ನಟ ಗೋವಿಂದ ಮಗನ ಕಾರು ಅಪಘಾತ: ಅಪಾಯದಿಂದ ಪಾರು
ನಟ ಗೋವಿಂದ ಅವರ ಮಗ ಯಶವರ್ಧನ್ ಅಹುಜಾ ಪ್ರಯಾಣಿಸುತ್ತಿದ್ದ ಕಾರು ಬುಧವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಸಣ್ಣಪುಟ್ಟ ಗಾಯಗಳಿಂದ ಅವರು ಪಾರಾಗಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.
Recommended Video
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಗೋವಿಂದ, ತಮ್ಮ ಮಗ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ. 'ನನ್ನ ಮಗ ಯಶವರ್ಧನ್ ಕಾರು ಚಲಾಯಿಸುತ್ತಿದ್ದಾಗ ಎದುರಿನಿಂದ ಮತ್ತೊಂದು ಕಾರು ಇದ್ದಕ್ಕಿದ್ದಂತೆ ಬಂದು ಡಿಕ್ಕಿ ಹೊಡೆದಿದೆ. ಆದರೆ ನನ್ನ ಮಗನಿಗೆ ಏನೂ ಆಗಿಲ್ಲ. ಕೈಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಿಂತೆ ಪಡುವಂತಹದ್ದು ಏನೂ ಇಲ್ಲ. ಕಾರಿಗೆ ಸ್ವಲ್ಪ ಹೊಡೆದ ಬಿದ್ದಿದೆ' ಎಂದು ಹೇಳಿದ್ದಾರೆ.
ಈ ಬಗ್ಗೆ ಅವರು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ. ಈ ಅಪಘಾತದಲ್ಲಿ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಗೋವಿಂದ ಹೇಳಿದ್ದಾರೆ.

'ನಾವು ಪೊಲೀಸರಿಗೆ ದೂರು ನೀಡಲು ಹೋಗಿಲ್ಲ. ಏಕೆಂದರೆ ಆ ಚಾಲಕ ನಮ್ಮ ಕ್ಷಮೆ ಕೋರಿದ್ದಾನೆ. ಅದು ಯಶ್ ರಾಜ್ ಅವರಿಗೆ ಸೇರಿದ ಕಾರು. ಅವರೊಂದಿಗೆ ನಮ್ಮದು ಹಳೆಯ ಸಂಬಂಧ. ಅವರ ಚಾಲಕ ಕಾರು ಚಲಾಯಿಸುತ್ತಿದ್ದು, ಅವರೂ ಸುರಕ್ಷಿತವಾಗಿದ್ದಾರೆ' ಎಂದಿದ್ದಾರೆ.
ಗೋವಿಂದ ಅವರಂತೆಯೇ ಬಾಲಿವುಡ್‌ನಲ್ಲಿ ವೃತ್ತಿ ಕಟ್ಟಿಕೊಳ್ಳಲು ಬಯಸಿರುವುದಾಗಿ ಯಶವರ್ಧನ್ ಹೇಳಿಕೊಂಡಿದ್ದರು. ನಿರ್ದೇಶಕನಾಗಲು ಬಯಸಿದ್ದರೂ ನಟನೆ ಹೆಚ್ಚು ಸೆಳೆಯುತ್ತಿದೆ. ಇದಕ್ಕೆ ತಂದೆ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು.


Click it and Unblock the Notifications











