»   » ರಸ್ತೆ ಸುರಕ್ಷತೆ ಜಾಗೃತಿಗಾಗಿ ಯಾವಾಗಲು ರೆಡಿ: ಬಿಗ್‌ ಬಿ

ರಸ್ತೆ ಸುರಕ್ಷತೆ ಜಾಗೃತಿಗಾಗಿ ಯಾವಾಗಲು ರೆಡಿ: ಬಿಗ್‌ ಬಿ

Posted By:
Subscribe to Filmibeat Kannada

"ನನ್ನ ಫೇಸ್ ಮತ್ತು ವಾಯ್ಸ್ ಮ್ಯಾಗಿ ನೂಡಲ್ಸ್ ಮಾರುವ ಹಾಗಿದ್ದರೇ, ಸೀಮೆಂಟ್ ಸಹ ಮಾರಾಟ ಮಾಡಬಹುದು. ಹಾಗಿದ್ದರೇ ನಾನೇಕೆ ಸಮುದಾಯ ಮತ್ತು ಸಿಟಿಗೆ ಒಳ್ಳೆಯದನ್ನು ಮಾಡುವುದಕ್ಕೆ ಆಗುವುದಿಲ್ಲ?", ಹೀಗೆ ಹೇಳುತ್ತಾ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮುಂಬೈ ರಸ್ತೆ ಸುರಕ್ಷತೆ ಕ್ರಮಕ್ಕೆ ತಾವು ಸೇವೆ ನೀಡಲು ಉತ್ಸಾಹ ತೋರಿಸಿದ್ದಾರೆ.

ಸೆಲೆಬ್ರಿಟಿಗಳು ಅಂದ್ರೆ ಯಾವಾಗಲು ಬ್ಯುಸಿನೆಸ್ ಆಧಾರಿತ ಜಾಹೀರಾತಿಗಾಗಿ ಹೆಚ್ಚು ಉತ್ಸಾಹ ತೋರಿಸುತ್ತಾರೆ. ಆದ್ರೆ ಏನಪ್ಪಾ ಇದು ಅಮಿತಾಬ್ ಬಚ್ಚನ್‌ ಮ್ಯಾಗಿ ನೂಡಲ್ಸ್, ಮುಂಬೈ ಟ್ರ್ಯಾಫಿಕ್‌ ಪೊಲೀಸ್ ಎಂದು ಏನೇನೋ ಹೇಳ್ತಿದಾರಲ್ಲಾ ಅಂತ ಕನ್‌ಫ್ಯೂಸ್ ಆಗ್‌ ಬೇಡಿ. ಅಮಿತಾಬ್ ಹೀಗೆ ಹೇಳಿದ್ದು, ತಾವು ಮುಂಬೈ ನಲ್ಲಿ ನೆನ್ನೆ(ಜನವರಿ 10) ರಸ್ತೆ ಸುರಕ್ಷತಾ ಸಪ್ತಾಹ ದ 28 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ.[ಬಿಗ್ ಅಡ್ಡಾದಿಂದ ಟ್ವಿಟ್ಟರ್ ಪುಕ್ಕ ಹಿಡಿದ ಬಿಗ್ ಬಿ]

If I can sell Maggi, why can't I do something for Mumbai Traffic Police: Amitabh Bachchan

ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಮಿತಾಬ್ ಬಚ್ಚನ್ "ನನ್ನ ಸೇವೆಯನ್ನು ಮುಂಬೈ ಟ್ರಾಫಿಕ್ ಪೊಲೀಸರಿಗೆ ಆಫರ್ ಮಾಡಬೇಕು, ನಾನು ಇದನ್ನು ಹಲವು ವರ್ಷಗಳಿಂದ ಹಲವು ಅಧಿಕಾರಿಗಳಿಗೆ ಹೇಳುತ್ತಿದ್ದೇನೆ" ಎಂದು ತಮ್ಮ ಆಸೆಯನ್ನು ಹೇಳಿಕೊಂಡರು. ಜೊತೆಗೆ ತಾವು ರಸ್ತೆ ಸುರಕ್ಷತೆ ಜಾಗೃತಿ ಮೂಡಿಸಲು ಟ್ರ್ಯಾಫಿಕ್ ಪೊಲೀಸರು ಹೇಳಿದ ಸಮಯಕ್ಕೆ, ಸೃಜನಶೀಲತೆಯೊಂದಿಗೆ ಹಲವು ಸಿನಿಮಾಗಳನ್ನು ಮಾಡಲು ಯಾವುದೇ ಸಮಯದಲ್ಲೂ ಸಿದ್ದ ಎಂದು ಹೇಳಿದರು.[ಜಯಲಲಿತಾ ವಿಧಿವಶ: ರಜನಿಕಾಂತ್, ಅಮಿತಾಬ್ ಬಚ್ಚನ್ ಸಂತಾಪ]

English summary
While inaugurating the 28th edition of the Road Safety Week in Mumbai, Bollywood megastar Amitabh Bachchan has expressed his desire to offer his services to the Mumbai Traffic Police by becoming its face and voice.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada