Yash: ರಣ್‌ಬೀರ್ ರಾಮ.. ಸಾಯಿ ಪಲ್ಲವಿ ಸೀತೆ.. ರಾವಣನ ಪಾತ್ರಕ್ಕೆ ಕೇವಲ 15 ದಿನ ಕಾಲ್‌ ಶೀಟ್ ಕೊಟ್ಟ ಯಶ್?

2020ರಿಂದಲೂ ಬಾಲಿವುಡ್‌ನಲ್ಲಿ 'ರಾಮಾಯಣ' ಸಿನಿಮಾ ಬಗ್ಗೆ ಸುದ್ದಿ ಓಡಾಡುತ್ತಲೇ ಇತ್ತು. 'ದಂಗಲ್' ಅಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ದೇಶಿಸಿದ್ದ ನಿತಿಶ್ ತಿವಾರಿ ಈ ಸಿನಿಮಾಗಾಗಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಲೇ ಇದ್ದರು.

ಬಾಲಿವುಡ್ ನಿರ್ಮಾಪಕ ಮಧು ಮಾಂಟೇನ ಕೂಡ 'ರಾಮಾಯಣ' ಸಿನಿಮಾ ತಮ್ಮ ಡ್ರೀಮ್ ಪ್ರಾಜೆಕ್ಟ್ ಎಂದು ಹೇಳುತ್ತಲೇ ಬರುತ್ತಿದ್ದರು. ಕೊನೆಗೂ ಈ ಸಿನಿಮಾ ಟೇಕ್ ಆಫ್ ಅಗುವ ಸಮಯ ಬಂದೇ ಬಿಟ್ಟಿದೆ ಎಂದು ಬಾಲಿವುಡ್ ಅಂಗಳದಲ್ಲಿ ಸುದ್ದಿಯಾಗಿವೆ.

Buzz is that Yash will join Ramayana team fro, 2024 July with Ranbir Kapoor and Sai Pallavi

ಸುಮಾರು ವರ್ಷ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದ ಸಿನಿಮಾವನ್ನು 2024ರ ಆರಂಭದಲ್ಲಿಯೇ ಸೆಟ್ಟೇರಿಸುವುದಕ್ಕೆ ನಿರ್ಧರಿಸಿದ್ದಾರೆ. ವಿಶೇಷ ಅಂದರೆ, ರಾಕಿ ಭಾಯ್ ಯಶ್ ಈ ಸಿನಿಮಾದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಂತ ಸುದ್ದಿಯಾಗಿದೆ. ಅಲ್ಲದೆ ಕಾಲ್‌ಶೀಟ್ ಎಷ್ಟು ದಿನ? ಯಾವಾಗ ತಂಡ ಸೇರಿಕೊಳ್ಳುತ್ತಾರೆ ಅನ್ನೋದನ್ನು ವರದಿ ಮಾಡಲಾಗಿದೆ.

ರಣ್‌ಬೀರ್ ರಾಮ.. ಸಾಯಿ ಪಲ್ಲವಿ ಸೀತೆ

2024ರ ಮೊದಲ ಮೂರು ತಿಂಗಳೊಳಗೆ 'ರಾಮಾಯಣ' ಸಿನಿಮಾ ಸೆಟ್ಟೇರಲಿದೆ. ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಸಿನಿಮಾ 2024 ಫೆಬ್ರವರಿ, ಮಾರ್ಚ್ ವೇಳೆಗೆ ಸೆಟ್ಟೇರುವ ಸಾಧ್ಯತೆಯಿದೆ ಎಂದು ಫಿಂಕ್‌ವಿಲ್ಲಾ ವರದಿ ಮಾಡಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ರಣ್‌ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಭಾಗಿಯಾಗುತ್ತಿದ್ದಾರೆ ಎನ್ನಲಾಗಿದೆ.

VFXನಲ್ಲಿ ರಾಮಾಯಣ ಪ್ರಪಂಚ ರೆಡಿ

'ರಾಮಾಯಣ' ಸಿನಿಮಾ ನೀಲಿ ನಕ್ಷೆ ಬಹುತೇಕ ರೆಡಿಯಾಗಿದೆ. ಬಾಲಿವುಡ್ ನಿರ್ದೇಶಕ ನಿತಿಶ್ ತಿವಾರಿ ಹಾಗೂ ಅವರ ತಂಡ ಕಳೆದ ಮೂರು ಇದನ್ನು ರೆಡಿ ಮಾಡಿಟ್ಟಿದ್ದಾರೆ. ಹಾಲಿವುಡ್‌ನ ಪ್ರಖ್ಯಾತ VFX ಸಂಸ್ಥೆ DNEG ರಾಮಾಯಣ ಪ್ರಪಂಚವನ್ನು ಸೃಷ್ಟಿಸಿದೆ. ಆದರೆ, ವಿಎಫ್‌ಎಕ್‌ನಿಂದ ರಾಮಾಯಣ ಸೃಷ್ಟಿಸುವುದಲ್ಲ. ಬದಲಾಗಿ ಕಥೆಯನ್ನು ಸರಳವಾಗಿ ಹೇಳುವುದೇ ದೊಡ್ಡ ಚಾಲೆಂಜ್ ಎನ್ನಲಾಗಿದೆ. ಸದ್ಯ ರಾಮಾಯಣ ಸಿನಿಮಾ ಚಿತ್ರೀಕರಣಕ್ಕೆ ಬೇಕಿರೋ ಸಕಲ ಸಿದ್ಧತೆಗಳೂ ರೆಡಿಯಿದೆ ಎನ್ನಲಾಗಿದೆ.

Buzz is that Yash will join Ramayana team fro, 2024 July with Ranbir Kapoor and Sai Pallavi

ರಾವಣ ಅವತಾರವೆತ್ತಲಿರೋ ಯಶ್

ಕಳೆದ ಕೆಲವು ತಿಂಗಳಿನಿಂದ ಯಶ್ ಕೂಡ ರಾಮಾಯಣದಲ್ಲಿ ಇರುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಈ ಬಗ್ಗೆ ಯಾರೂ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಈ ವರದಿ ಪ್ರಕಾರ, ರಾವಣನ ಅವತಾರದಲ್ಲಿ ಯಶ್ ನಟಿಸುತ್ತಿದ್ದಾರೆ. ಅಷ್ಟರೊಳಗೆ ರಾಕಿ ಭಾಯ್ 'ಯಶ್ 19' ಸಿನಿಮಾದ ಚಿತ್ರೀಕರಣವನ್ನು ಮುಗಿಸಿ, 'ರಾಮಾಯಣ' ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕೇವಲ 15 ದಿನ ಕಾಲ್‌ಶೀಲ್ ಕೊಟ್ಟ ಯಶ್

ರಣ್‌ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ 2024ರ ಫೆಬ್ರವರಿ ತಿಂಗಳಲ್ಲಿ ಚಿತ್ರೀಕರಣದಲ್ಲಿ ಭಾಗಿಯಾದರೆ, ಯಶ್ ಜುಲೈ ತಿಂಗಳಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. 'ರಾಮಾಯಣ' ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಮೊದಲ ಭಾಗದಲ್ಲಿ ಯಶ್‌ ಪಾತ್ರ ಹೆಚ್ಚಿರುವುದಿಲ್ಲ. ಹೀಗಾಗಿ 15 ದಿನವಷ್ಟೇ ಕಾಲ್‌ಶೀಟ್ ಕೊಟ್ಟಿದ್ದಾರೆ. ಎರಡನೇ ಭಾಗದಲ್ಲಿ ಯಶ್ ಮೇಜರ್ ರೋಲ್ ಇರುತ್ತೆ ಎಂದು ಪಿಂಕ್ ಪಿಲ್ಲ ವರದಿ ಮಾಡಿದೆ.

More from Filmibeat

English summary
Buzz is that Yash will join Ramayana team fro, 2024 July with Ranbir Kapoor and Sai Pallavi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X