ಶ್ರೀದೇವಿ ಪತಿ ಬೋನಿ ಕಪೂರ್‌ ಹಾಗೂ ಸಹೋದರ ಅನಿಲ್ ಕಪೂರ್‌ ಸಂಬಂಧ ಸರಿಯಿಲ್ಲ; ಅದಕ್ಕೆ ಕಾರಣ ಸಲ್ಮಾನ್ ಖಾನ್

ಸಲ್ಮಾನ್ ಖಾನ್, ಅನಿಲ್ ಕಪೂರ್, ಶ್ರೀದೇವಿ ಪತಿ ಬೋನಿ ಕಪೂರ್ ಮೂವರ ಬಾಂಡಿಂಗ್ ಉತ್ತಮವಾಗಿತ್ತು. ಈ ಮೂವರು ಒಟ್ಟಿಗೆ ಸೇರಿ ಮಾಡಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದವು. ಅದರಲ್ಲೂ 'ನೋ ಎಂಟ್ರಿ' ಮೂವರಿಗೂ ಬಿಗ್ ಸಕ್ಸಸ್ ತಂದುಕೊಟ್ಟಿದ್ದ ಸಿನಿಮಾ. ಹೀಗಾಗಿ 'ನೋ ಎಂಟ್ರಿ' ಗೆದ್ದಾಗಲೇ ಅದರ ಸೀಕ್ವೆಲ್ ಮಾಡುವುದಕ್ಕೆ ನಿರ್ಧರಿಸಿದ್ದರು.

ಈ ಮೂವರ ಮಧ್ಯೆ ಎಲ್ಲರೂ ಸರಿಯಿತ್ತು. ಬೋನಿ ಕಪೂರ್ ಸೋಲಿನ ಸುಳಿಗೆ ಸಿಲುಕಿದಾಗಲೂ ಮೂವರು ಒಟ್ಟಿಗೆ ಇದ್ದರು. ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್ ಮಾಡಿದ ಎಡವಟ್ಟು ಮೂವರ ನಡುವೆ ಬಿರುಕು ಬೀಳುವಂತೆ ಮಾಡಿತ್ತು. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್‌ ಪತ್ನಿ ಮಲೈಕಾ ಅರೋರಾ ಜೊತೆ ಬೋನಿ ಕಪೂರ್ ಪುತ್ರ ಅರ್ಜುನ್ ಲವ್ ಆಗಿತ್ತು.

Boney Kapoor and brother Anil Kapoor is not good terms because of Salman Khan

ಅರ್ಜುನ್ ಕಪೂರ್‌ಗಾಗಿ ನಟಿ ಮಲೈಕಾ ಅರೋರಾ ವಿಚ್ಛೇದನ ನೀಡುವುದಕ್ಕೆ ಮುಂದಾದಾಗ ಬೋನಿ ಕಪೂರ್ ಹಾಗೂ ಸಲ್ಮಾನ್ ಖಾನ್ ನಡುವಿನ ಸಂಬಂಧ ಹಳಸಿತ್ತು. ಹೀಗಾಗಿ ಸಲ್ಮಾನ್ ಖಾನ್ ಜೊತೆ 'ನೋ ಎಂಟ್ರಿ 2' ಸಿನಿಮಾ ಮಾಡುವ ಯೋಜನೆ ಅಲ್ಲಿಗೆ ನಿಲ್ಲಿಸಿದ್ದರು. ಈ ಮುನಿಸು ಕಮ್ಮಿಯಾಗಬಹುದು ಎಂದು ಬೋನಿ ಕಪೂರ್ ಕಾದಿದ್ದರು. ಆದರೆ, ಅದು ಸರಿ ಹೋಗುವ ಲಕ್ಷಣವಿಲ್ಲ ಎಂದು ಗೊತ್ತಾಗ, ಯುವ ನಟರನ್ನು ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಆಗಲೇ ಬೋನಿ ಕಪೂರ್ ಹಾಗೂ ಅನಿಲ್ ಕಪೂರ್ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು.

ಇತ್ತೀಚೆಗೆ 'ಮೈದಾನ್' ಸಿನಿಮಾದ ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ ನಿರ್ಮಾಪಕ ಬೋನಿ ಕಪೂರ್ ಇದನ್ನು ಒಪ್ಪಿಕೊಂಡಿದ್ದಾರೆ. ಸಹೋದರರಿಬ್ಬರು ಮುಖಾ ಮುಖಿ ಮಾತಾಡುವಷ್ಟು ಉತ್ತಮ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಇಬ್ಬರು ಸಹೋದರರ ನಡುವೆ ಅಂತಹದ್ದೇನಾಯ್ತು? ಸಲ್ಮಾನ್ ಖಾನ್ ಕಾರಣವಾಗಿದ್ದು ಹೇಗೆ?

ಕೆಲವು ವರ್ಷಗಳ ಹಿಂದೆ ಸಲ್ಮಾನ್ ಖಾನ್ 'ನೋ ಎಂಟ್ರಿ ಮೇ ಎಂಟ್ರಿ' ಅನ್ನುವ ಸಿನಿಮಾ ಮಾಡುವುದಕ್ಕೆ ಹೊರಟಿದ್ದರು. ಇದನ್ನು 'ನೋ ಎಂಟ್ರಿ' ಸೀಕ್ವೆಲ್ ಎಂದೇ ಪರಿಗಣಸಲಾಗಿತ್ತು. ಒಂದಿಷ್ಟು ದಿನ ಈ ಸಿನಿಮಾ ಸೆಟ್ಟೇರುತ್ತೆ ಎಂದು ಕಾದು ಕೂತಿದ್ದಷ್ಟೇ ಬಂತು. ಸಲ್ಮಾನ್ ಜಾನ್ ಈ ಸಿನಿಮಾವನ್ನು ನಿಲ್ಲಿಸಿದ್ದರು. ಹೀಗಾಗಿ ಬೋನಿ ಕಪೂರ್ 'ನೋ ಎಂಟ್ರಿ 2' ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದಾದ್ದರು. ಆದರೆ, ಮೊದಲ ಪಾರ್ಟ್‌ನಲ್ಲಿದ್ದ ಸಲ್ಮಾನ್ ಖಾನ್, ಅನಿಲ್ ಕಪೂರ್ ಹಾಗೂ ಫರ್ದೀನ್ ಖಾನ್ ಅನ್ನು ಕೈ ಬಿಟ್ಟಿದ್ದರು.

Boney Kapoor and brother Anil Kapoor is not good terms because of Salman Khan

'ನೋ ಎಂಟ್ರಿ 2'ಗೆ ಬಾಲಿವುಡ್‌ನ ಯುವ ನಟರಾದ ವರುಣ್ ಧವನ್, ದಿಲ್ಜಿತ್ ದೋಸಾಂಜ್ ಹಾಗೂ ಪುತ್ರ ಅರ್ಜುನ್ ಕಪೂರ್ ಹಾಕಿಕೊಂಡು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಅದು ಅನಿಲ್ ಕಪೂರ್‌ಗೆ ಇಷ್ಟ ಆಗಲಿಲ್ಲ. ಯಾಕಂದ್ರೆ ಈ ವಿಷಯವನ್ನು ಬೋನಿ ಕಪೂರ್ ಸಹೋದರ ಅನಿಲ್ ಕಪೂರ್‌ಗೆ ತಿಳಿಸುವಷ್ಟರಲ್ಲಿ ಲೀಕ್ ಆಗಿತ್ತು. ಮೊದಲು ತನಗೆ ಹೇಳದೇ ಸಿನಿಮಾ ಅನೌನ್ಸ್ ಮಾಡಿದ್ದಕ್ಕೆ ಅನಿಲ್ ಕಪೂರ್ ಬೇಸರ ಮಾಡಿಕೊಂಡಿದ್ದರು.

ಅನಿಲ್ ಕಪೂರ್‌ಗೆ ' ನೋ ಎಂಟ್ರಿ 2' ಸಿನಿಮಾದಲ್ಲಿ ನಟಿಸಬೇಕು ಅಂತ ಬಹಳ ಆಸೆಯಿತ್ತು. ಹಿಂದೆ ಹೇಳಿದ ಕಥೆಯಲ್ಲಿ ಸಲ್ಮಾನ್ ಖಾನ್, ಅನಿಲ್ ಕಪೂರ್ ಹಾಗೂ ಫರ್ದೀನ್ ಖಾನ್ ಮೂವರದ್ದು ಡಬಲ್ ರೋಲ್ ಇತ್ತು. ಈ ಮೂಲಕ ಡಬಲ್ ಡೋಸ್ ಕೊಡುವುದಕ್ಕೆ ಸಜ್ಜಾಗಿದ್ದರು. ಆದ್ರೀಗ ಸ್ಟಾರ್ ಕಾಸ್ಟ್ ಬದಲಾಗಿತ್ತು. ಹೀಗಾಗಿ ಅನಿಲ್ ಕಪೂರ್ ಸ್ಪೇಸ್ ಇರಲಿಲ್ಲ ಎಂದು ಬೋನಿ ಕಪೂರ್ ಹೇಳಿಕೊಂಡಿದ್ದರು. ಜೂಮ್‌ ನೀಡಿದ ಸಂದರ್ಶನದಲ್ಲಿ ಬೋನಿ ಕಪೂರ್ " ಈ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಆಸೆ ಅನಿಲ್‌ಗೆ ಇತ್ತು ಅನ್ನೋದು ಗೊತ್ತಿದೆ. ಆದರೆ, ಈ ಕಥೆಗೆ ಅವರು ಸೂಟ್ ಆಗುವುದಿಲ್ಲ. ನಾನು ಯಾಕೆ ಈ ಸಿನಿಮಾದಲ್ಲಿ ಹಾಕೊಂಡಿಲ್ಲ ಅನ್ನೋದು ತಿಳಿಸುವುದಕ್ಕೂ ಬಿಡುತ್ತಿಲ್ಲ" ಎಂದು ಬೋನಿ ಕಪೂರ್ ಹೇಳಿಕೊಂಡಿದ್ದಾರೆ.

More from Filmibeat

English summary
Why Anil Kapoor is angry on producer Boney Kapoor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X