್ರದಲ್ಲಿ ಅವರಿಗೆ ಹೆಂಡತಿಯ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವುದು ಅಷ್ಟೆ.['ಕ್ಯಾಸ್ಟಿಂಗ್ ಕೌಚ್' ಭೂತ ರಾಧಿಕಾ ಆಪ್ಟೆ ಅವರನ್ನೂ ಬಿಟ್ಟಿಲ್ಲಾ]

ಪದ್ಮನ್ ಚಿತ್ರದ ಬಿಟ್ಟಿರಲಾರದ ಹೆಂಡತಿ

ರಾಧಿಕಾ ಆಪ್ಟೆ 'ಪದ್ಮನ್' ಚಿತ್ರದಲ್ಲಿ ಅಕ್ಷಯ್‌ ಕುಮಾರ್ ಅವರ ಬಿಟ್ಟಿರಲಾರದ ಹೆಂಡತಿ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.

ಲೀಡ್ ರೋಲ್‌ ನಲ್ಲಿ ಅಕ್ಷಯ್ ಕುಮಾರ್

ಸ್ಯಾನಿಟರಿ ಪ್ಯಾಡ್ ಬ್ಯುಸಿನೆಸ್ ಮ್ಯಾನ್ ಅರುಣಚಲಂ ಮುರುಗನಾಥಂ ಅವರ ರಿಯಲ್ ಲೈಫ್ ಸ್ಟೋರಿ ಆಧಾರಿತ 'ಪದ್ಮನ್' ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಪದ್ಮನ್' ಟ್ವಿಂಕಲ್ ಖನ್ನಾ ನಿರ್ಮಾಣದ ಚಿತ್ರ

ಅಕ್ಷಯ್ ಕುಮಾರ್ ನಟನೆಯ 'ಪದ್ಮನ್' ಚಿತ್ರದಲ್ಲಿ ರಾಧಿಕಾ ಆಪ್ಟೆ ರೀಲ್ ವೈಫ್ ಆಗಿ ಕಾಣಿಸಿಕೊಂಡರೆ, ಅಕ್ಷಯ್ ಕುಮಾರ್ ಅವರ ರಿಯಲ್ ವೈಫ್ ಟ್ವಿಂಕಲ್ ಖನ್ನಾ ಚಿತ್ರದಲ್ಲಿ ಅರುಣಚಲಂ ಮುರುಗನಾಥಂ ಅವರ ರಿಯಲ್ ಲೈಫ್ ಸ್ಟೋರಿ ಬಗ್ಗೆ ಪುಸ್ತಕ ಬರೆಯಲು ಮಾಹಿತಿ ಹುಡುಕುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಚಿತ್ರವನ್ನು ಟ್ವಿಂಕಲ್ ಖನ್ನಾ ನಿರ್ಮಾಣ ಮಾಡುತ್ತಿದ್ದು, ಆರ್ ಬಲ್ಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

English summary
From unconventional to commercial cinema, Radhika Apte has treaded a rather interesting path in Bollywood. The actress who is known for her roles in films like Phobia and Parched will now star opposite Akshay Kumar in the role of his wife in Padman.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada