ಸೀರೆ ಧರಿಸಿ ಚಲಿಸುತ್ತಿದ್ದ ರೈಲಿನಿಂದ ಹಾರಿದ ನಟಿ; ಮೈ ತುಂಬಾ ಗಾಯ.. ಆಸ್ಪತ್ರೆಗೆ ದಾಖಲು
ಸಿನಿಮಾ ತಾರೆಯರೇ ಹಾಗೆ ಏನಾದರೂ ಒಂದು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ. ಶೂಟಿಂಗ್ ಸಮಯದಲ್ಲಿ ಪೆಟ್ಟು ಮಾಡಿಕೊಳ್ಳುತ್ತಾರೆ. ವರ್ಕ್‌ಔಟ್ ಮಾಡುವಾಗ, ಟ್ರಾವೆಲ್ ಮಾಡುವಾಗ ಹೀಗೆ ಒಂದಲ್ಲ ಒಂದು ಘಟನೆ ನಡೆಯುತ್ತಲೇ ಇರುತ್ತೆ. ಆದರೆ, ಈ ಬಾಲಿವುಡ್ ನಟಿ ಮುಂಬೈನ ರೈಲಿನಿಂದ ಜಿಗಿದು ಪೆಟ್ಟು ಮಾಡಿಕೊಂಡಿದ್ದಾರೆ. ಮೈ ತುಂಬಾ ಗಾಯಗಳನ್ನು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.
ಹಿಂದಿ ಕಿರುತೆರೆ ಹಾಗೂ ಬಾಲಿವುಡ್‌ನ ಉದಯೋನ್ಮುಖ ನಟಿ ಕರಿಷ್ಮಾ ಶರ್ಮಾ ರೈಲಿನಿಂದ ಹಾರುವ ದುಸ್ಸಾಹಸಕ್ಕೆ ಕೈ ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ. ನಟಿ ಕರಿಷ್ಮಾ ಶರ್ಮಾ ಮುಂಬೈನ ಲೋಕಲ್ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ, ಏಕಾಏಕಿ ಚಲಿಸುತ್ತಿರುವ ರೈಲಿನಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಆಘಾತಕಾರಿ ಘಟನೆಯ ಅವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಟಿ ಕರಿಷ್ಮಾ ಶರ್ಮಾ 'ರಾಗಿಣಿ ಎಂಎಂಎಸ್', 'ಉಜಡಾ ಚಮನ್', 'ಹಮ್' ಮತ್ತು 'ಪ್ಯಾರ್ ಕಾ ಪಂಚನಾಮ'ದಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೇ ಹಿಂದಿ ಕಿರಿತೆರೆಯಲ್ಲೂ ಫೇಮಸ್. 'ಪವಿತ್ರಾ ರಿಶ್ತಾ' ಎಂಬ ಜನಪ್ರಿಯಾ ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಷ್ಟಕ್ಕೂ ಈ ನಟಿ ರೈಲಿನಿಂದ ಜಿಗಿದಿದ್ದು ಯಾಕೆ? ಏನಿದು ಘಟನೆ ಅಂತ ನೋಡುವುದಾರೇ,
ಬಾಲಿವುಡ್ ನಟಿ ಕರಿಷ್ಮಾ ಶರ್ಮಾ ಮುಂಬೈನ ಚರ್ಚ್‌ಗೇಟ್‌ಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯ ಬಗ್ಗೆ ಸ್ವತ: ಕರಿಷ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಟಿ ತೀವ್ರ ಗಾಯಗೊಂಡಿರುವ ಸುದ್ದಿ ತಿಳಿದು ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಸದ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರಿಷ್ಮಾ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವಂತೆ, "ನಿನ್ನೆ, ಶೂಟಿಂಗ್‌ಗೆ ತೆರಳುವುದಕ್ಕೆಂದು ಚರ್ಚ್‌ಗೇಟ್‌ಗೆ ರೈಲಿನಲ್ಲಿ ಹೋಗುತ್ತಿದೆ. ನಾನು ಸೀರೆ ಧರಿಸಿ ರೈಲು ಹತ್ತಲು ಮುಂದಾಗಿದ್ದೆ. ನಾನು ರೈಲು ಹತ್ತುತ್ತಿದ್ದಂತೆ, ವೇಗ ಹೆಚ್ಚಾಗುವುದಕ್ಕೆ ಶುರುವಾಗಿತ್ತು. ಹಿಂತಿರುಗಿ ನೋಡಿದಾಗ ನನ್ನ ಸ್ನೇಹಿತರು ಹಿಂದೆ ಉಳಿದಿದ್ದರು. ಅದನ್ನು ನೋಡಿ ನಾನು ಭಯದಿಂದ ರೈಲಿನಿಂದ ಹಾರಿದೆ. ಪರಿಣಾಮ ಬೆನ್ನು ಕೆಳಗಾಗಿ ಬಿದ್ದೆ. ಇದರಿಂದ ನನ್ನ ತಲೆಗೆ ಬಲವಾಗಿ ಪೆಟ್ಟಾಯಿತು" ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.
ಹಾಗೇ ತಮ್ಮ ಆರೋಗ್ಯ ಸ್ಥಿತಿ ಹೇಗಿದೆ ಎಂದೂ ವಿವರಿಸಿದ್ದಾರೆ. "ನನ್ನ ಬೆನ್ನಿಗೆ ಪೆಟ್ಟಾಗಿದೆ. ತಲೆ ಊದಿಕೊಂಡಿದೆ. ಮೈ ತುಂಬಾ ಗಾಯಗಳಾಗಿವೆ. ವೈದ್ಯರು ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸುವುದಕ್ಕೆ ಹೇಳಿದ್ದಾರೆ. ತಲೆಗೆ ಗಂಭೀರ ಗಾಯಗಳಾಗಿದೆಯೇ ಎಂದು ತಿಳಿದುಕೊಳ್ಳಲು ನನ್ನನ್ನು ಒಂದು ದಿನ ಆಸ್ಪತ್ರೆಯಲ್ಲಿ ಇರಿಸಿದ್ದಾರೆ. ನಿನ್ನೆಯಿಂದಲೂ ನನಗೆ ಸಿಕ್ಕಾಪಟ್ಟೆ ನೋವಿದ್ದರೂ,ಧೈರ್ಯದಿಂದ ಇದ್ದೇನೆ. ನಾನು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದಯವಿಟ್ಟು ಪ್ರಾರ್ಥಿಸಿ" ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಕರಿಷ್ಮಾ ಶರ್ಮಾ ಸ್ನೇಹಿತ ಆಸ್ಪತ್ರೆಗೆ ತೆರಳಿ ಅವರ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದಾರೆ. ಫೋಟೊವನ್ನು ಹಂಚಿಕೊಂಡು " ಇಂತಹದ್ದೊಂದು ಘಟನೆ ನಡೆದಿದೆ ಎಂದು ನಂಬುವುದಕ್ಕೇ ಆಗುತ್ತಿಲ್ಲ. ನನ್ನ ಸ್ನೇಹಿತೆ ರೈಲಿನಿಂದ ಬಿದ್ದುಬಿಟ್ಟಳು. ನೆಲದ ಮೇಲೆ ಬಿದ್ದಿದ್ದವಳನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ವೈದ್ಯರು ಇನ್ನೂ ಆಕೆಗೆ ಆಗಿರುವ ಗಾಯಗಳ ತೀವ್ರತೆಯನ್ನು ತಿಳಿದುಕೊಳ್ಳುತ್ತಿದ್ದಾರೆ" ಎಂದು ಬರೆದು ಕೊಂಡಿದ್ದಾರೆ.


Click it and Unblock the Notifications











