Hema Malini: 75ನೇ ವಯಸ್ಸಿನಲ್ಲೂ ಡ್ರೀಮ್ ಗರ್ಲ್ ಸೌಂದರ್ಯಕ್ಕೆ ಸರಿಸಾಟಿ ಯಾರು? ಹೇಮಾ ಮಾಲಿನಿ ಬ್ಯೂಟಿಯ ಗುಟ್ಟೇನು?

ಹೇಮಾ ಮಾಲಿನಿ ಇಂದಿಗೂ ಸಿನಿಪ್ರಿಯರ ಡ್ರೀಮ್ ಗರ್ಲ್. 70ರ ದಶಕದಿಂದಲೂ ಹೇಮಾ ಮಾಲಿನಿ ಅಭಿಮಾನಿಗಳನ್ನು ಸೆಳೆಯುತ್ತಲೇ ಇದ್ದಾರೆ. ಆಪ್‌ ಸ್ಕ್ರೀನ್ ಹಾಗೂ ಆನ್‌ ಸ್ಕ್ರೀನ್ ಎರಡರಲ್ಲೂ ಹೇಮಾ ಮಾಲಿನಿ ಮಿಂಚಿದ್ದರು. ಈ ನಟಿಯ ಸೌಂದರ್ಯಕ್ಕೆ ಮರುಳಾಗಿದ್ದರು.

ಹೇಮಾ ಮಾಲಿನಿ ಇಂದು (ಅಕ್ಟೋಬರ್ 16) 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈಗಲೂ ಬಾಲಿವುಡ್‌ ಡ್ರೀಮ್ ಗರ್ಲ್ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಯಶಸ್ಸು ಕಂಡಿರುವ ನಟಿ 75ನೇ ವಯಸ್ಸಿನಲ್ಲೂ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.

hema-malini-fitness-secret

75ನೇ ವಯಸ್ಸಿನಲ್ಲೂ ತನ್ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿರೋ ಹೇಮಾ ಮಾಲಿನಿ ಸೌಂದರ್ಯದ ಗುಟ್ಟನ್ನು ಭೇದಿಸಲು ಪ್ರಯತ್ನಿಸಿದ್ದಾರೆ. ಹೇಮಾ ಮಾಲಿನಿ ಸ್ವೀಕರಿಸೋ ಆಹಾರ, ಫಿಟ್ನೆಸ್ ಸೀಕ್ರೆಟ್ ಹೇಗಿದೆ? ಅನ್ನೋದನ್ನು ವರದಿ ಮಾಡಲಾಗಿದೆ. ಹೇಮಾ ಮಾಲಿನಿ ದೈನಂದಿನ ಚಟುವಟಿಗಳು ಹೇಗಿರುತ್ತೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

75 ವರ್ಷದ ನಟಿಯ ಬ್ಯೂಟಿಯ ಗುಟ್ಟೇನು?

ಹೇಮಾ ಮಾಲಿನಿಯ ದೈನಂದಿನ ಚಟುವಟಿಕೆಗಳು ಶಿಸ್ತು ಬದ್ಧವಾಗಿವೆ. ಕಳೆದ 20 ವರ್ಷಗಳಿಂದ ತನ್ನ ಆಹಾರ ಪದ್ಧತಿ, ಫಿಟ್ನೆಸ್ ಇವೆಲ್ಲವನ್ನೂ ಅಚ್ಚು ಕಟ್ಟಾಗಿಯೇ ಪಾಲಿಸಿಕೊಂಡು ಬಂದಿದ್ದಾರೆ. ಅದರಲ್ಲಿ ದಿನಕ್ಕೆ 2 ರಿಂದ 3 ಲೀಟರ್ ನೀರನ್ನು ಕುಡಿಯುತ್ತಾರೆ. ಹೇಮಾ ಮಾಲಿನಿ ಪ್ರಕಾರ, ನೀರು ತಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತೆ. ಹೀಗಾಗಿ ದೇಹವನ್ನು ಹೈಡ್ರೆಟ್ ಆಗಿ ಇಟ್ಟುಕೊಳ್ಳಬೇಕು ಅಂತ ಹೇಮಾ ಮಾಲಿನಿ ಸಂದರ್ಶನವೊಂದರಲ್ಲಿ ಹೇಳಿದ್ದರು.

hema-malini-fitness-secret

ಆರೋಗ್ಯಕರ ಡಯೆಟ್

ಹೇಮಾ ಮಾಲಿನಿ ಆಹಾರ ಸೇವನೆಯಲ್ಲಿ ಶಿಸ್ತನ್ನು ಪಾಲಿಸುತ್ತಾರೆ. ಮಾಂಸ ಆಹಾರವನ್ನು ತ್ಯಜಿಸಿದ್ದಾರೆ. ಹೆಚ್ಚು ತರಕಾರಿ, ಸೊಪ್ಪುಗಳನ್ನು ಸೇವನೆ ಮಾಡುತ್ತಾರೆ. ಸಂಜೆ 7.30 ರಿಂದ 8 ಗಂಟೆಯೊಳಗೆ ರಾತ್ರಿ ಊಟವನ್ನು ಮುಗಿಸುತ್ತಾರೆ. ಮಲಗುವ ಮುನ್ನ ಜೀರ್ಣಕ್ರಿಯೆ ಉತ್ತಮವಾಗಿರುತ್ತೆ. ಆಹಾರದಲ್ಲಿ ಎಣ್ಣೆ ಹಾಗೂ ಖಾರವನ್ನು ಬಳಸುವುದಿಲ್ಲ. ಗ್ರೀನ್ ಟೀ ಹೆಚ್ಚು ಕುಡಿಯುತ್ತಾರೆ. ಟೀಗೆ ಹಾಲನ್ನು ಮಿಕ್ಸ್ ಮಾಡುವುದಿಲ್ಲ. ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದು, ಅದರ ಬದಲು ಜೇನು ತುಪ್ಪವನ್ನು ಬಳಸುತ್ತಾರೆ.

ಯೋಗಾ ತಪ್ಪಿಸುವುದಿಲ್ಲ

ಬಾಲಿವುಡ್ ಲೆಜೆಂಡರಿ ಆಕ್ಟರ್ ಹೇಮಾ ಮಾಲಿನಿ ಆಹಾರ ಅಷ್ಟೇ ಅಲ್ಲ. ಫಿಟ್ನೆಸ್ ಬಗ್ಗೆನೂ ಗಮನ ಹರಿಸುತ್ತಾರೆ. ಎಲ್ಲೆ ಇದ್ದರೂ, ಯೋಗವನ್ನು ಮಾತ್ರ ಮಿಸ್ ಮಾಡುವುದಿಲ್ಲ. ಅಲ್ಲದೆ ಫಿಟ್ನೆಸ್ ಬಗ್ಗೆನೂ ಹೆಚ್ಚು ಗಮನ ಹರಿಸುತ್ತಾರೆ. ಅಲ್ಲದೆ ವಾರಕ್ಕೆ ಎರಡು ಬಾರಿ ಉಪವಾಸವನ್ನು ಕೈಗೊಳ್ಳುತ್ತಾರೆ. ಇದು ಅವರೋಗ್ಯದ ಗುಟ್ಟು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಸೌಂದರ್ಯ ವರ್ಧಕಗಳ ಬಳಕೆ ಕಡಿಮೆ

ಹೇಮಾ ಮಾಲಿನಿ ಹೆಚ್ಚು ಸೌಂದರ್ಯ ವರ್ಧಕಗಳನ್ನು ಬಳಸುವುದಿಲ್ಲ. ಕೆಮಿಕಲ್ ಯುಕ್ತ ಸೋಪು, ಚರ್ಮಕ್ಕೆ ಸಂಬಂಧಿಸಿದ ಕ್ರೀಮ್‌ಗಳನ್ನು ಬಳಸುವುದಿಲ್ಲ. ಇದರೊಂದಿಗೆ ಕೂದಲಿನ ರಕ್ಷಣೆಗೆ ಉತ್ತಮ ಗುಣ ಮಟ್ಟದ ಶಾಂಪೂ ಹಾಗೂ ಹೇರ್ ಕಂಡಿಷನರ್‌ ಅನ್ನು ಬಳಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮೈಂಡ್ ಅನ್ನು ಪಾಸಿಟಿವ್ ಆಗಿ ಇಟ್ಟುಕೊಳ್ಳಬೇಕು ಅನ್ನೋದು ಹೇಮಾ ಮಾಲಿನಿ ಪಾಲಿಸಿ.

More from Filmibeat

English summary
Bollywood legend Hema Malini revealed anti-ageing beauty secrets at the age of 75. Here is the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X