'xxx' ನಂತರವು ವಿನ್ ಡೀಸೆಲ್ ಜೊತೆ ದೀಪಿಕಾ ಸಿನಿಮಾ?

By Suneel

ಲವ್ಲಿ ಲೇಡಿ ಡಿಪ್ಪಿ ದೀಪಿಕಾ ಪಡುಕೋಣೆ ಅಭಿನಯದ ಬಹು ನಿರೀಕ್ಷಿತ ಹಾಲಿವುಡ್ ಸಿನಿಮಾ 'XXX: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರ ಭಾರತದಲ್ಲೂ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿ ಯಶಸ್ವಿ ಪಡೆದಿದೆ. ಈ ಗೆಲುವಿನನಿಂದಾಗಿ ಹಾಲಿವುಡ್ ನ ಸಿನಿಮಾ ನಿರ್ಮಾಪಕರು ಭಾರತ ಮೂಲದ ಬ್ಯೂಟಿಫುಲ್ ಬೆಡಗಿ ಹಿಂದೆ ಬಿದ್ದಿದ್ದಾರಂತೆ.['ಪದ್ಮಾವತಿ' ಚಿತ್ರಕ್ಕೆ ದೀಪಿಕಾಗೆ ಸಿಗುವ ಸಂಭಾವನೆ ಎಷ್ಟು.?]

ಹೌದು, ಬಾಲಿವುಡ್ ನ ಹಾಟ್ ಬ್ಯೂಟಿ ಡಿಪ್ಪಿಗೆ ಈಗ ಹಲವು ಹಾಲಿವುಡ್ ಚಿತ್ರಗಳಲ್ಲಿ ನಟಿಸಲು ಅವಕಾಶಗಳು ಬರುತ್ತಿದ್ದು, ದೀಪಿಕಾ ಇನ್ನೊಂದು ಹಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ರೂಮರ್ಸ್ ಎಲ್ಲಾ ಕಡೆ ಹಬ್ಬಿದೆ. ಈ ಗಾಳಿ ಸುದ್ದಿಗೆ ಪ್ರತಿಕ್ರಿಯಿಸಿರುವ ನಟಿ ಬಿಟೌನ್ ನಲ್ಲಿ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ.

ಅವಕಾಶ ಬರುತ್ತಿರುವುದು ನಿಜ

ಅವಕಾಶ ಬರುತ್ತಿರುವುದು ನಿಜ

'ಬಾಜೀರಾವ್ ಮಸ್ತಾನಿ' ನಟಿ, ಹಾಲಿವುಡ್ ಸಿನಿಮಾಗಳಿಗೆ ಸಾಕಷ್ಟು ಅವಕಾಶಗಳು ಬರುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಅಲ್ಲದೇ 'ಐ ಯಾಮ್ ಸೋ ಹ್ಯಾಪಿ' ಅಂತಲೂ ಹೇಳಿದ್ದಾರೆ.['ಆಸ್ಕರ್ ಪಾರ್ಟಿ'ಯಲ್ಲಿ ದೀಪಿಕಾ ಮತ್ತು ಪ್ರಿಯಾಂಕ: ಮಿಸ್ ಮಾಡದೇ ನೋಡಿ]

ಇನ್ನೊಂದು ಹಾಲಿವುಡ್ ಚಿತ್ರದಲ್ಲಿ ನಟಿಸುತ್ತೀದ್ದೀರಂತೆ?

ಇನ್ನೊಂದು ಹಾಲಿವುಡ್ ಚಿತ್ರದಲ್ಲಿ ನಟಿಸುತ್ತೀದ್ದೀರಂತೆ?

ದೀಪಿಕಾ ''xxx: ದಿ ರಿಟರ್ನ್‌ ಆಫ್‌ ಕ್ಸಾಂಡರ್ ಕೇಜ್' ಚಿತ್ರದ ನಾಯಕ ನಟ ವಿನ್ ಡೇಸೆಲ್ ಜೊತೆ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಇಂಟರ್ ನೆಟ್ ತುಂಬಾ ಹರಿದಾಡುತ್ತಿತ್ತು. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ದೀಪಿಕಾ ಉತ್ತರಿಸಿ, "ನೋ. ನಾನು ಇನ್ನೂ ಯಾವುದೇ ಹಾಲಿವುಡ್ ಸಿನಿಮಾದಲ್ಲೂ ನಟಿಸುತ್ತಿಲ್ಲ. ಅಭಿನಯಿಸಲು ಸಹಿ ಸಹ ಮಾಡಿಲ್ಲ. ಹಾಗೇನಾದ್ರು ಇದ್ರೆ ಕಂಡಿತ ತಿಳಿಸುತ್ತೇನೆ",ಎಂದಿದ್ದಾರೆ. ಹಾಗೆ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಉತ್ಸುಹರಾಗಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ.

'ಪದ್ಮಾವತಿ' ಯಲ್ಲಿ ಡಿಪ್ಪಿ ಬಿಜಿ

'ಪದ್ಮಾವತಿ' ಯಲ್ಲಿ ಡಿಪ್ಪಿ ಬಿಜಿ

ಅಂದಹಾಗೆ ದೀಪಿಕಾ ಪಡುಕೋಣೆ ಪ್ರಸ್ತುತದಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರದ ಬಿಜಿಯಲ್ಲಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ 'ರಾಣಿ ಪದ್ಮಾವತಿ' ಪಾತ್ರ ನಿರ್ವಹಿಸುತ್ತಿದ್ದಾರೆ.

'ಪದ್ಮಾವತಿ' ವಿವಾದದ ಬಗ್ಗೆ ದೀಪಿಕಾ ಪ್ರತಿಕ್ರಿಯೆ

'ಪದ್ಮಾವತಿ' ವಿವಾದದ ಬಗ್ಗೆ ದೀಪಿಕಾ ಪ್ರತಿಕ್ರಿಯೆ

'ಪದ್ಮಾವತಿ' ಚಿತ್ರದಲ್ಲಿ ರಾಣಿ ಪದ್ಮಿನಿಯ ಆಕ್ಷೇಪಾರ್ಹ ಸಂಗತಿಗಳನ್ನು ಅಳವಡಿಸಲಾಗಿದೆ ಎಂದು ರಜಪೂತ್ ಕಾರ್ಣಿ ಸೇನೆ ನಡೆಸಿದ ವಿದ್ವಂಸಕ ಕೃತ್ಯಕ್ಕೆ ಪ್ರತಿಕ್ರಿಯಿಸಿ, ಅವರನ್ನು 'ಚೈಲ್ಡಿಶ್' ಎಂದಿದ್ದಾರೆ. ಜೊತೆಗೆ ನಿರ್ದೇಶಕರ ಬಗ್ಗೆ "ಸಂಜಯ್ ಲೀಲಾ ಬನ್ಸಾಲಿ ಅವರು ಸಿನಿಮಾಗಾಗಿಯೇ ಬದುಕಿರುವ ವ್ಯಕ್ತಿ, ಸಿನಿಮಾ ಬಗ್ಗೆ ಅಷ್ಟೊಂದು ಪ್ಯಾಷನೇಟ್ ಆಗಿರುವ ವ್ಯಕ್ತಿಯನ್ನು ನೋಡೇಯಿಲ್ಲ" ಎಂದು ದೀಪಿಕಾ ಅಭಿಪ್ರಾಯ ವ್ಯಕ್ತಪಡಿಸಿದ್ದರು.

'ಪದ್ಮಾವತಿ' ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ?

'ಪದ್ಮಾವತಿ' ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ?

ಚಿತ್ರದಲ್ಲಿ ಸಾಹಿದ್ ಕಪೂರ್ 'ಪದ್ಮಾವತಿ'(ದೀಪಿಕಾ ಪಡುಕೋಣೆ) ಗಂಡ ರಾಜ ರಾವಲ್ ರತನ್ ಸಿಂಗ್ ಆಗಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ರಣವೀರ್ ಸಿಂಗ್ 13ನೇ ಶತಮಾನದ ನಿರಂಕುಶ ದೊರೆ ಅಲ್ಲಾವುದ್ಧೀನ್ ಖಿಲ್ಜಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್‌-ಕಟ್ ಹೇಳುತ್ತಿದ್ದು, ಅವರೇ ಸಂಗೀತ ನಿರ್ದೇಶನವನ್ನು ನೀಡುತ್ತಿದ್ದಾರೆ.

More from Filmibeat

English summary
After the mammoth success of ‘xXx: The Return of Xander Cage’, rumours of Deepika Padukone doing another Hollywood film with her ‘xxx’ co-star Vin Diesel were all over the internet. But Deepika saying that she has not signed any projects yet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X