»   » ಸಲ್ಮಾನ್ ಖಾನ್ ಚಿತ್ರದಲ್ಲಿ ಸುದೀಪ್ ವಿಲನ್! ಸಾಕ್ಷಿ ಇಲ್ಲಿದೆ

ಸಲ್ಮಾನ್ ಖಾನ್ ಚಿತ್ರದಲ್ಲಿ ಸುದೀಪ್ ವಿಲನ್! ಸಾಕ್ಷಿ ಇಲ್ಲಿದೆ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಹೈ ವೋಲ್ಟೇಜ್ ಸ್ಟಾರ್. ಅದೇ ರೀತಿ ಪರಭಾಷಿಗರಿಗೂ ಕಿಚ್ಚನ ಪವರ್ ಏನೂ ಎಂಬುದು ಗೊತ್ತಿದೆ. ಹಾಗಾಗಿನೇ ಸುದೀಪ್ ಅವರಿಗೆ ಪರಭಾಷೆಗಳಿಂದ ಆಫರ್ ಗಳು ಬರ್ತಾನೆ ಇರುತ್ತೆ. ಈಗ ಲೇಟೆಸ್ಟ್ ಏನಪ್ಪಾ ಅಂದ್ರೆ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಚಿತ್ರದಲ್ಲಿ ಅಭಿನಯಿಸಲು ಕಿಚ್ಚನಿಗೆ ಆಫರ್ ಬಂದಿದೆಯಂತೆ.[ಸ್ಯಾಂಡಲ್ ವುಡ್ ನ 'ಆಲ್ ಟೈಮ್ ರೆಕಾರ್ಡ್' ಉಡೀಸ್ ಮಾಡಿದ 'ಹೆಬ್ಬುಲಿ']

ಸಲ್ಲು ಅಭಿನಯಿಸುತ್ತಿರುವ ಹೊಸ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ಕಿಚ್ಚ ಸುದೀಪ್ ಅವರನ್ನ ಕರೆತರುವ ಯೋಚನೆ ಮಾಡಿದ್ದಾರಂತೆ ಬಾಲಿವುಡ್ ನಿರ್ಮಾಪಕರು. ಈಗ ಈ ಸುದ್ದಿ ಗಾಂಧಿನಗರದಲ್ಲಿ ಸುಂಟರಗಾಳಿಯಂತೆ ಹರಿದಾಡುತ್ತಿದ್ದು, ಇದು ನಿಜನಾ ಅಥವಾ ಗಾಳಿ ಸುದ್ದಿನಾ ಅಂತ ತಲೆಕೆಡಸಿಕೊಂಡಿದ್ದಾರೆ. ಈ ಬಗ್ಗೆ ನಿಮಗೊಂದು ಸಾಕ್ಷಿ ನಾವ್ ಕೊಡ್ತಿವಿ.

ಅಷ್ಟಕ್ಕೂ, ಸಲ್ಮಾನ್ ಖಾನ್ ಅಭಿನಯದ ಯಾವ ಚಿತ್ರಕ್ಕೆ ಕಿಚ್ಚನಿಗೆ ಆಫರ್ ಮಾಡಲಾಗಿದೆ. ಮತ್ತು ಯಾವ ಪಾತ್ರಕ್ಕೆ ಎಂಬುದನ್ನ ಮುಂದೆ ಓದಿ.....

ಸಲ್ಲು ಚಿತ್ರದಲ್ಲಿ ಸುದೀಪ್!

ಮೂಲಗಳ ಪ್ರಕಾರ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಹೊಸ ಸಿನಿಮಾದಲ್ಲಿ, ಕಿಚ್ಚ ಸುದೀಪ್ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರಂತೆ.

ಯಾವ ಚಿತ್ರಕ್ಕೆ ಆಫರ್!

ಅಂದ್ಹಾಗೆ, ಸುದೀಪ್ ಗೆ ಆಫರ್ ಬಂದಿರುವುದು ಸಲ್ಲು ಅಭಿನಯಿಸುತ್ತಿರುವ 'ಟೈಗರ್ ಜಿಂದಾ ಹೈ' ಚಿತ್ರಕ್ಕೆ. ಈ ಚಿತ್ರವನ್ನ ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡುತ್ತಿದ್ದು, ಸಲ್ಲುಗೆ ಕತ್ರಿನಾ ಕೈಫ್ ನಾಯಕಿಯಾಗಿದ್ದಾರೆ.[ಸಲ್ಮಾನ್ ವಿರುದ್ಧದ ಪ್ರಕರಣ ಖುಲಾಸೆ: ನಿರ್ಮಾಪಕರು ರಿಲೀಫ್]

ವಿಲನ್ ಪಾತ್ರದಲ್ಲಿ ಸುದೀಪ್!

ಈ ಚಿತ್ರದಲ್ಲಿ ಸುದೀಪ್ ಪಾಕಿಸ್ತಾನದ 'ಐಎಸ್'ಐ ಏಜೆಂಟ್' ಅಂತೆ. ಅಂದ್ರೆ, ಚಿತ್ರದಲ್ಲಿ ವಿಲನ್ ಪಾತ್ರ. ಕಿಚ್ಚನ ಜೊತೆಯಲ್ಲಿ ಕತ್ರಿನಾ ಕೈಫ್ ಕೂಡ ಪಾಕಿಸ್ತಾನದ 'ಐಎಸ್'ಐ ಏಜೆಂಟ್' ಆಗಿ ಬಣ್ಣ ಹಚ್ಚಲಿದ್ದಾರಂತೆ.

ವಿಕಿಪೀಡಿಯ ಈ ಸುದ್ದಿಯನ್ನ ನಿಜ ಅಂತಿದೆ!

ಇನ್ನೂ ಸಲ್ಮಾನ್ ಖಾನ್ ಅವರ 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ ಎನ್ನುವುದಕ್ಕೆ ಆ ಚಿತ್ರದ ವಿಕಿಪೀಡಿಯ ಸಾಕ್ಷಿಯಾಗಿದೆ. ಯಾಕಂದ್ರೆ, ವಿಕಿಪೀಡಿಯದಲ್ಲಿ ಸುದೀಪ್ ಅವರ ಹೆಸರು ಮತ್ತು ಪಾತ್ರವೇನು ಎಂಬುದು ಪ್ರಕಟವಾಗಿದೆ.

ಸುದೀಪ್ ಕಡೆಯಿಂದ ಸ್ವಷ್ಟನೆ ಇಲ್ಲ!

ಸಲ್ಲು ಜೊತೆ ಅಭಿನಯಿಸುತ್ತಿರುವ ಕುರಿತು ಕಿಚ್ಚ ಸುದೀಪ್ ಎಲ್ಲಿಯೂ ಹೇಳಿಕೊಂಡಿಲ್ಲ. ಹಾಗಾಗಿ, ಇದು ಅಂತೆ-ಕಂತೆ ಇರಬಹುದು ಎಂಬ ಸುದ್ದಿಗಳು ಕೂಡ ಕೇಳಿ ಬರುತ್ತಿದೆ. ಅದಕ್ಕೆ ಕಿಚ್ಚ ಸುದೀಪ್ ಅವರೇ ಕ್ಲಾರಿಟಿ ಕೊಡಬೇಕಿದೆ.

ಸಲ್ಲು-ಕಿಚ್ಚ ಉತ್ತಮ ಸ್ನೇಹಿತರು!

ಸಲ್ಮಾನ್ ಖಾನ್ ಮತ್ತು ಸುದೀಪ್ ಮಧ್ಯೆ ಉತ್ತಮ ಸಂಬಂಧವಿದೆ. ಹಿಂದಿಯಲ್ಲಿ ಬಿಗ್ ಬಾಸ್ ನಡೆಸಿಕೊಡುವ ಸಲ್ಲು, ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋಗೆ ಸುದೀಪ್ ಅವರು ಸೂಕ್ತವೆಂದು ಹೇಳಿದ್ದರಂತೆ. ಅಷ್ಟೇ ಅಲ್ಲದೇ, ಇವರಿಬ್ಬರ ಗೆಳೆತನ ವರ್ಷಗಳದ್ದು. ಹೀಗಾಗಿ, ಸಲ್ಮಾನ್ ಗಾಗಿ ಸುದೀಪ್ ಈ ಸಿನಿಮಾ ಒಪ್ಪಿಕೊಳ್ಳುತ್ತಾರಾ ಎಂದು ಕುತೂಹಲ ಮೂಡಿಸಿದೆ.

ಬಾಲಿವುಡ್ ನಲ್ಲಿ ಸುದೀಪ್!

ಸುದೀಪ್ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಆಫರ್ ಪಡೆದುಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯೇ ರಾಮ್ ಗೋಪಾಲ್ ವರ್ಮ ನಿರ್ದೇಶನದ 'ಫೋಂಕ್' ಮತ್ತು 'ರಣ್' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆ ತೆರೆಹಂಚಿಕೊಂಡು ಭೇಷ್ ಎನಿಸಿಕೊಂಡಿದ್ದಾರೆ.

'ಹೆಬ್ಬುಲಿ' ಬೇಟೆ!

ಸದ್ಯ, ರಾಜ್ಯಾದ್ಯಂತ ಸುದೀಪ್ ಅಭಿನಯದ 'ಹೆಬ್ಬುಲಿ' ಬೇಟೆಯಾಡುತ್ತಿದೆ. 20 ದಿನಗಳನ್ನ ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗುತ್ತಿರುವ 'ಹೆಬ್ಬುಲಿ' ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿದೆ. ಈ ಮಧ್ಯೆ ಸಲ್ಲು ಚಿತ್ರದಲ್ಲಿ ಅಭಿನಯಿಸುವ ಆಫರ್ ಸುದ್ದಿ ಕೇಳಿ ಬಂದಿರುವುದು ಕುತೂಹಲ ಮೂಡಿಸಿದೆ.

English summary
As per latest reports that is coming in, Sudeep has been offered a role against Salman Khan in Salman Khan’s upcoming movie named Tiger Zinda Hai. Sudeep had not yet accepted the offer and more details about this report is expected to come soon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada