For Quick Alerts
  ALLOW NOTIFICATIONS  
  For Daily Alerts

  'ದಂಗಲ್‌' ಸಿನಿಮಾಗೆ ಅಮೀರ್ ಖಾನ್ ಪಡೆದ ಅತಿದೊಡ್ಡ ಪ್ರಶಂಸೆ ಇದು..

  By Suneel
  |

  ಡಿಸೆಂಬರ್ 23, 2016 ರಂದು ಬಿಡುಗಡೆ ಆದ ದಂಗಲ್ ಸಿನಿಮಾ 10 ದಿನಗಳ ಮುಕ್ತಾಯಕ್ಕೆ ರೂ.250 ಕೋಟಿ ಗಳಿಸಿತ್ತು. ನಟ, ನಿರ್ಮಾಪಕ ಆಗಿರುವ ಅಮೀರ್ ಖಾನ್ ರವರಿಗೆ ದಂಗಲ್ ಸಿನಿಮಾ ಗಲ್ಲಾ ಪೆಟ್ಟಿಗೆ ತುಂಬಿಸಿಕೊಡುವುದರ ಜೊತೆಗೆ ಈಗ ಹೊಸ ಹೆಸರನ್ನು ನೀಡಿದೆ.

  ಕುಸ್ತಿ ಪಟು ಮಹಾವೀರ್ ಸಿಂಗ್ ಪೊಘಾಟ್ ಅವರ ಜೀವನಾಧಾರಿತ ಸಿನೆಮಾ 'ದಂಗಲ್' ಅಮೀರ್ ಖಾನ್‌ ಗೆ ಬಹುದೊಡ್ಡ ಹಿಟ್ ಕೊಟ್ಟಿದ್ದು, ಬಾಲಿವುಡ್ ಹಿರಿಯ ನಟರಿಂದಲೂ ಅಮೀರ್ ಉತ್ತಮ ಪ್ರಶಂಸೆಗಳನ್ನು ಪಡೆಯುತ್ತಿದ್ದಾರೆ. ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾ ನೋಡಿದ ಸಲ್ಮಾನ್ ಖಾನ್ ಮೊಟ್ಟ ಮೊದಲು 'ಸುಲ್ತಾನ್‌'ಗಿಂತ ಬೆಟರ್ ಎಂದಿದ್ದರು. ಈಗ ಅದಕ್ಕೂ ಮೀರಿದ ಪ್ರಶಂಸೆಯೊಂದನ್ನು ಪಡೆದಿದ್ದಾರೆ. ಅದೇನು ಮುಂದೆ ಓದಿ..['ದಂಗಲ್' ಕಲೆಕ್ಷನ್ ಫಸ್ಟ್‌ ಡೇ ಇಷ್ಟಾದ್ರೆ..ವಾರದಲ್ಲಿ 100 ಕೋಟಿ]

  ಅಮೀರ್ ಖಾನ್ ನೂತನ 'ರಾಜ್‌ ಕಪೂರ್'

  ಅಮೀರ್ ಖಾನ್ ನೂತನ 'ರಾಜ್‌ ಕಪೂರ್'

  'ದಂಗಲ್' ಸಿನಿಮಾದ ಅಭಿನಯದಿಂದ "ಅಮೀರ್ ಖಾನ್ ನೂತನ 'ರಾಜ್‌ ಕಪೂರ್' " ಎಂಬ ಅತಿದೊಡ್ಡ ಪ್ರಶಂಸೆ ಪಡೆದಿದ್ದಾರೆ. ಹೀಗೆ ಹೇಳಿದ್ದು ಯಾರು ..['ದಂಗಲ್' ಟ್ವಿಟರ್ ವಿಮರ್ಶೆ: ಸುಲ್ತಾನ್‌ ಗಿಂತ ಬೆಟರ್]

  ಅಮೀರ್ ಖಾನ್‌ ರನ್ನು ನೂತನ 'ರಾಜ್‌ ಕಪೂರ್' ಎಂದಿದ್ದು ಇವರೇ..

  ಅಮೀರ್ ಖಾನ್‌ ರನ್ನು ನೂತನ 'ರಾಜ್‌ ಕಪೂರ್' ಎಂದಿದ್ದು ಇವರೇ..

  ಅಮೀರ್ ಖಾನ್‌ ರನ್ನು ನೂತನ 'ರಾಜ್‌ ಕಪೂರ್' ಎಂದಿದ್ದು ಬೇರೆ ಯಾರು ಅಲ್ಲಾ. ಹಿರಿಯ ನಟ ರಾಜ್‌ ಕಪೂರ್ ಅವರ ಮಗ ರಿಷಿ ಕಪೂರ್.

  ಟ್ವಿಟರ್‌ ನಲ್ಲಿ ರಿಷಿ ಕಪೂರ್ ಹೇಳಿದ್ದು ಹೀಗೆ..

  ಟ್ವಿಟರ್‌ ನಲ್ಲಿ ರಿಷಿ ಕಪೂರ್ ಹೇಳಿದ್ದು ಹೀಗೆ..

  "ಅಮೀರ್ ಖಾನ್, ದಂಗಲ್ ನೋಡಿದೆ. ನನಗೆ ನೀವು ನೂತನ ರಾಜ್ ಕಪೂರ್- ನಟ, ನಿರ್ದೇಶಕ, ನಿರ್ಮಾಪಕ, ನಮ್ಮ ಕಾಲದ ಷೋಮ್ಯಾನ್, ನಿಜವಾಗಿಯೂ ಅದ್ಭುತ. ನಿಮಗೆ ದೇವರು ಒಳ್ಳೆಯದು ಮಾಡಲಿ" ಎಂದು ರಿಷಿ ಕಪೂರ್ ಟ್ವೀಟರ್ ಮಾಡಿದ್ದಾರೆ.

  ಅಮೀರ್ ಪ್ರತಿಕ್ರಿಯೆ ಹೀಗಿತ್ತು..

  ಅಮೀರ್ ಪ್ರತಿಕ್ರಿಯೆ ಹೀಗಿತ್ತು..

  ರಿಷಿ ಕಪೂರ್ ರವರ ಪ್ರಶಂಸೆಯ ಟ್ವೀಟ್‌ ಗೆ ಅಮೀರ್ ಖಾನ್ " ಸರ್, ನಾನು ಸ್ವೀಕರಿಸಿದ ಅತಿದೊಡ್ಡ ಪ್ರಶಂಸೆ ಇದು. ಧನ್ಯವಾದಗಳು ಸರ್. ಐ ಆಮ್ ಸೋ ಟಚ್ಡ್‌. ಲವ್ ಎ.." ಎಂದು ಬರೆದು ಕೈಮುಗಿಯುವ ಎಮೋಜಿ ಬಳಸಿ ಪ್ರತಿಕ್ರಿಯೆ ನೀಡಿದ್ದಾರೆ.

  ರಾಜ್‌ ಕಪೂರ್

  ರಾಜ್‌ ಕಪೂರ್

  ದಿವಂಗತ ರಣಬಿರ್ ರಾಜ್ ಕಪೂರ್ ರವರು "ಭಾರತೀಯ ಸಿನಿಮಾದ ಅತಿದೊಡ್ಡ ಷೋಮ್ಯಾನ್" ಎಂದು ಪ್ರಖ್ಯಾತವಾಗಿದ್ದಾರೆ. ಇವರು ಭಾರತೀಯ ಸಿನಿಮಾದ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಹಿಂದಿ ಸಿನಿಮಾ ಅಂಗಳದಲ್ಲಿ ಗುರುತಿಸಿಕೊಂಡಿದ್ದರು.

  English summary
  Aamir Khan has been winning applauds and love from both the critics and audiences post his terrific act in the film, Dangal. Highlighting the real life story of the wrestling champions, Geeta and Babita Phogat, the film is continuing its golden run at the box office. Now Rishi Kapoor calls Aamir Khan the new Raj Kapoor post watching Dangal!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X