»   » ಪ್ಲೀಸ್.. ಸಲ್ಮಾನ್ ನನಗೆ ಬಿಟ್ಟುಬಿಡು: ಆಲಿಯಾ'ಗೆ ಕತ್ರಿನಾ ರಿಕ್ವೆಸ್ಟ್

ಪ್ಲೀಸ್.. ಸಲ್ಮಾನ್ ನನಗೆ ಬಿಟ್ಟುಬಿಡು: ಆಲಿಯಾ'ಗೆ ಕತ್ರಿನಾ ರಿಕ್ವೆಸ್ಟ್

Posted By:
Subscribe to Filmibeat Kannada

ಟೈಟಲ್ ನೋಡಿ ಕತ್ರಿನಾ ಕೈಫ್ ನಿಜವಾಗಲು ಹೀಗೆ ಅದೂ.. ಆಲಿಯಾ ಭಟ್ ರಲ್ಲಿ ಕೇಳಿಕೊಂಡ್ರಾ ಅಂತ ನಿಮಗೆಲ್ಲಾ ಸಂಶಯ ಕಾಡಬಹುದು. ಆದ್ರೆ ಇದೇ ನಿಜ.[ಬಾಹುಬಲಿ 'ಪ್ರಭಾಸ್'ಗಾಗಿ ಶಾರೂಖ್ ಚಿತ್ರ ರಿಜೆಕ್ಟ್ ಮಾಡಿದ ಆಲಿಯಾ ಭಟ್.!]

ಬಾಲಿವುಡ್ ನಟ ಸಲ್ಮಾನ್ ಖಾನ್, ನಟಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಜುಲೈನಲ್ಲಿ ನ್ಯೂಯಾರ್ಕ್ ನಲ್ಲಿ ನಡೆಯಲಿರುವ 18ನೇ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮವನ್ನು ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೊನ್ನೆಯಷ್ಟೆ ಐಫಾ(IIFA) ಪ್ರೆಸ್ ಕಾನ್ಫರೆನ್ಸ್ ಜರುಗಿತ್ತು. ಈ ವೇದಿಕೆಯಲ್ಲಿ ಕತ್ರಿನಾ ಕೈಫ್, ಆಲಿಯಾ ಭಟ್ ರಲ್ಲಿ ಸಲ್ಮಾನ್ ಖಾನ್ ರನ್ನು ನನಗೆ ಬಿಟ್ಟುಕೊಡು ಎಂಬ ಮಾತುಗಳನ್ನು ಆಡಿ ಕಾನ್ಫರೆನ್ಸ್ ನಲ್ಲಿ ನೆರೆದಿದ್ದ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ. ಆ ವೇದಿಕೆಯಲ್ಲಿ ನಡೆದಿದ್ದಾದರೂ ಏನು ಎಂಬುದನ್ನು ತಿಳಿಯಲು ಮುಂದೆ ಓದಿರಿ..

ಎಲ್ಲದ್ದಕ್ಕೂ ಕಾರಣ ಆಲಿಯಾ ಭಟ್

ಪ್ರೆಸ್ ಕಾನ್ಫರೆನ್ಸ್ ನಲ್ಲಿ ಪತ್ರಕರ್ತರೊಬ್ಬರು ಆಲಿಯಾ ಭಟ್ ಗೆ ಸಲ್ಮಾನ್ ಖಾನ್ ಜೊತೆ ನೀವು ನಟಿಸುವುದನ್ನು ನೋಡಬಹುದಾ? ಎಂದು ಪ್ರಶ್ನೆ ಹಾಕಿದ್ದರು. ಇದಕ್ಕೆ ಉತ್ತರಿಸಿದ ಆಲಿಯಾ, "ಅದು ನನಗೆ ಗೊತ್ತಿಲ್ಲ. ಆದ್ರೆ ಅದು ಶೀಘ್ರದಲ್ಲಿ ನೆರವೇರಲಿದೆ ಅನ್ನೋ ಭರವಸೆ ಇದೆ. ಪತ್ರಕರ್ತರು ಹಾಗೆ ಒಮ್ಮೆ ಸಲ್ಮಾನ್ ಖಾನ್ ರಲ್ಲಿ ನನ್ನ ಕಡೆಯಿಂದ ರಿಕ್ವೆಸ್ಟ್ ಮಾಡಿ.. ಆ ಕನಸು ಈಡೇರುವಂತೆ ಮಾಡಿ" ಎಂದು ಮಗುಳುನಗೆಯಿಂದ ಹೇಳಿದರು.

ಆಲಿಯಾ ಮಾತಿಗೆ ನಕ್ಕು ನಕ್ಕು ಸುಸ್ತಾದ ಸಲ್ಮಾನ್

ಮಾತು ಮುಂದುವರೆಸಿದ ಆಲಿಯಾ ಭಟ್, "ನಾವು 'ಪಪ್ಪ ದಿ ಗ್ರೇಟ್' ಸಿನಿಮಾ ರಿಮೇಕ್ ಮಾಡಬೇಕು ಎಂದು ಕೊಂಡಿದ್ದೇವೆ' ಎಂದ ತಕ್ಷಣ ಸಲ್ಮಾನ್ ಖಾನ್ ನಕ್ಕು ನಕ್ಕು ಸುಸ್ತಾದರು. ಯಾಕಂದ್ರೆ 'ಪಪ್ಪ ದಿ ಗ್ರೇಟ್' ಬಾಲಿವುಡ್ ಸಿನಿಮಾ.

ಆಲಿಯಾಳಲ್ಲಿ ಕತ್ರಿನಾ ರಿಕ್ವೆಸ್ಟ್

'ಪಪ್ಪ ದಿ ಗ್ರೇಟ್' ಸಿನಿಮಾ ಬಗ್ಗೆ ಪ್ರಸ್ತಾಪವಾಗುತ್ತಿದ್ದಂತೆ ಸಲ್ಮಾನ್ ಖಾನ್, ಆಲಿಯಾ ಭಟ್ ಜೊತೆಯಲ್ಲೇ ಕುಳಿತಿದ್ದ ಕತ್ರಿನಾ ಕೈಫ್ ಅದೇ ವೇಳೆ, "ಪ್ಲೀಸ್ ಆಲಿಯಾಳನ್ನು ವರುಣ್ ಗೆ ಬಿಟ್ಟು ಬಿಡಿ, ಸಲ್ಮಾನ್ ಖಾನ್ ರನ್ನು ನನಗೆ ಬಿಡಿ" ಎಂದು ಹೇಳಿ ವೇದಿಕೆ ಮುಂಭಾಗದಲ್ಲಿದ್ದ ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದರು.

ಸಲ್ಮಾನ್ ಖಾನ್ ಗೆ ಎದುರಾದ ಪ್ರಶ್ನೆ

ಸಲ್ಲುಗೆ ನೀವು ಆಕ್ಟ್ ಮಾಡುವ ಮುನ್ನ ಯಾವ ವಿಷಯದ ಬಗ್ಗೆ ಚೆಕ್ ಮಾಡಿಕೊಳ್ಳುತ್ತೀರಿ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಬಾಯ್ ಜಾನ್ "ಎರಡು ವಿಷಯಗಳಿವೆ. ಒಂದು ನನ್ನ ಉಸಿರಾಟ. ಎರಡನೇಯದು ನನ್ನ ಜಿಪ್ಪರ್. ಇದನ್ನು ಎಲ್ಲರೂ ಸಹ ಚೆಕ್ ಮಾಡಿಕೊಳ್ಳುತ್ತಾರೆ" ಎಂದು ಉತ್ತರಿಸಿದರು.

'ಬೆಸ್ಟ್ ಆಕ್ಟರ್' ನಾಮನಿರ್ದೇಶನ

ಸಲ್ಮಾನ್ ಖಾನ್ ತಮ್ಮ 'ಸುಲ್ತಾನ್' ಚಿತ್ರದ ನಟನೆಗಾಗಿ 18ನೇ ಐಫಾ ಪ್ರಶಸ್ತಿಗೆ 'ಅತ್ಯುತ್ತಮ ನಟ' ನಾಮನಿರ್ದೇಶನ ಆಗಿದ್ದಾರೆ. ಆದರೆ ಈ ಬಗ್ಗೆ ಸಲ್ಲು ಬೆಸ್ಟ್ ಆಕ್ಟರ್ ಖಂಡಿತ ನಾನಲ್ಲ. ನನ್ನ ನಟನೆಗೆ ಅವಾರ್ಡ್ ಅನ್ನು ಅಭಿಮಾನಿಗಳಿಂದ ಪಡೆಯುತ್ತೇನೆ. ಆದರೆ ಪ್ರಶಸ್ತಿಗಳು ನನ್ನದಲ್ಲ. ನಾಮನಿರ್ದೇಶನದಿಂದ ನನ್ನ ಹೆಸರನ್ನು ಹೊರತೆಗೆಯಿರಿ. ಪ್ರಶಸ್ತಿ ನನಗೆ ಲಭಿಸಿದರೂ ಅದನ್ನು ನಾನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಜುಲೈ 15-16 ಕ್ಕೆ ಐಫಾ ಪ್ರಶಸ್ತಿ ಪ್ರದಾನ ಸಮಾರಂಭ

18ನೇ ಐಫಾ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ 2017 ಜುಲೈ 15-16 ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಬಾಲಿವುಡ್ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಹೋಸ್ಟ್ ಮಾಡಲಿದ್ದಾರೆ.

English summary
“Please leave Alia Bhatt for Varun Dhawan and Salman Khan for me,” said Katrina Kaif at the IIFA press conference recently in Mumbail.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada