For Quick Alerts
  ALLOW NOTIFICATIONS  
  For Daily Alerts

  ಹಳೆ ಬಾಯ್‌ಫ್ರೆಂಡ್ ಸಹಾಯ ಕೇಳಿದ ಕತ್ರಿನಾ ಕೈಫ್

  By Suneel
  |

  ಕತ್ರಿನಾ ಕೈಫ್‌ ಮತ್ತು ಸಲ್ಮಾನ್‌ ಖಾನ್ ಇಬ್ಬರು, 'ಮಾಜಿ ಪ್ರೇಮಿಗಳು ಸಹ ಉತ್ತಮ ಫ್ರೆಂಡ್ಸ್‌ ಆಗಿ ಇರಬಹುದು' ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಅಂದಹಾಗೆ ಇದೆಲ್ಲಾ ಸಾಧ್ಯವಾಗಿರುವುದು ಹ್ಯಾಂಡ್ಸಮ್ ಹಂಕ್ ರಣಬೀರ್ ಕಪೂರ್ ಜೊತೆ ಓಡಾಡಿಕೊಂಡಿರುವುದನ್ನು ಕತ್ರಿನಾ ಕೈಫ್‌ ಬಿಟ್ಟ ನಂತರ.

  ಸದ್ಯಕ್ಕೆ ರಣಬೀರ್ ಕಪೂರ್ ನಿಂದ ದೂರವಿರುವ ಕತ್ರಿನಾ ಕೈಫ್‌, ಸಲ್ಮಾನ್‌ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಅಷ್ಟೇ ಅಲ್ಲದೇ ತನ್ನ ಮತ್ತು ರಣಬೀರ್ ಕಪೂರ್ ನಡುವೆ 'ಜಗ್ಗ ಜಾಸೂಸ್' ಸಿನಿಮಾ ಪ್ರಮೋಶನ್ ಸಂದರ್ಭದಲ್ಲಿ ಆಗಬಹುದಾದ ಎಡವಟ್ಟುಗಳನ್ನು ತಪ್ಪಿಸುವುದು ಹೇಗೆ ಎಂದು ಸಲ್ಮಾನ್‌ ಖಾನ್‌ ರಿಂದ ಟಿಪ್ಸ್ ಪಡೆಯುತ್ತಿದ್ದಾರಂತೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ಓದಿರಿ.[ನಕಲಿ ಅಶ್ಲೀಲ ವಿಡಿಯೋದಲ್ಲಿ ಸಲ್ಲು ಮತ್ತು ಕತ್ರಿನಾ]

  ರಣಬೀರ್ ಬಗ್ಗೆ ಕತ್ರಿನಾ ಸಲ್ಮಾನ್‌ ಖಾನ್‌ ರಿಂದ ಸಲಹೆ ಕೇಳಿದ್ದಾರೆ

  ರಣಬೀರ್ ಬಗ್ಗೆ ಕತ್ರಿನಾ ಸಲ್ಮಾನ್‌ ಖಾನ್‌ ರಿಂದ ಸಲಹೆ ಕೇಳಿದ್ದಾರೆ

  ಇತ್ತೀಚಿನ ಬಾಲಿವುಡ್ ಲೈಫ್‌ ಪ್ರಕಾರ "ಕತ್ರಿನಾ ಕೈಫ್ ತಮ್ಮ ಮುಂಬರುವ 'ಜಗ್ಗ ಜಾಸೂಸ್' ಸಿನಿಮಾ ಪ್ರಮೋಶನ್‌ ಗೆ ಹೇಗೆ ಹೋಗಬೇಕು ಎಂದು ಸಲ್ಮಾನ್ ರಿಂದ ಪಾಠ ಕಲಿಯುತ್ತಿದ್ದಾರಂತೆ. ಕಾರಣ 'ಜಗ್ಗ ಜಾಸೂಸ್' ಸಿನಿಮಾ ಪ್ರಮೋಶನ್‌ ಗೆ ಹೋಗುವ ವೇಳೆ ರಣಬೀರ್ ಕಪೂರ್ ಸಹ ಬರುವುದರಿಂದ ಸ್ವಲ್ಪ ಭಯ ಇದೆ ಅಂತೆ".[ಐಶ್ವರ್ಯ ರೈಗಿಂತಲೂ ಸುಂದರಿ ಕತ್ರಿನಾ ಕೈಫ್!]

  ಕತ್ರಿನಾ, ರಣಬೀರ್ ಜೊತೆಗಿನ ಸಂಬಂಧಗಳ ಪ್ರಶ್ನೆಗಳನ್ನು ತಪ್ಪಿಸಬೇಕಂತೆ..!

  ಕತ್ರಿನಾ, ರಣಬೀರ್ ಜೊತೆಗಿನ ಸಂಬಂಧಗಳ ಪ್ರಶ್ನೆಗಳನ್ನು ತಪ್ಪಿಸಬೇಕಂತೆ..!

  ಅಂದಹಾಗೆ ಬಾಲಿವುಡ್ ನಲ್ಲಿ ಕೇಳಿಬರುತ್ತಿರುವ ಮಾಹಿತಿಗಳ ಪ್ರಕಾರ, ಕತ್ರಿನಾ ಕೈಫ್ 'ಜಗ್ಗ ಜಾಸೂಸ್' ಸಿನಿಮಾ ಪ್ರಮೋಶನ್ ವೇಳೆ ಯಾರು ಸಹ ರಣಬೀರ್ ಕಪೂರ್ ನೊಂದಿಗಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳದಂತೆ ತಪ್ಪಿಸ ಬೇಕಂತೆ. ಪ್ರಮೋಶನ್ ವೇಳೆ ಕೇವಲ ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕಂತೆ.[ಸಲ್ಲೂ, ಕತ್ರೀನಾ ವಿವಾಹ; ಸಾಮ್ನಾದಲ್ಲಿ ವರದಿ!]

  ಸಲ್ಮಾನ್ ಖಾನ್ ರಿಂದ ಸಹಾಯ ಪಡೆದ ಕತ್ರಿನಾ ಕೈಫ್

  ಸಲ್ಮಾನ್ ಖಾನ್ ರಿಂದ ಸಹಾಯ ಪಡೆದ ಕತ್ರಿನಾ ಕೈಫ್

  ಲೀಡಿಂಗ್ ಡೈಲಿ ಪ್ರಕಾರ, " ಕತ್ರಿನಾ ಮತ್ತು ಸಲ್ಮಾನ್‌ ಖಾನ್ 'ಟೈಗರ್ ಜಿಂದಾ ಹೈ' ಹೊಸ ಪ್ರಾಜೆಕ್ಟ್ ವರ್ಕ್‌ ಶಾಪ್ ಮೀಟಿಂಗ್ ಅನ್ನು ಆರಂಭಿಸಿದ್ದಾರೆ. ಆದ್ದರಿಂದ ಉತ್ತಮ ಪ್ರಾಜೆಕ್ಟ್‌ ಆಯ್ಕೆಗಾಗಿ ಕತ್ರಿನಾಗೆ ಸಲ್ಮಾನ್‌ ಸಹಾಯ ಮಾಡುತ್ತಿದ್ದಾರೆ. ಮೂರು ನಿರ್ದೇಶಕರು ಕತ್ರಿನಾ ರನ್ನು ಅಪ್ರೋಚ್ ಮಾಡಿದ್ದರು. ಆದರೆ ಕತ್ರಿನಾ ಸಲ್ಮಾನ್ ಸ್ಕ್ರಿಪ್ಟ್ ಗಳಿಗೆ ಚಾಲನೆ ನೀಡುತ್ತಿದ್ದಾರೆ".

  ಸಲ್ಮಾನ್‌ ಖಾನ್ ಭೇಟಿಗೆ 'ಟ್ಯೂಬ್‌ಲೈಟ್ ಸೆಟ್‌'ಗೆ ಕತ್ರಿನಾ

  ಸಲ್ಮಾನ್‌ ಖಾನ್ ಭೇಟಿಗೆ 'ಟ್ಯೂಬ್‌ಲೈಟ್ ಸೆಟ್‌'ಗೆ ಕತ್ರಿನಾ

  "ಫಿಲ್ಮ್ ಸಿಟಿಯಲ್ಲಿನ ಟ್ಯೂಬ್‌ಲೈಟ್‌ ಸೆಟ್‌ಗೆ ಸಲ್ಮಾನ್‌ ಖಾನ್‌ ಮೀಟ್‌ ಮಾಡಲು ಕತ್ರಿನಾ ಕೈಫ್‌ ಭೇಟಿ ನೀಡಿದ್ದರು. ಈ ವೇಳೆ ಈ ಮೂವರ ನಡುವಿನ ಮಾಹಿತಿ ಅಂತೂ ಬ್ಲಾಸ್ಟ್‌ ಆಗಿದೆ", ಎಂದು ಬಾಲಿವುಡ್ ವರದಿಗಳು ಹೇಳಿವೆ.

  ಕತ್ರಿನಾ ಮತ್ತು ರಣಬೀರ್ ಕಾಂಬಿನೇಷನ್‌ನಲ್ಲಿ 'ಜಗ್ಗ ಜಾಸೂಸ್'

  ಕತ್ರಿನಾ ಮತ್ತು ರಣಬೀರ್ ಕಾಂಬಿನೇಷನ್‌ನಲ್ಲಿ 'ಜಗ್ಗ ಜಾಸೂಸ್'

  ಸಿನಿ ಪ್ರಿಯರು ಹಲವು ದಿನಗಳಿಂದ ನಿರೀಕ್ಷಿಸುತ್ತಿರುವ ರಣಬೀರ್ ಹಾಗೂ ಕತ್ರಿನಾ ಕೈಫ್ ನಟನೆಯ 'ಜಗ್ಗ ಜಾಸೂಸ್' ಚಿತ್ರಕ್ಕೆ ಅನುರಾಗ್ ಬಸು ಆಕ್ಷನ್ ಕಟ್ ಹೇಳಿದ್ದು, ಸಿದ್ಧಾರ್ಥ್ ರಾಯ್ ಕಪೂರ್, ರಣಬೀರ್ ಕಪೂರ್ ಮತ್ತು ಅನುರಾಗ್ ಬಸು ಬಂಡವಾಳ ಹೂಡಿದ್ದಾರೆ. ಪ್ರೀತಂ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಈಗ ಇದೇ ಚಿತ್ರದ ಪ್ರಮೋಶನ್‌ ಗೆ ಕತ್ರಿನಾ ರಣಬೀರ್ ಜೊತೆ ಹೋಗಬೇಕಿದೆ. ಆದ್ದರಿಂದ ಸಲ್ಮಾನ್‌ ಖಾನ್‌ ರಿಂದ ಎಡವಟ್ಟುಗಳನ್ನು ತಪ್ಪಿಸಲು ಸಲಹೆ ಕೇಳಿದ್ದಾರೆ ಕತ್ರಿನಾ ಎಂದು ಬಾಲಿವುಡ್ ಲೈಫ್ ಪ್ರಕಾರ ತಿಳಿಯಲಾಗಿದೆ.

  English summary
  After her break up with Ranbir Kapoor, Katrina Kaif is taking advice from Salman Khan about Jagga Jasoos promotions. The actress is apparently ‘dreading' the film promotions because she will be seen with Ranbir Kapoor, her ex-flame.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X