ಬಾಲಿವುಡ್‌ ನಟ ಜಾನ್ ಅಬ್ರಾಹಂಗೆ ಏನಾಗಿದೆ? ಆರೋಗ್ಯವಾಗಿದ್ದಾರಾ ಮಸಲ್ ಮ್ಯಾನ್?

ಬಾಲಿವುಡ್‌ನ ಹಂಡ್‌ಸಮ್ ಹೀರೋಗಳಲ್ಲಿ ಮಸಲ್ ಮ್ಯಾನ್ ಜಾನ್ ಅಬ್ರಹಾಂ ಕೂಡ ಒಬ್ಬರು. ತಮ್ಮ ದೇಹಾದಾಡ್ಯತೆಯಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟನೀತ. ಇತ್ತೀಚೆಗೆ ದೇಶಭಕ್ತಿಯನ್ನು ಸಾರುವ ಹಲವು ಸಿನಿಮಾಗಳಲ್ಲಿ ನಟಿ ಭಾರತೀಯರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಜಾನ್ ಅಬ್ರಹಾಂ ಅವರ ಕೆಲವ ಫೋಟೊಗಳು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿವೆ.

ಜಾನ್ ಅಬ್ರಹಾಂ ಸದಾ ಸುದ್ದಿಯಲ್ಲಿ ಇರುವ ನಟ. ಅವರ ಸಿನಿಮಾಗಳು ಬಂದಾಗ ಕೆಲವೊಮ್ಮೆ ವಿವಾದಕ್ಕೆ ಸಿಲುಕಿದ್ದೂ ಇದೆ. ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟ ಜಾನ್ ಅಬ್ರಹಾಂ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹಾಗಂತ ಈ ಬಾರಿ ಜಾನ್ ಅಬ್ರಹಾಂ ಸುದ್ದಿಯಲ್ಲಿರೋದು ಯಾವುದೇ ಸಿನಿಮಾದಿಂದಲ್ಲ. ಅವರ ಹೊಸ ಲುಕ್‌ನಿಂದ.

Is John Abraham looks healthy his unrecognizable look after weight loss trending

ಜಾನ್ ಅಬ್ರಾಹಂ ತನ್ನ ಕ್ಯಾರಾವ್ಯಾನ್‌ನಲ್ಲಿ ಇಬ್ಬರು ವ್ಯಕ್ತಿಯೊಂದಿಗೆ ನಿಂತು ತೆಗೆಸಿಕೊಂಡಿದ್ದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಜಾನ್ ಅಬ್ರಹಾಂ ಅವರ ಆರೋಗ್ಯದ ಬಗ್ಗೆ ಚರ್ಚೆಯನ್ನು ಹುಟ್ಟಾಕುವಂತೆ ಮಾಡಿದೆ. ವೈರಲ್ ಆಗುತ್ತಿರುವ ಈ ಫೋಟೊಗಳನ್ನು ನೋಡಿ ಫ್ಯಾನ್ಸ್ ತಮ್ಮ ನೆಚ್ಚಿನ ನಟ ಆರೋಗ್ಯವಾಗಿದ್ದಾರಾ? ಇಲ್ಲಾ ಆರೋಗ್ಯ ಸಮಸ್ಯೆ ಏನಾದರೂ ಇದೆಯೇ? ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಅಷ್ಟಕ್ಕೂ ವೈರಲ್ ಆಗುತ್ತಿರುವ ಈ ಫೋಟೊಗಳಲ್ಲಿ ಏನಿದೆ ಎಂದು ನೋಡುವುದಾರೇ, ಜಾನ್ ತಮ್ಮ ತಂಡದೊಂದಿಗೆ ವ್ಯಾನ್‌ನಲ್ಲಿ ನಗುತ್ತಾ ಪೋಸ್ ಕೊಟ್ಟಿದ್ದಾರೆ. ಆದರೆ, ಈ ಫೋಟೋಗಳಲ್ಲಿ ಜಾನ್ ಅಬ್ರಾಹಂ ಹಿಂದೆಂದೂ ಕಾಣಿಸದ ಲುಕ್‌ನಲ್ಲಿ ಕಂಡಿದ್ದಾರೆ. ಈ ಫೋಟೊದಲ್ಲಿ ಜಾನ್ ಅಬ್ರಹಾಂ ವೀಕ್ ಆದಂತೆ ಕಾಣುತ್ತಿದ್ದಾರೆ. ಹೊಸ ಸಿನಿಮಾಗಾಗಿ ಜಾನ್ ತೂಕವನ್ನು ಕಳೆದುಕೊಂಡಿದ್ದಾರಾ? ಈ ಕಾರಣಕ್ಕೆ ಹೀಗೆ ಕಾಣುತ್ತಿದ್ದಾರಾ? ಈ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.

ಜಾನ್ ಅಬ್ರಹಾಂ ತೂಕ ನಷ್ಟ ಅಷ್ಟೇ ಅಲ್ಲ. ಅವರ ಹೊಸ ಕೇಶ ವಿನ್ಯಾಸ ಕೂಡ ಅಷ್ಟೇ ಚರ್ಚೆಯಲ್ಲಿದೆ. ಅವರ ಕೂದಲಿನ ಬಣ್ಣದ ಬಗ್ಗೆ ಜನರು ಚರ್ಚೆ ಮಾಡುತ್ತಿದ್ದಾರೆ. ಜಾನ್ ಅವರ ಕೂದಲು ತಿಳಿ ಕಂದು ಬಣ್ಣದಲ್ಲಿದ್ದು, ಬಿಳಿ ಹಾಗೂ ಬೂದು ಶೇಡ್‌ಗಳು ಕಾಣಿಸುತ್ತಿವೆ. ಈ ಲುಕ್‌ನಲ್ಲಿ ಜಾನ್ ಅಬ್ರಹಾಂ ಹಿಂದೆಂದೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಈ ಲುಕ್ ಯಾಕೋ ಸರಿ ಕಾಣಿಸುತ್ತಿಲ್ಲ.

ಬಾಲಿವುಡ್‌ನಲ್ಲಿ ಜಾನ್ ಅಬ್ರಹಾಂ ಅಂದರೆ, ಮಸಲ್ ಮ್ಯಾನ್ ಅನ್ನೋದು ಕಣ್ಮುಂದೆ ಬರುತ್ತೆ. ಜಿಮ್‌ನಲ್ಲಿ ದೇಹವನ್ನು ದಂಡಿಸಿ ಕಟುಮಸ್ತಾಗಿರುವ ನಟ ಇಷ್ಟು ಸಣ್ಣಗಾಗಿದ್ದು ಸಿನಿಮಾಗೆ ಇರಬಹುದಾ? ಎಂಬ ಅನುಮಾನ ಇನ್ನೊಂದು ಕಡೆ ಮೂಡಿದೆ. ಆದರೆ, ಜಾನ್ ಯಾವ ಪ್ರಾಜೆಕ್ಟ್‌ನ ಶೂಟಿಂಗ್‌ನಲ್ಲಿದ್ದಾರೆಂಬುದು ಇನ್ನೂ ತಿಳಿದಿಲ್ಲ. ಬಹುಶಃ ಈ ಹೊಸ ಲುಕ್ ಅವರ ಮುಂದಿನ ಸಿನಿಮಾ ಅಥವಾ ವೆಬ್ ಸೀರಿಸ್‌ಗಾಗಿ ಇದ್ದರೂ ಇರಬಹುದು ಎಂದು ಅಂದಾಜಿಸಲಾಗಿದೆ. ಸದ್ಯಕ್ಕೆ ಈ ಲುಕ್ ಬಗ್ಗೆ ಅಧಿಕೃತವಾಗಿ ಎಲ್ಲೂ ವರದಿಯಾಗಿಲ್ಲ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಜಾನ್ ಅಬ್ರಾಹಂ ಅವರ ಲುಕ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಹಲವು ಮಂದಿ ಜಾನ್ ಅಬ್ರಹಾಂ ಲುಕ್ ಅನ್ನು ಶ್ಲಾಘಿಸಿದರೆ, ಕೆಲವರು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜಾನ್ ಅಬ್ರಹಾಂ ತೆಳ್ಳಗೆ, ವಯಸ್ಸಾದವರಂತೆ ಕಾಣುತ್ತಿದ್ದಾರೆಂದು ಹೇಳಿದ್ದಾರೆ. ಜಾನ್ ಅಬ್ರಹಾಂ ಬಾಲಿವುಡ್‌ನ ಅತ್ಯಂತ ಫಿಟ್ ನಟರಲ್ಲಿ ಒಬ್ಬರು. ಅವರು ತಮ್ಮ ಶಿಸ್ತುಬದ್ಧ ಜೀವನಶೈಲಿ, ಕಠಿಣ ವರ್ಕೌಟ್ ಮತ್ತು ಶುದ್ಧ ಆಹಾರ ಪದ್ಧತಿಗೆ ಹೆಸರುವಾಸಿ. ಹೀಗಾಗಿ ಈ ಲುಕ್‌ ಅನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ.

More from Filmibeat

English summary
Is John Abraham looks healthy his unrecognizable look after weight loss trending.
Read more about: john abraham actor fitness
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X