»   » ಮತ್ತೆ ಒಂದಾದ ಸಲ್ಮಾನ್ ಖಾನ್ ಮತ್ತು ಮಾಜಿ ಪ್ರಿಯತಮೆ!

ಮತ್ತೆ ಒಂದಾದ ಸಲ್ಮಾನ್ ಖಾನ್ ಮತ್ತು ಮಾಜಿ ಪ್ರಿಯತಮೆ!

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಬಾರ್ಬಿ ಡಾಲ್ ಕತ್ರಿನಾ ಕೈಫ್ ಇಬ್ಬರು ಮಾಜಿ ಪ್ರೇಮಿಗಳು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಹಾ.. ನೆನಪಿರಲಿ ಕತ್ರಿನಾ ಕೈಫ್ ರಣಬೀರ್ ಕಪೂರ್'ಗೂ ಮಾಜಿ ಪ್ರಿಯತಮೆ.

ಅಂದಹಾಗೆ ಹಾಟ್ ಬ್ಯೂಟಿ ಕತ್ರಿನಾ ಕೈಫ್ ಇತ್ತೀಚೆಗೆ ರಣಬೀರ್ ಕಪೂರ್ ಜೊತೆ ಓಡಾಡಿಕೊಂಡಿರುವುದನ್ನು ಬಿಟ್ಟಿದ್ದರು. 'ಜಗ್ಗ ಜಾಸೂಸ್' ಸಿನಿಮಾ ಪ್ರಮೋಶನ್ ವೇಳೆ ಸಲ್ಮಾನ್ ಖಾನ್ ಸಹಾಯ ಕೇಳಿದ್ದ ಕತ್ರಿನಾ 'ಮಾಜಿ ಪ್ರೇಮಿಗಳು ಸಹ ಉತ್ತಮ ಫ್ರೆಂಡ್ಸ್ ಆಗಿ ಇರಬಹುದು' ಎಂಬುದನ್ನು ತೋರಿಸಿಕೊಟ್ಟಿದ್ದರು. ಇದೇ ಜೋಡಿ ಈಗ ಹಲವು ವರ್ಷಗಳ ನಂತರ ಒಂದಾಗಿದೆ.[ಹಳೆ ಬಾಯ್‌ಫ್ರೆಂಡ್ ಸಹಾಯ ಕೇಳಿದ ಕತ್ರಿನಾ ಕೈಫ್]

ಮತ್ತೆ ಒಂದಾದ ಮಾಜಿ ಪ್ರೇಮಿಗಳು

ಮಾಜಿ ಪ್ರೇಮಿಗಳಾದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಹಲವು ವರ್ಷಗಳ ನಂತರ ಈಗ ಒಂದಾಗಿದ್ದು, ಮತ್ತೊಮ್ಮೆ ದೊಡ್ಡ ಪರದೆ ಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಲು ಸಿದ್ಧರಾಗಿದ್ದಾರೆ.

ಮೋಡಿ ಮಾಡಲಿದೆ ಸಲ್ಲು ಮತ್ತು ಕತ್ರಿನಾ ಜೋಡಿ

ಹಾಗಂತ ಪ್ರೀತಿಗೆ ಬ್ರೇಕ್ ಹಾಕಿದ್ದ ಮಾಜಿ ಪ್ರೇಮಿಗಳು, ಮತ್ತೆ ಲವ್ ಬರ್ಡ್ಸ್ ಆಗಿದ್ದಾರೆ ಅಂತ ತಿಳಿದುಕೊಳ್ಳಬೇಡಿ. ಯಾಕಂದ್ರೆ ಬಾಲಿವುಡ್ 'ಸುಲ್ತಾನ್' ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಒಂದಾಗಿರುವುದು 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಮಾತ್ರ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿ ಆಗಿ ಕತ್ರಿನಾ ಬಣ್ಣ ಹಚ್ಚಿದ್ದಾರೆ.

ಒಂದಾದ ಜೋಡಿಯ ಫಸ್ಟ್ ಲುಕ್ ಹೇಗಿದೆ ನೋಡಿ..

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಟೈಗರ್ ಜಿಂದಾ ಹೈ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಇದನ್ನು ಸ್ವತಃ ಸಲ್ಲು " ಬ್ಯಾಕ್ ಟುಗೆದರ್, ಇನ್ 'ಟೈಗರ್ ಜಿಂದಾ ಹೈ' " ಎಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಬ್ಯೂಟಿಫುಲ್ ಫಸ್ಟ್ ಲುಕ್ ಹೇಗಿದೆ ನೀವೆ ನೋಡಿ...

4 ವರ್ಷಗಳ ನಂತರ ತೆರೆಮೇಲೆ ಒಂದಾದ ಮಾಜಿ ಪ್ರೇಮಿಗಳು

ಅಂದಹಾಗೆ ನಾಲ್ಕು ವರ್ಷಗಳ ನಂತರ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಈ ಜೋಡಿ, 2012 ರಲ್ಲಿ ಬಿಡುಗಡೆ ಆದ 'ಏಕ್ ಥಾ ಟೈಗರ್' ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಹೆಚ್ಚು ಸದ್ದು ಮಾಡಿತ್ತು. ತದನಂತರ ಯಾವುದೇ ಸಿನಿಮಾದಲ್ಲಿ, ಕಾರ್ಯಕ್ರಮದಲ್ಲಿ ಜೊತೆಯಲ್ಲಿ ಕಾಣಿಸಿಕೊಳ್ಳದ ಸಲ್ಲು ಮತ್ತು ಕತ್ರಿನಾ ಈಗ ಮೊತ್ತೊಮ್ಮೆ ತಮ್ಮ ಕೆಮಿಸ್ಟ್ರಿಯನ್ನು 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ತೋರಿಸಲಿದ್ದಾರೆ.

'ಏಕ್ ಥಾ ಟೈಗರ್' ಮುಂದುವರಿದ ಭಾಗ

ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಟೈಗರ್ ಜಿಂದಾ ಹೈ' ಸಿನಿಮಾ, 2012 ರಲ್ಲಿ ಬಿಡುಗಡೆ ಆಗಿದ್ದ ಸಲ್ಮಾನ್ ಖಾನ್ ಅಭಿಯನದ 'ಏಕ್ ಥಾ ಟೈಗರ್' ಚಿತ್ರದ ಮುಂದುವರೆದ ಭಾಗವಾಗಿದೆ ಎಂದು ಹೇಳಲಾಗಿದೆ. ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶನ ಮಾಡಿದ್ದರು.

'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಸುದೀಪ್

ಅಂದಹಾಗೆ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಗೆ 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಅಭಿನಯಿಸಲು ಆಫರ್ ಬಂದಿದೆ ಎಂದು ನಾವೇ ಇತ್ತೀಚೆಗೆ ಹೇಳಿದ್ವಿ. ಆದರೆ ಸುದೀಪ್ ಅಭಿನಯಿಸುತ್ತಾರಾ? ಇಲ್ಲವಾ? ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.[ಸಲ್ಮಾನ್ ಖಾನ್ ಚಿತ್ರದಲ್ಲಿ ಸುದೀಪ್ ವಿಲನ್! ಸಾಕ್ಷಿ ಇಲ್ಲಿದೆ]

English summary
Salman Khan and Katrina Kaif are all set to recreate magic on the big screen with 'Tiger Zinda Hai' Film. Here is the First look of Salman Khan and Katrina Kaif from the set of 'Tiger Zinda Hai',
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada