»   » ಸಲ್ಲು 'ಟ್ಯೂಬ್‌ಲೈಟ್' ಬಿಡುಗಡೆಗೆ ಹೆದರಿದ ಪಾಕಿಸ್ತಾನಿ ವಿತರಕರು!

ಸಲ್ಲು 'ಟ್ಯೂಬ್‌ಲೈಟ್' ಬಿಡುಗಡೆಗೆ ಹೆದರಿದ ಪಾಕಿಸ್ತಾನಿ ವಿತರಕರು!

Posted By:
Subscribe to Filmibeat Kannada

ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಟ್ಯೂಬ್ ಲೈಟ್' ಜೂನ್ 23 ರಂದು ತೆರೆಗೆ ಬರುತ್ತಿದೆ. ಆದರೆ ಪಾಕಿಸ್ತಾನದಲ್ಲೂ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸಲ್ಮಾನ್ ಖಾನ್‌ಗೆ, ಈಗ ಅವರ ಚಿತ್ರ ಬಿಡುಗಡೆಗೆ ಸಮಸ್ಯೆ ಎದುರಾಗಿದೆ.['ವಿಶ್ವ ಪರಿಸರ ದಿನ' ಪ್ರಯುಕ್ತ 'ಇ-ಸೈಕಲ್ಸ್' ಲಾಂಚ್ ಮಾಡಿದ ಸಲ್ಮಾನ್]

'ಟ್ಯೂಬ್ ಲೈಟ್' ಚಿತ್ರ ಪಾಕಿಸ್ತಾನದಲ್ಲಿ ಬಿಡುಗಡೆ ಆಗುವುದಿಲ್ಲವಂತೆ. ಕಾರಣ ಪಾಕಿಸ್ತಾನದ ಸ್ಥಳೀಯ ಸಿನಿಮಾ ವಿತರಕರು ಯಾರು ಸಹ ಈ ಚಿತ್ರ ಬಿಡುಗಡೆಗೆ ಮುಂದೆ ಬಂದಿಲ್ಲವಂತೆ. ಅಲ್ಲದೇ ಪಾಕಿಸ್ತಾನದಲ್ಲಿ ಹೆಚ್ಚು ಅಭಿಮಾನಿಗಳನ್ನು ಸಲ್ಮಾನ್ ಹೊಂದಿದ್ದರೂ ಸಹ ಅವರ ಈ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತವಾಗಲಿದೆಯಂತೆ.

Pakistan distributors are hesitant to acquire Salman Khan 'Tubelight' film

ಭಾರತೀಯ ಚಲನಚಿತ್ರ ರಫ್ತುದಾರರ ಸಂಘದ ಅಧ್ಯಕ್ಷ ಹಿರಾಚಂದ್ ದಾಂಡ್, "ಪಾಕಿಸ್ತಾನದ ಸ್ಥಳೀಯ ಸಿನಿಮಾ ವಿತರಕರು 'ಟ್ಯೂಬ್ ಲೈಟ್' ಚಿತ್ರ ಬಿಡುಗಡೆ ಮಾಡಲು ಹಿಂಜರಿಯುತ್ತಿದ್ದಾರೆ. ಕಾರಣ ಅಲ್ಲಿನ ಎರಡು ದೊಡ್ಡ ಸಿನಿಮಾಗಳು ಸಹ ಈದ್ ದಿನದಂದೇ ಬಿಡುಗಡೆ ಆಗುತ್ತಿವೆ. ಆದ್ದರಿಂದ ಆ ಚಿತ್ರ ನಿರ್ಮಾಪಕರು ಯಾವುದೇ ದೇಶದ ಚಿತ್ರಗಳ ಸ್ಪರ್ಧೆಯನ್ನು ಬಯಸುತ್ತಿಲ್ಲ. ಅಲ್ಲದೇ ಸಲ್ಮಾನ್ ಖಾನ್ ರಂತ ದೊಡ್ಡ ಸ್ಟಾರ್ ಚಿತ್ರವನ್ನು ಕಂಡಿತ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ನಿರ್ಧರಿಸಿದ್ದಾರೆ. ಸಲ್ಮಾನ್ ಖಾನ್ ಗೆ ಅಪಾರ ಅಭಿಮಾನಿಗಳು ಇದ್ದರೂ ಸಹ ಸ್ಥಳೀಯ ಚಿತ್ರವಾದ್ದರಿಂದ ಫ್ಯಾನ್ಸ್ ಸಹ ವಿರೋಧ ವ್ಯಕ್ತಪಡಿಸಬಹುದು" ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ನಟನೆಯ 'ಟ್ಯೂಬ್ ಲೈಟ್' ಚಿತ್ರವನ್ನು ಕಬೀರ್ ಖಾನ್ ರವರು ನಿರ್ದೇಶನ ಮಾಡಿದ್ದು, ಈ ಚಿತ್ರದಲ್ಲಿ ಸಲ್ಲು ಸಹೋದರ ಸೋಹೈಲ್ ಖಾನ್ ಸಹ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಸಲ್ಲುಗೆ ಚೀನಾ ಮೂಲದ Zhu Zhu ಜೊತೆಯಾಗಿ ನಟಿಸಿದ್ದಾರೆ.[ಪ್ಲೀಸ್.. ಸಲ್ಮಾನ್ ನನಗೆ ಬಿಟ್ಟುಬಿಡು: ಆಲಿಯಾ'ಗೆ ಕತ್ರಿನಾ ರಿಕ್ವೆಸ್ಟ್]

English summary
Salman Khan’s Tubelight will not release in Pakistan because no local distributor is willing to come forward and release it there.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada