'ಗೆಹ್ರೈಯಾನ್' ಗೆಲುವಿನ ಖುಷಿ ಹಂಚಿಕೊಳ್ಳಲು ಬೆಂಗಳೂರಿಗೆ ಆಗಮಿಸಿದ ದೀಪಿಕಾ ಪಡುಕೋಣೆ.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಮುಂದಿನ ಚಿತ್ರ 'ಗೆಹ್ರೈಯಾನ್' ಸಲುವಾಗಿ​​ ಸುದ್ದಿಯಲ್ಲಿದ್ದಾರೆ. ನಟಿ ದೀಪಿಕಾ ಹಿಂದೆಂದೂ ಕಾಣಿಸಿಕೊಂಡಿರದಷ್ಟು ಬೋಲ್ಡ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಹಲವು ವರ್ಷಗಳ ಬಳಿಕ ದೀಪಿಕಾ ಬಿಕಿನಿ ಕೂಡ ಧರಿಸಿದ್ದಾರೆ. ಚಿತ್ರದಲ್ಲಿ ಲಿಪ್ ಲಾಕ್, ರೊಮ್ಯಾಂಟಿಕ್ ಸೀನ್​ಗಳು ಹೆಚ್ಚಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಇದು ಒಂದಷ್ಟು ಮಂದಿಯ ಮನಸ್ಸು ಗೆದ್ದಿದ್ದರೆ, ಮತ್ತೊಂದಿಷ್ಟು ಮಂದಿ ಈ ಬಗ್ಗೆ ಟೀಕೆ ವ್ಯಕ್ತ ಪಡಿಸುತ್ತಿದ್ದಾರೆ.

'ಗೆಹ್ರೈಯಾನ್' ನಲ್ಲಿ ದೀಪಿಕಾ ಪಡುಕೋಣೆ ಹಾಟ್‌ನೆಸ್‌ನ ಮಿತಿ ಮೀರಿದ್ದಾರೆ ಎನ್ನುವಂತಹ ಕಮೆಂಟ್‌ಗಳು ಕೂಡ ಬರುತ್ತಿದೆ. ಸಾಕಷ್ಟು ಪರ ವಿರೋಧ ಮಾತುಗಳ ನಡುವಲ್ಲೂ ಈ ಚಿತ್ರ ಹಿಟ್ ಲಿಸ್ಟ್ ಸೇರಿಕೊಂಡಿದೆ. ಹೀಗಾಗಿ ನೆಗೆಟಿವ್ ಕಮೆಂಟ್‌ಗಳಿಗೆ ತಲೆಕೆಡಿಸಿಕೊಳ್ಳದ ದೀಪಿಕಾ 'ಗೆಹ್ರೈಯಾನ್' ಸಕ್ಸಸ್‌ ಅನ್ನು ತನ್ನ ಕುಟುಂಬದವರೊಂದಿಗೆ ಆಚರಿಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಶನಿವಾರ (ಫ್ರೆಬ್ರವರಿ 26) ರಂದು ಬೆಂಗಳೂರಿಗೆ ಬಂದಿಳಿದಿದ್ದಾರೆ. ಈ ವೀಕೆಂಡ್‌ನಲ್ಲಿ ಕುಟುಂಬದವರೊಂದಿಗೆ ಇರಲಿರುವ ದೀಪಿಕಾ 'ಗೆಹ್ರೈಯಾನ್' ಚಿತ್ರದ ಸಕ್ಸಸ್ ಅನ್ನು ಸೆಲೆಬ್ರೇಟ್ ಮಾಡಲಿದ್ದಾರಂತೆ.

ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಶ್ರೀದೇವಿ ಮತ್ತೊಬ್ಬ ಪುತ್ರಿ
ಹೌದು.. 'ಗೆಹ್ರೈಯಾನ್' ಸಿನಿಮಾದಿಂದ ದೀಪಿಕಾಗೆ ಪರ ವಿರೋಧ ಕಮೆಂಟ್‌ಗಳು ಬಂದಿವೆ. ಹೀಗಿದ್ದರು ದೀಪಿಕಾ ತನ್ನ ಸಿನಿಮಾದ ಬಗ್ಗೆ ವಿರೋಧ ಮಾತನಾಡಿದವರ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇದೀಗ ಬೆಂಗಳೂರಿನಲ್ಲಿರುವ ತನ್ನ ಕುಟುಂಬದವರನ್ನು ಸೇರಿಕೊಂಡಿರುವ ದೀಪಿಕಾ ಎರಡು ದಿನ ಇಲ್ಲೆ ಕಾಲ ಕಳೆಯಲಿದ್ದಾರೆ. ಸೋಮವಾರ ಅಂದರೇ (ಫೆಬ್ರವರಿ 28)ಕ್ಕೆ ಮತ್ತೆ ಮುಂಬೈ ಫ್ಲೈಟ್ ಹತ್ತಲಿದ್ದಾರೆ ದೀಪಿಕಾ. ನಂತರದಲ್ಲಿ ತನ್ನ ಮುಂದಿನ ಸಿನಿಮಾ ಶೂಟಿಂಗ್‌ನಲ್ಲಿ ದೀಪಿಕ ತೊಡಗಿಸಿಕೊಳ್ಳಲಿದ್ದಾರಂತೆ.

Deepika Padukone Travels to Bengaluru to Celebrate ‘Gehraiyaan’ Success With Family


ಬಾಲಿವುಡ್ ಚಿತ್ರ 'ಗೆಹ್ರೈಯಾನ್' ಬಿಡುಗಡೆಗೂ ಮೊದಲೇ ತನ್ನ ಟ್ರೈಲರ್‌ನಿಂದ ಸಾಕಷ್ಟು ಸುದ್ದಿಯಾಗಿತ್ತು. ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯಾ ಪಾಂಡೆ ಅಭಿನಯದ ಚಿತ್ರ ಸಾಕಷ್ಟು ಬೋಲ್ಡ್ ಸೀನ್‌ಗಳನ್ನು ಒಳಗೊಂಡಿದ್ದು, ಚಿತ್ರ ಬಿಡುಗಡೆಯ ನಂತರವೂ ಸುದ್ದಿಯಾಗ್ತಿದೆ. ಚಿತ್ರದಲ್ಲಿ ಜೋಡಿಗಳ ಬೋಲ್ಡ್, ಹಾಟ್ ಲುಕ್ , ಬಿಕಿನಿ, ಲಿಪ್ ಲಾಕ್ ಮೊದಲಾದ ದೃಶ್ಯಗಳು ವೈರಲ್ ಆಗಿವೆ. 'ಗೆಹ್ರೈಯಾನ್' ಅಕ್ರಮ ಸಂಬಂಧಗಳ ಕುರಿತಾಗಿರುವ ಸಿನಿಮಾವಾಗಿದ್ದು, ಸಂಬಂಧಗಳ ಸೂಕ್ಷತೆ, ಮಹತ್ವದ ಬಗ್ಗೆ ಹಲವು ಸಂದೇಶಗಳನ್ನು ನೀಡುತ್ತದೆ. ಗೆಹ್ರೈಯಾನ್ ಚಿತ್ರ ದಾಂಪತ್ಯ, ಗಂಡ-ಹೆಂಡತಿಯ ಸಂಬಂಧ, ಪರಪುರುಷ, ಅಕ್ರಮ ಸಂಬಂಧದ ಬಗ್ಗೆ ತಿಳಿಸಿಕೊಡುತ್ತದೆ.

ಅಚ್ಚರಿ: ಆಲಿಯಾ ಭಟ್ ಚಿತ್ರವನ್ನು ಹೊಗಳಿದ ಕಂಗನಾ!
ಈ ಸಿನಿಮಾ ಟ್ರೇಲರ್‌ನಿಂದಲೇ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟುಹಾಕಿತ್ತು. ಹೀಗಾಗಿ ಓಟಿಟಿಯಲ್ಲಿ ಬಿಡುಗಡೆಯಾದ ದಿನದಂದೇ ಈ ಸಿನಿಮಾವನ್ನು ಅದೆಷ್ಟೊ ಮಂದಿ ವೀಕ್ಷಿಸಿದ್ದಾರೆ. ಸ್ಟಾರ್ ಸೆಲೆಬ್ರೆಟಿಗಳು ಕೂಡ ಈ ಚಿತ್ರವನ್ನು ವೀಕ್ಷಿಸಿದ್ದು, ಚಿತ್ರವ ಬಗ್ಗೆ ವಿಮರ್ಶೆ ನೀಡಿದ್ದಾರೆ. ನಟಿ ಕಂಗನಾ 'ಗೆಹ್ರೈಯಾನ್' ಚಿತ್ರದಬಗ್ಗೆ ನಕಾರಾತ್ಮಕವಾಗಿ ಬರೆದುಕೊಂಡು ಸುದ್ದಿಯಾಗಿದ್ದರು. "ನಾನು ಕೂಡ ಈ ಕಾಲದವಳೆ, ಇಂತಹ ರೋಮ್ಯಾನ್ಸ್ ಅನ್ನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಸಹಸ್ರಮಾನದ ಸಿನಿಮಾ, ಈ ಕಾಲದ ಸಿನಿಮಾ, ನಗರ ಪ್ರದೇಶದ ಸಿನಿಮಾ ಎಂದು ಉಲ್ಲೇಖ ಮಾಡುತ್ತಾ ಕಸವನ್ನು ಮಾರಾಟ ಮಾಡಬೇಡಿ" ಎಂದು ಗೆಹರಾಯಿಯಾ ಸಿನಿಮಾದ ಕುರಿತಾಗಿ ಟೀಕೆ ಮಾಡಿದ್ದಾರೆ. ಎಷ್ಟು ಪ್ರಮಾಣದಲ್ಲಿ ಅಶ್ಲೀಲತೆ ಮತ್ತು ಚರ್ಮ ಪ್ರದರ್ಶನವನ್ನು ಮಾಡಿದರೂ ಕೂಡಾ ಕೆಟ್ಟ ಸಿನಿಮಾವನ್ನು ಗೆಲ್ಲಿಸುವುದಕ್ಕೆ ಸಾಧ್ಯವಿಲ್ಲ. ಒಂದು ಕೆಟ್ಟ ಸಿನಿಮಾ ಯಾವಾಗಲೂ ಕೆಟ್ಟ ಸಿನಿಮಾ ಆಗಿಯೇ ಇರುತ್ತದೆ. ಇದು ಮೂಲಭೂತವಾದ ವಿಚಾರವಾಗಿದ್ದು ಇದರಲ್ಲಿ ಯಾವುದೇ ರೀತಿಯ ಗಹನವಾದ ವಿಷಯವಿಲ್ಲ, ಎಂದು ಹೇಳುವ ಮೂಲಕ ದೀಪಿಕಾ ಪಡುಕೋಣೆ ಅವರ ಹೊಸ ಸಿನಿಮಾವನ್ನು ಟೀಕಿಸಿದ್ದರು ಕಂಗನಾ.

Deepika Padukone Travels to Bengaluru to Celebrate ‘Gehraiyaan’ Success With Family


ಆನಂದ್ ಎಲ್. ರಾಯ್ ನಿರ್ದೇಶನದ ಈ ಚಿತ್ರವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ಮತ್ತು ಬಾತ್ರಾ ಅವರ ಜೌಸ್ಕಾ ಫಿಲ್ಮ್ಸ್ ಸಹಯೋಗದೊಂದಿಗೆ ಜಂಟಿಯಾಗಿ ನಿರ್ಮಿಸಲಾಗಿದೆ. ಈ ಚಿತ್ರವು ಫೆಬ್ರವರಿ 11 ರಂದು ಅಮೆಜಾನ್​​ ಪ್ರೈಮ್​ನಲ್ಲಿ ತೆರೆ ಕಂಡಿದೆ.

More from Filmibeat

English summary
Deepika finally took a breather and left for her hometown Bengaluru to celebrate the success of the film, and the phenomenal reactions, with her family as they reside there.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X