»   » 'ಆಸ್ಕರ್ ಪಾರ್ಟಿ'ಯಲ್ಲಿ ದೀಪಿಕಾ ಮತ್ತು ಪ್ರಿಯಾಂಕ: ಮಿಸ್ ಮಾಡದೇ ನೋಡಿ

'ಆಸ್ಕರ್ ಪಾರ್ಟಿ'ಯಲ್ಲಿ ದೀಪಿಕಾ ಮತ್ತು ಪ್ರಿಯಾಂಕ: ಮಿಸ್ ಮಾಡದೇ ನೋಡಿ

Posted By:
Subscribe to Filmibeat Kannada

ಪ್ರಿಯಾಂಕ ಚೋಪ್ರಾ, ಕೆಲವೇ ಗಂಟೆಗಳ ಹಿಂದಷ್ಟೆ 89 ನೇ ಆಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ತೆಗೆಸಿಕೊಂಡ ಗ್ಲಾಮರಸ್ ದೃಶ್ಯಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟು ಪಡ್ಡೆ ಹುಡುಗರ ಹಾರ್ಟ್ ನಲ್ಲಿ ಇರುವೆ ಬಿಟ್ಟಿದ್ದರು. ಈಗ ದೀಪಿಕಾ ಪಡುಕೋಣೆ ಜೊತೆ 'ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿ' ಗೆ ಆಗಮಿಸಿರುವ ಪಿಗ್ಗಿ, ಯುವಕರು ಇನ್ನಷ್ಟು ಕಳೆದು ಹೋಗಲು ಕಾರಣರಾಗಿದ್ದಾರೆ.['ಆಸ್ಕರ್' ವೇದಿಕೆಯಲ್ಲಿ ಎಲ್ಲರ ಚಿತ್ತ 'ಪ್ರಿಯಾಂಕ'ಳತ್ತ]

ರೆಡ್ ಕಾರ್ಪೆಟ್ ವೇದಿಕೆಯಲ್ಲಿ ಶೋ ಕೊಟ್ಟ ನಂತರ ದೀಪಿಕಾ ಮತ್ತು ಪ್ರಿಯಾಂಕ ಇಬ್ಬರು ಕಪ್ಪು ಬಣ್ಣದ ಉಡುಗೆ ಧರಿಸಿ 'ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿ'ಯಲ್ಲಿ ಕಾಣಿಸಿಕೊಂಡಿದ್ದು, ಇಬ್ಬರು ಸಹ ಮನಮೋಹಕ ಮತ್ತು ಮಾದಕ ನೋಟದಿಂದ ಆಕರ್ಷಿಸಿದ್ದಾರೆ. ಈ ಇಬ್ಬರಲ್ಲಿ ಯಾರು ಹೆಚ್ಚು ಸುಂದರವಾಗಿ ಕಾಣ್ತಿದ್ದಾರೆ ನೋಡಿ..

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಜಸ್ಟ್ ತಮ್ಮ 2012 ರ ಬ್ಯೂಟಿ ಅವಾರ್ಡ್ ನಲ್ಲಿ ಕಾಣಿಸಿದ್ದ ಲುಕ್ ರೀಕ್ರಿಯೇಟ್ ಮಾಡಿದ್ದಾರೆ. ಆದ್ರೆ ಸಂಪೂರ್ಣ ಹಾಗೆ ಕಾಣ್ತಿದ್ದಾರೆ ಅಂತ ಹೇಳ್ತಿಲ್ಲ. ಯಾಕಂದ್ರೆ ಆಸ್ಕರ್ ಅತಿದೊಡ್ಡ ಈವೆಂಟ್ ಅನ್ನೋದನ್ನ ಮರೆಯೋಹಾಗಿಲ್ಲ. ಫೋಟೋ ನೋಡಿ.[ಆಸ್ಕರ್‌ನಲ್ಲಿ ಭಾರೀ ಪ್ರಮಾದ : ಅತ್ಯುತ್ತಮ ಚಿತ್ರ ಲಾಲಾ ಲ್ಯಾಂಡ್ ಅಲ್ಲ]

ಪ್ರಿಯಾಂಕ

ಇನ್ನೊಂದು ಕಡೆ ಪ್ರಿಯಾಂಕ ಸಿಂಪಲ್ಲಾದ ಕಪ್ಪು ಬಣ್ಣದ ಉಡುಗೆ ಧರಿಸಿ ಆಕರ್ಷಿಸುತ್ತಿದ್ದಾರೆ. ಅವರ ಮೇಕಪ್, ಔಟ್ ಫಿಟ್ ಪಡ್ಡೆ ಹುಡುಗರ ಕಣ್ಣುಕುಕ್ಕುವಂತಿದೆ.

ಇಬ್ಬರನ್ನು ಜೊತೆಯಲ್ಲಿ ನೋಡಿದಾಗ...

ವಿಶೇಷ ಅಂದ್ರೆ ಬಿ ಟೌನ್ ನ ಇಬ್ಬರೂ ಫೇಮಸ್ ಸೆಲೆಬ್ರಿಟಿಗಳಾದ ದೀಪಿಕಾ ಮತ್ತು ಪ್ರಿಯಾಂಕ, ಆಸ್ಕರ್ ವ್ಯಾನಿಟಿ ಪಾರ್ಟಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರು ಒಟ್ಟಿಗೆ ಸೆಲ್ಫಿಗೆ ಪೋಸ್ ಕೊಟ್ರೆ ಹೇಗಿರುತ್ತೇ ಅನ್ನೋ ಕುತೂಹಲ ನಿಮಗೂ ಇರುತ್ತೇ? ಅಲ್ವಾ...

ಪ್ರಿಯಾಂಕ ಬಗ್ಗೆ ದೀಪಿಕಾ ಹೇಳಿದ್ದು....

ಇತ್ತೀಚೆಗೆ HT , ದೀಪಿಕಾಗೆ ನಿಮ್ಮ ಫ್ರೆಂಡ್ ಮತ್ತು ಸ್ಪರ್ಧಿ ಪ್ರಿಯಾಂಕ ಬಗ್ಗೆ ಹೇಳಿ ಎಂದಾಗ, " ಫ್ಯಾಕ್ಟ್ ಅಂದ್ರೆ ನೀವು 'ಫ್ರೆಂಡ್' ಅಂತ ಬಳಸಿದ ಪದ ತುಂಬಾ ಇಷ್ಟ ಆಯ್ತು. ಪ್ರಿಯಾಂಕ ನನಗೆ ನೀವು ಹೇಳಿದ ಹಾಗೆ 'ಫ್ರೆಂಡ್'. ಆದ್ದರಿಂದ ಯಾವಾಗಲು ನಾನು ಹಾಗೆ ಹೇಳದೇ(ನಾವು ಫ್ರೆಂಡ್) ಇರುವುದನ್ನು ಓದುತ್ತೇನೆ. ಅದು ನನಗೆ ಒಂಥರಾ ಆಶ್ಚರ್ಯಕರ ಸಂಗತಿ", ಎಂದು ದೀಪಿಕಾ ಹೇಳಿದ್ದಾರೆ.

ನಾವು ಪ್ರೊಫೇಶನಲ್ ಸ್ಪರ್ಧಿಗಳಲ್ಲ...

"ನಾನು ಯಾವಾಗ್ಲು ಹೇಳೋಹಾಗೆ, ಪ್ರಿಯಾಂಕ ಹಲವು ವರ್ಷಗಳಿಂದ ಗೊತ್ತಿದ್ದಾರೆ. ಅವರ ಜೊತೆ ವಿಚಿತ್ರವಾಗಿ ಹೋಲಿಸಿದಾಗ ಬೇಸರ ಆಗುತ್ತದೆ. ಅಲ್ಲದೇ ನಾವಿಬ್ಬರು ವೃತ್ತಿಪರ ಸ್ಪರ್ಧಿಗಳು ಎಂಬುದನ್ನು ನಾನು ನಂಬಿಲ್ಲ, ", ಎಂದು ದೀಪಿಕಾ ಉತ್ತರಿಸಿದ್ದಾರೆ.

ದೀಪಿಕಾ ವರ್ತನೆ ಇಷ್ಟ ಆಗೋದ್ರಲ್ಲಿ ಸಂಶಯವೇ ಇಲ್ಲಾ...

ಪ್ರಿಯಾಂಕ ಬಗ್ಗೆ ಮಾತು ಮುಂದುವರೆಸಿದ ದೀಪಿಕಾ "ನಾವಿಬ್ಬರು ಯಾವಾಗ್ಲು ಸ್ಪರ್ಧಿಗಳು ಅಂದುಕೊಂಡಿಲ್ಲ. ಈಗೇಕೆ ಆ ರೀತಿ ಅಂದುಕೊಳ್ಳಲಿ? ಅವರ ಸ್ಪೇಸ್ ನಲ್ಲಿ ಅವರು ಅದ್ಭುತವಾಗಿ ವರ್ಕ್ ಮಾಡುತ್ತಿದ್ದಾರೆ. ಅವರ ಕೆಲಸದ ಅಗತ್ಯತೆಗಳು ಮತ್ತು ಕಮಿಟ್ ಮೆಂಟ್ ಅನ್ನೋದು ನನ್ನ ಕೆಲಸಗಳು ಮತ್ತು ನಾನು ಮಾಡುತ್ತಿರುವುದಕ್ಕಿಂತ ವಿಭಿನ್ನ", ಎಂದಿದ್ದಾರೆ.

ನಿಮಗೆ ಯಾರು ತುಂಬಾ ಇಷ್ಟ ಆದ್ರು?

ಬಹುಶಃ ಇಬ್ಬರಲ್ಲಿ ಒಬ್ಬರನ್ನು ಬೆಸ್ಟ್ ಅಂತ ಆಯ್ಕೆ ಮಾಡೋದು ಕಷ್ಟಾನೇ... ಈಗಾಗಲೇ ಆಯ್ಕೆ ಮಾಡಿದ್ರೆ ನಮಗೆ ತಿಳಿಸಿ. ಆಸ್ಕರ್ ಪಾರ್ಟಿಯಲ್ಲಿ ಯಾರ ಲುಕ್ ಹೆಚ್ಚು ಗ್ಲಾಮರಸ್ ಮತ್ತು ಮನಮೋಹಕವಾಗಿದೆ ಡಿಸೈಟ್ ಮಾಡಿ.

English summary
Deepika Padukone and Priyanka Chopra spotted together at the Vanity Fair Oscar party and you cannot afford to miss their pictures!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada