Deepika Padukone: ಬಾಲಿವುಡ್ 'ಲೇಡಿ ಸಿಂಗಂ' ಹವಾ ಶುರು.. ದೀಪಿಕಾ ಪಡುಕೋಣೆ ಫಸ್ಟ್ ಲುಕ್ ನೆಟ್ಟಿಗರು ಫಿದಾ!
ಸಿನಿ ಪ್ರಿಯರಿಗೆ ರೋಹಿತ್ ಶೆಟ್ಟಿ ಸಿನಿಮಾ ಬಗ್ಗೆ ಹೇಳಬೇಕಿಲ್ಲ. ಕಾಮಿಡಿ ಇಲ್ಲವೇ ಆಕ್ಷನ್ ಸಿನಿಮಾಗಳಿಗೆ ಹೆಸರಾದ ನಿರ್ದೇಶಕ. ಈ ಡೈರೆಕ್ಟರ್ ನಿರ್ದೇಶಿಸಿದ ಸಿಂಗಂ ಸೀರಿಸ್ ಬಾಲಿವುಡ್ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದೆ. ಈಗ ಬಹಳ ದಿನಗಳ ಬಳಿಕ ಮತ್ತೊಂದು ಸಿಂಗಂ ಸೀರಿಸ್ ಸೆಟ್ಟೇರಿದೆ.
ಈ ಬಾರಿ ಲೇಡಿ ಸಿಂಗಂ ಎಂಟ್ರಿ ಕೊಟ್ಟಿದ್ದು, ಸಿಂಗಂ ಮತ್ತಷ್ಟು ಪವರ್ ಬಂದಂತೆ ಆಗಿದೆ. ಹೌದು.. ಬಾಲಿವುಡ್‌ನ ಲೇಡಿ ಸೂಪರ್‌ಸ್ಡಾರ್ ದೀಪಿಕಾ ಪಡುಕೋಣೆ ಸಿಂಗಂ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

ರೋಹಿತ್ ಶೆಟ್ಟಿ ಈಗ ದೀಪಿಕಾ ಪಡುಕೋಣೆಯ ಲೇಡಿ ಸಿಂಗಂ ಲುಕ್ ಅನ್ನು ರಿವೀಲ್ ಮಾಡಿದ್ದಾರೆ. ಖಾಕಿ ತೊಟ್ಟು ಪೊಲೀಸ್ ಅಧಿಕಾರಿಯಾಗಿ ಲುಕ್ ಕೊಟ್ಟಿರೋ ದೀಪಿಕಾ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಕೊನೆಗೂ ಅಭಿಮಾನಿಗಳಿಗೆ ಪೊಲೀಸ್ ಲುಕ್ ಕೊಟ್ಟಿದ್ದು, ಜಬರ್ಧಸ್ತ್ ಆಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸಿದ್ದಾರೆ.
ಶಕ್ತಿ ಶೆಟ್ಟಿ ಅವತಾರದಲ್ಲಿ ದೀಪಿಕಾ
ರೋಹಿತ್ ಶೆಟ್ಟಿ ಕಾಪ್ ಯುನಿವರ್ಸ್‌ನಲ್ಲಿ ದೀಪಿಕಾ ಪಡುಕೋಣೆ ಪಾತ್ರದ ಹೆಸರು ಇಂಟ್ರೆಸ್ಟಿಂಗ್ ಆಗಿದೆ. ಈ ಸಿನಿಮಾದಲ್ಲಿ ಶಕ್ತಿ ಶೆಟ್ಟಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿಂಗಂ ಅಗೈನ್‌ನಲ್ಲಿ ದೀಪಿಕಾ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದಲ್ಲಿ ದೀಪಿಕಾ ಹೆಸರು ಅಟ್ರ್ಯಾಕ್ಟಿಂಗ್ ಆಗಿದೆ. ಕೇಡಿಗಳ ಸಂಹಾರ ಮಾಡಿ ತಲೆಗೆ ಗನ್ ಕ್ರೇಜಿ ಸ್ಮೈಲ್ ಕೊಟ್ಟಿರೋ ದೀಪಿಕಾ ಲುಕ್‌ಗೆ ಪ್ರೇಕ್ಷಕರು ಬೋಲ್ಡ್ ಆಗಿದ್ದಾರೆ.
ಅಜಯ್ ದೇವಗನ್ ತಂಗಿ ದೀಪಿಕಾ?
ಬಾಲಿವುಡ್ ಸಿಂಗಂ ಅಂದರೆ ಅದು ಅಜಯ್ ದೇವಗನ್. ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಜಯ್ ದೇವಗನ್ ಇದೂವರೆಗೂ ಸಿನಿಪ್ರಿಯರನ್ನು ರಂಜಿಸಿದ್ದಾರೆ. ಈಗ ಅಜಯ್ ದೇವಗನ್ ಟೀಂಗೆ ದೀಪಿಕಾ ಪಡುಕೋಣೆ ಸೇರಿಕೊಂಡಿದ್ದಾರೆ. ಸ್ವತ: ಅಜಯ್ ದೇವಗನ್ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ದೀಪಿಕಾ ಪಡುಕೋಣೆಯ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ ಬಾಲಿವುಡ್ ಸಿಂಗ್ ಅಜಯ್ ದೇವಗನ್ ಸಹೋದರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಮಲ್ಟಿಸ್ಟಾರರ್ ಸಿನಿಮಾ 'ಸಿಂಗಂ'
'ಸಿಂಗಂ ಅಗೈನ್' ಇದೊಂದು ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿರುವ ಮಲ್ಟಿಸ್ಟಾರರ್ ಸಿನಿಮಾ. ಈ ಸಿನಿಮಾದಲ್ಲಿ ಅಜಯ್ ದೇವಗನ್, ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಈ ಮೂರು ಹೆಸರುಗಳನ್ನು ರಿವೀಲ್ ಮಾಡಿದ್ದು, ಮಂದೆ ಯಾರೆಲ್ಲ ಸೇರ್ಪಣೆಯಾಗುತ್ತಾರೆ ಅನ್ನೋ ಕುತೂಹಲವಿದೆ. "ನಾರಿ ಸೀತೆಯ ರೂಪವೂ ಹೌದು.. ದುರ್ಗೆಯ ರೂಪವೂ ಹೌದು. ನಮ್ಮ ಕಾಪ್ ಯುನಿವರ್ಸ್‌ನ ಕ್ರೂರ ಮತ್ತು ವೈಲೆಂಟ್ ಪೊಲೀಸ್ ಆಫೀಸ್ ಶಕ್ತಿ ಶೆಟ್ಟಿ ಇವರೇ" ಎಂದು ಸೋಶಿಯಲ್ ಮೀಡಿಯಾದಲ್ಲಿ ರೋಹಿತ್ ಶೆಟ್ಟಿ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ.
ದೀಪಿಕಾ ಅಷ್ಟೇ ಅಲ್ಲ ಕರೀನಾನೂ ಇದ್ದಾರೆ?
ದೀಪಿಕಾ ಪಡುಕೋಣೆ ಪಾತ್ರವನ್ನು ಅವಧಿಯನ್ನು ಹೆಚ್ಚಿಸಲಾಗಿದೆ. ಹೀಗಾಗಿ ದೀಪಿಕಾ ಈ ಸಿನಿಮಾ ಸುಮಾರು 35 ರಿಂದ 40 ದಿನಗಳ ಕಾಲ ಚಿತ್ರೀಕರಣ ಮಾಡುತ್ತಿದ್ದಾರೆ. ರೋಹಿತ್ ಶೆಟ್ಟಿ ಶೈಲಿಯ ಆಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ 'ಸಿಂಗಂ ಅಗೈನ್'ನಲ್ಲಿ ಕೇವಲ ದೀಪಿಕಾ ಅಷ್ಟೇ ಅಲ್ಲ ಕರೀನಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











