ಶಂಕರ್- ಅನಿಲ್ ಕಪೂರ್ ಭೇಟಿಯ ಗುಟ್ಟೇನು? ಗೇಮ್ ಚೇಂಜರ್ ಬಳಿಕ 'ನಾಯಕ್ 2' ಕೈ ಹಾಕ್ತಾರಾ?

ಬಾಲಿವುಡ್ ನಟ ಅನಿಲ್ ಕಪೂರ್ ಹಾಗೂ ನಿರ್ದೇಶಕ ಶಂಕರ್ ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಶಂಕರ್ 'ಗೇಮ್ ಚೇಂಜರ್' ಹಾಗೂ 'ಇಂಡಿಯನ್ 2' ಸಿನಿಮಾಗಳ ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದರೂ, ಇವರಿಬ್ಬರ ಭೇಟಿ ಕುತೂಹಲ ಕೆರಳಿಸಿದೆ.

ಶಂಕರ್ ಹಾಗೂ ಅನಿಲ್ ಕಪೂರ್ ಇಬ್ಬರಿಗೆ ಇದೇನು ಹೊಸ ಪರಿಚಯವೇನು ಅಲ್ಲ. 23 ವರ್ಷಗಳ ಹಿಂದೆ ಶಂಕರ್ ನಿರ್ದೇಶಿಸಿದ 'ನಾಯಕ್' ಸಿನಿಮಾದಲ್ಲಿ ಅನಿಲ್ ಕಪೂರ್‌ ನಟಿಸಿದ್ದರು. ಇದು ಶಂಕರ್ ಅವರೇ ನಿರ್ದೇಶಿಸಿದ್ದ 1999ರಲ್ಲಿ ತೆರೆ ಕಂಡಿದ್ದ 'ಮೊದಲ್‌ವನ್' ಸಿನಿಮಾ ರಿಮೇಕ್ ಇದಾಗಿತ್ತು. ಇದು ಬಾಕ್ಸಾಫೀಸ್‌ನಲ್ಲಿ ಆ ಮಟ್ಟಿಗೆ ಸಕ್ಸಸ್ ಕಂಡಿರಲಿಲ್ಲ.

Nayak director Shankar met Anil Kapoor buzz is that planning for Nayak 2

'ನಾಯಕ್' ಸಿನಿಮಾ ರಿಲೀಸ್ ಬಳಿಕ ಈ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಕೇಳಿಬಂದವು. ಅಲ್ಲದೆ ಇದು ಶಂಕರ್ ನಿರ್ದೇಶಿಸಿದ ಮೊದಲ ಹಿಂದಿ ಭಾಷೆಯ ಸಿನಿಮಾ ಆಗಿತ್ತು. ಈ ಸಿನಿಮಾ ಬಳಿಕ ಮತ್ತೆ ಶಂಕರ್ ಹಾಗೂ ಅನಿಲ್ ಕಪೂರ್ ಒಟ್ಟಿಗೆ ಕೆಲಸ ಮಾಡಲಿಲ್ಲ. ಅದೇ ಈಗ 23 ವರ್ಷಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡಿದ್ದು ಬಾಲಿವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಿಗ್ ಬಜೆಟ್ ಸಿನಿಮಾಗಳನ್ನೇ ನಿರ್ದೇಶಿಸಿರೋ ಶಂಕರ್ ಬಾಲಿವುಡ್ ನಟ ಅನಿಲ್ ಕಪೂರ್ ಅನ್ನು ಭೇಟಿ ಮಾಡಿದ್ದಾರೆ. ಇಬ್ಬರು ಭೇಟಿಯಾಗುತ್ತಿದ್ದಂತೆ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುವುದಕ್ಕೆ ಶುರುವಾಗಿದ್ದವು. ಆ ಬಳಿಕ ಶಂಕರ್ ಹಾಗೂ ಅನಿಲ್ ಕಪೂರ್ ಭೇಟಿಯ ಬಳಿಕ 'ನಾಯಕ್' ಸೀಕ್ವೆಲ್‌ ಬಗ್ಗೆ ಬರುತ್ತಾ ಅಂತ ಚರ್ಚೆ ಮಾಡಲಾಗುತ್ತಿದೆ.

Nayak director Shankar met Anil Kapoor buzz is that planning for Nayak 2

ಶಂಕರ್ ಮುಂಬೈನಲ್ಲಿರುವ ಅನಿಲ್ ಕಪೂರ್ ಮನೆಯಲ್ಲಿ ಸ್ಕ್ರಿಪ್ಟ್ ವಿಚಾರವಾಗಿ ಭೇಟಿ ಮಾಡಿದ್ದಾರೆ ಅನ್ನುವ ಸುದ್ದಿನೂ ಹರಿದಾಡುತ್ತಿದೆ. ಬಹಳ ದಿನಗಳ ಬಳಿಕ ಶಂಕರ್ ಹಾಗೂ ಅನಿಲ್ ಕಪೂರ್ ಭೇಟಿಯಾಗಿದ್ದರಿಂದ ಸಿನಿಮಾ ವಿಚಾರವಾಗಿಯೇ ಭೇಟಿ ಮಾಡಲು ಬಂದಿದ್ದರು ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತವಾದ ಮಾಹಿತಿ ಹೊರಬಿದ್ದಿಲ್ಲ. 'ನಾಯಕ್' ಸೀಕ್ವೆಲ್‌ಗಾಗಿಯೇ ಭೇಟಿ ಮಾಡಿದ್ರಾ? ಇಲ್ಲ ಬೇರೆ ಕಾರಣವಿತ್ತಾ ಅನ್ನೋದು ಗೊತ್ತಾಗಿಲ್ಲ.

ಅಂದ್ಹಾಗೆ 'ನಾಯಕ್' ಸಿನಿಮಾದಲ್ಲಿ ಅನಿಲ್ ಕಪೂರ್ ಜೊತೆ ಖಳನಾಯಕನಾಗಿ ಅಮರೀಶ್ ಪುರಿ ನಟಿಸಿದ್ದರು. ಇವರೊಂದಿಗೆ ಬಾಲಿವುಡ್ ನಟಿ ರಾಣಿ ಮುಖರ್ಜಿ, ಪರೇಶ್ ರಾವಲ್, ಸೌರಭ್ ಶುಕ್ಲಾ, ಜಾನಿ ಲಿವರ್ ಅಂತಹ ದಿಗ್ಗಜರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಇಂದಿಗೂ ಬಾಲಿವುಡ್‌ನ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದಾಗಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಅಂದುಕೊಂಡಷ್ಟು ಗಳಿಕೆ ಕಂಡಿರಲಿಲ್ಲ.

ಈಗ ಶಂಕರ್ ತನ್ನ ಸೂಪರ್‌ ಹಿಟ್ ಸಿನಿಮಾಗಳ ಸೀಕ್ವೆಲ್ ಮಾಡುತ್ತಿರುವುದರಿಂದ 'ನಾಯಕ್ 2' ಕೂಡ ಬರಬಹುದೇನೋ ಎಂದು ಗೆಸ್ ಮಾಡಲಾಗುತ್ತಿದೆ. ಈಗಾಗಲೇ '2.0', 'ಇಂಡಿಯನ್ 2' ನಿರ್ದೇಶನ ಮಾಡಿದ್ದು, 'ನಾಯಕ್' ಕೂಡ ಸೀಕ್ವೆಲ್ ಆದರೂ ಆಗಬಹುದು. ಏನಕ್ಕೂ ಇನ್ನು ಖುದ್ದು ಶಂಕರ್ ಹಾಗೂ ಅನಿಲ್ ಕಪೂರ್ ಅವರೇ ಹೇಳಬೇಕಿದೆ.

More from Filmibeat

English summary
Buzz On Nayak 2: Director Shankar met Anil Kapoor in mumbai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X