»   » ಬಾಲಿವುಡ್‌ ನಲ್ಲಿ ಮೂವರು ದಿಗ್ಗಜರ ಸಂಗಮದ ಚಿತ್ರ ತೆರೆಗೆ

ಬಾಲಿವುಡ್‌ ನಲ್ಲಿ ಮೂವರು ದಿಗ್ಗಜರ ಸಂಗಮದ ಚಿತ್ರ ತೆರೆಗೆ

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ದೊಡ್ಡ ದೊಡ್ಡ ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಹಾಗೂ ಒಮ್ಮೆ ಕಾಣಸಿಕೊಂಡರೇ ಅದು ಬಿಗ್‌ ಬಜೆಟ್ ಸಿನಿಮಾ ಅಂತಲೇ ಭಾವಿಸಬೇಕು. ಉದಾಹರಣೆಗೆ ಧೂಮ್ ಸೀರೀಸ್ ನಂತಹ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ನಟರನ್ನು ಒಂದೇ ಚಿತ್ರದಲ್ಲಿ ನೋಡಬಹುದು.

ಸಿನಿ ಪ್ರಿಯರು 2017 ಹೊಸ ವರ್ಷದ ಗುಂಗಿನಲ್ಲಿ ಇರುವಾಗಲೇ ಬಾಲಿವುಡ್ ನಲ್ಲಿ 2018 ಕ್ಕೆ ರಿಲೀಸ್ ಆಗುವ ಸಿನಿಮಾ ಒಂದರ ಸುದ್ದಿ ಕೇಳಿಬಂದಿದೆ. ಈ ಸಿನಿಮಾ ಬಾಲಿವುಡ್‌ನ ಮೂವರು ದಿಗ್ಗಜರ ಸಮಾಗಮದಲ್ಲಿ ಮೂಡಿಬರುತ್ತಿರುವ ಕಾರಣ ಬಾಲಿವುಡ್ ಸಿನಿ ಪ್ರಿಯರಲ್ಲಿ ಹೆಚ್ಚು ಕ್ರೇಜ್ ಹುಟ್ಟಿಸಿದೆ.[ಹಳೆ ಬಾಯ್‌ಫ್ರೆಂಡ್ ಸಹಾಯ ಕೇಳಿದ ಕತ್ರಿನಾ ಕೈಫ್]

ಮುಂದಿನ ವರ್ಷ (2018) ತೆರೆ ಕಾಣಲಿರುವ ಬಾಲಿವುಡ್‌ ನ ಮೂವರು ದಿಗ್ಗಜರ ಸಮಾಗಮದ ಆ ಚಿತ್ರ ಯಾವುದು, ಮೂವರು ದಿಗ್ಗಜರು ಯಾರು ಎಂಬ ಮಾಹಿತಿ ಇಲ್ಲಿದೆ ನೋಡಿ..

ಮೂವರು ಬಾಲಿವುಡ್ ದಿಗ್ಗಜರು ಇವರೇ..!

2018 ರಲ್ಲಿ ತೆರೆ ಮೇಲೆ ಬರಲಿರುವ ಚಿತ್ರದ ಮೂವರು ಬಾಲಿವುಡ್ ದಿಗ್ಗಜರು ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಕರಣ್ ಜೋಹರ್.[ನಕಲಿ ಅಶ್ಲೀಲ ವಿಡಿಯೋದಲ್ಲಿ ಸಲ್ಲು ಮತ್ತು ಕತ್ರಿನಾ]

ಹೊಸ ಪ್ರಾಜೆಕ್ಟ್

ಹೊಸ ವರ್ಷದ ಮೊದಲ ದಿನವೇ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಕರಣ್ ಜೋಹರ್ ಸರ್‌ಪ್ರೈಸ್ ನೀಡಿದ್ದು ಈ ಮೂವರ ಸಂಗಮದಲ್ಲಿ ಹೊಸ ಸಿನಿಮಾ ಒಂದು ನಿರ್ಮಾಣವಾಗುತ್ತಿದೆ. ಈ ಮಾಹಿತಿಯನ್ನು ಮೂವರು ನಟರು ಸಹ ತಮ್ಮ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

ಚಿತ್ರದಲ್ಲಿ ಅಕ್ಷಯ್‌ ಕುಮಾರ್ ನಾಯಕ

ಅಂದಹಾಗೆ ಮೂವರ ಸಂಗಮದ ಚಿತ್ರದಲ್ಲಿ ಕರಣ್ ಜೋಹರ್ ಮತ್ತು ಸಲ್ಮಾನ್‌ ಖಾನ್ ಸಿನಿಮಾ ನಿರ್ಮಾಣ ಹೊಣೆ ಹೊತ್ತಿದ್ದಾರೆ. ಅಕ್ಷಯ್‌ ಕುಮಾರ್ ನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಕರಣ್ ಜೋಹರ್ ಮತ್ತು ಸಲ್ಮಾನ್‌ ಖಾನ್‌ ಯಾವುದಾದರೂ ಪಾತ್ರದಲ್ಲಿ ನಟಿಸುತ್ತಾರಾ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲಾ.['2.0' ಚಿತ್ರದಲ್ಲಿ ರಜನಿ ಹೀರೋ ಅಲ್ಲ, ಅಕ್ಷಯ್ ಹೀರೋ ಅಂತೆ]

ಚಿತ್ರದ ಹೆಸರೇನು?

ಕರಣ್ ಜೋಹರ್ ಮತ್ತು ಸಲ್ಮಾನ್‌ ಖಾನ್‌ ಜಂಟಿಯಾಗಿ ನಿರ್ಮಿಸಲಿರುವ ಚಿತ್ರಕ್ಕೆ ಇನ್ನೂ ಹೆಸರು ಇಟ್ಟಿಲ್ಲ. ಆದ್ರೆ ನಾಯಕ ನಟ ಆಗಿ ಕಾಣಿಸಿಕೊಳ್ಳಲಿರುವ ಅಕ್ಷಯ್‌ ಕುಮಾರ್ ಈಗ 'ಜಾಲಿ ಎಲ್‌ಎಲ್‌ಬಿ2' ಚಿತ್ರದ ಮೂಡ್‌ ನಲ್ಲಿದ್ದಾರೆ.

ಕರಣ್ ಜೋಹರ್ ಮತ್ತು ಅಕ್ಷಯ್‌ ಕುಮಾರ್ ಒಟ್ಟಾಗಿ ಸೇರುತ್ತಿರುವ ಚಿತ್ರ

ಅಂದಹಾಗೆ ಕರಣ್ ಜೋಹತ್ ಮತ್ತು ಅಕ್ಷಯ್ ಕುಮಾರ್ ಇದೇ ಮೊದಲ ಬಾರಿಗೆ ಒಟ್ಟಾಗಿ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. ಸಲ್ಮಾನ್ ಮತ್ತು ಅಕ್ಷಯ್ ಕುಮಾರ್, ಜಾನೇಮನ್ ಮತ್ತು ಮುಜ್ಸೆ ಶಾದಿ ಕರೋಗೆ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

English summary
Bollywood star Akshay Kumar, who is being cast as the lead in Karan Johar and Salman Khans co production, hopes the project is going to be a 'very good one'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada