»   » ಬಿಗ್ ಅಡ್ಡಾದಿಂದ ಟ್ವಿಟ್ಟರ್ ಪುಕ್ಕ ಹಿಡಿದ ಬಿಗ್ ಬಿ

ಬಿಗ್ ಅಡ್ಡಾದಿಂದ ಟ್ವಿಟ್ಟರ್ ಪುಕ್ಕ ಹಿಡಿದ ಬಿಗ್ ಬಿ

Posted By:
Subscribe to Filmibeat Kannada

ಬಿಗ್ ಅಡ್ಡಾದಲ್ಲಿ ಬ್ಲಾಗ್ ಬರೆದು ಬರೆದು ಬೋರ್ ಆದ ಮೇಲೆ, ಬ್ಲಾಗ್ ಗಿಂತ ಮೈಕ್ರೊ ಬ್ಲಾಗಿಂಗ್ ಸುಲಭ ಎನಿಸಿ ಬಿಗ್ ಬಿ ಟ್ವಿಟ್ಟರ್.ಕಾಂ ಅನ್ನು ಪ್ರವೇಶಿಸಿದ್ದಾರೆ. ಈಗಾಗಲೆ ತಮ್ಮ ವಾರಸ್ದಾರ ಜೂನಿಯರ್ ಬಚ್ಚನ್ ಟ್ವಿಟ್ಟರ್ ನಲ್ಲಿ ಆಗಾಗ ಕೆಂಡ ಕಾರುವ ಟ್ವೀಟ್ ಮಾಡುವ ಮೂಲಕ ವರ್ಲ್ಡ್ ಫೇಮಸ್ ಆಗಿರುವ ಸಂಗತಿ ಬಚ್ಚನ್ ಗೆ ನೆನಪಿದೆ. ಹಾಗಾಗಿ ಚುಟುಕಾಗಿ ಬಚ್ಚನ್ ಏನೇನೂ ಟ್ವೀಟ್ ಮಾಡುತ್ತಾರೆ ಎಂಬುದು ಅಭಿಮಾನಿಗಳ ಕುತೂಹಲ.

ವಿಶ್ವಕಪ್ ನಲ್ಲಿ ಸೋತು ಸುಣ್ಣವಾಗಿ ಹಿಂದುರಿಗಿದ್ದ ಧೋನಿಗೆ ತಮ್ಮ ಬ್ಲಾಗ್ ನಲ್ಲಿ ಬೆಂಬಲ ವ್ಯಕ್ತಪಡಿಸಿದ್ದ ಬಿಗ್ ಬಿಗೆ ಟ್ವೀಟ್ಟರ್ ನಲ್ಲಿ ಧೋನಿಯನ್ನು ಹಿಂಬಾಲಿಸುವ ಸೌಲಭ್ಯವಿದೆ. ಸಚಿನ್, ಯುವರಾಜ್ ಸೇರಿದಂತೆ ಹಲವಾರು ಕ್ರಿಕೆಟರ್ ಗಳು, ರಾಜಕೀಯ ನಾಯಕರು, ಬಾಲಿವುಡ್ ನ ಇಡೀ ಖಾನ್ ದಾನ್, ಬೆಡಗಿಯರ ದಂಡೇ ಟ್ವೀಟ್ಟರ್ ಹಿಂದೆ ಬಿದ್ದಿದೆ.

ತಮ್ಮ ಮೊಬೈಲ್ ಫೋನ್ ಬಳಸಿ ಟ್ವೀಟ್ ಮಾಡಿರುವ ಬಿಗ್ ಬಿ 'ನಾನು ಟ್ವೀಟ್ಟರ್ ಸೇರಿದ್ದೇನೆ.. ನೀವು ನನ್ನನ್ನು ಹಿಂಬಾಲಿಸಬಹುದು @srbachchan ಪ್ರೀತಿಯಿಂದ ' ಎಂದಿದ್ದಾರೆ. ಟ್ವಿಟ್ಟರ್ ಸೇರುವುದಾಗಿ ಎರಡು ತಿಂಗಳ ಹಿಂದೆ ಹೇಳಿದ್ದೆ. ಆದರೆ, ಸಮಯ ಕೂಡಿ ಬಂದಿರಲಿಲ್ಲ ಎಂದು ಬಿಗ್ ಹೇಳಿದ್ದಾರೆ. ಬಿಗ್ ಬಿ, ಜೂನಿಯರ್ ಬಚ್ಚನ್ ಟ್ವೀಟ್ಟರ್ ಸೇರಿದ್ದಾಯ್ತು ಅದ್ರೆ ಸದ್ಯ ಕೇನ್ಸ್ ನಲ್ಲಿ ಅಡ್ಡಾಡ್ದುತ್ತಿರುವ ಅಮಿತಾಬ್ ಸೊಸೆ ಐಶ್ವರ್ಯಾ ರೈ ಬಚ್ಚನ್ ಯಾಕೋ ಇನ್ನೂ ಬ್ಲಾಗ್, ಮೈಕ್ರೋ ಬ್ಲಾಗ್ ಪ್ರಪಂಚಕ್ಕೆ ಕಾಲಿರಿಸಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada