For Quick Alerts
  ALLOW NOTIFICATIONS  
  For Daily Alerts

  'ದಂಗಲ್' ಕಲೆಕ್ಷನ್ ಫಸ್ಟ್‌ ಡೇ ಇಷ್ಟಾದ್ರೆ..ವಾರದಲ್ಲಿ 100 ಕೋಟಿ

  By Suneel
  |

  ನೆನ್ನೆ ತಾನೆ ವರ್ಲ್ಡ್‌ ವೈಡ್ ರಿಲೀಸ್ ಆದ ದಂಗಲ್ ಸಿನಿಮಾ ನೋಡಿ ಪ್ರೇಕ್ಷಕರು ಏನಂದ್ರು ಅಂತ ಹೇಳಿದ್ವಿ. ಈಗ ದಂಗಲ್‌ ಸಿನಿಮಾದ ಫಸ್ಟ್‌ ಡೇ ಕಲೆಕ್ಷನ್‌ ಬಗ್ಗೆ ಕೇಳಿದ್ರೆ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳೋದು ಪಕ್ಕಾ..!['ದಂಗಲ್' ಟ್ವಿಟರ್ ವಿಮರ್ಶೆ: ಸುಲ್ತಾನ್‌ ಗಿಂತ ಬೆಟರ್]

  ದಂಗಲ್ ಸಿನಿಮಾ ಫಸ್ಟ್‌ ಡೇ ಕಲೆಕ್ಷನ್ ಆಗಿ ಬರೋಬ್ಬರಿ 29.78 ಕೋಟಿ ರೂ ಗಳಿಸಿದ್ದು, ಇನ್ನೂ 2016 ರಲ್ಲಿ ಬಾಕ್ಸಾಫೀಸ್ ಕೊಳ್ಳೆ ಹೊಡೆವ ಬಹುದೊಡ್ಡ ಸಿನಿಮಾ ಎಂಬ ನಿರೀಕ್ಷೆ ಹುಟ್ಟಿಸಿದೆ. ಅಸಲಿಯಾಗಿ ಸಿನಿಮಾ ಫಸ್ಟ್‌ ಡೇ 30 ಕೋಟಿ ಗಳಿಸುತ್ತದೆ ಎಂಬ ನಿರೀಕ್ಷೆ ಹೊಂದಲಾಗಿತ್ತು. ಆದರೆ ಸ್ವಲ್ಪ ಪ್ರಮಾಣದ ಹಣದಿಂದ ನಿರೀಕ್ಷೆ ಹುಸಿಯಾಗಿದೆ. ಆದರೂ ಮೂಂದಿನ ದಿನಗಳಲ್ಲಿ ಉತ್ತಮವಾಗಿ ಗಲ್ಲಾ ಪೆಟ್ಟಿಗೆ ತುಂಬಿಸುವ ನೀರೀಕ್ಷೆ ಇಡಲಾಗಿದೆ. ಕಾರಣವೇನು ಗೊತ್ತೇ?[ನೋಟು ನಿಷೇಧದಿಂದ ಸಮಸ್ಯೆ ಆದರೂ ಪರವಾಗಿಲ್ಲ: ಅಮೀರ್]

  dagal 2

  ದಂಗಲ್ ಸಿನಿಮಾದಂಗಲ್ ಸಿನಿಮಾ

  ದಂಗಲ್‌ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಅಮೆರಿಕದಲ್ಲಿ ರೂ.5.49 ಕೋಟಿ, ಮಧ್ಯ ಪೂರ್ವ ದೇಶದಲ್ಲಿ ರೂ.4.62 ಕೋಟಿ ಆಸ್ಟ್ರೇಲಿಯಾದಲ್ಲಿ ರೂ.2.22 ಕೋಟಿ ಗಳಿಸಿದೆ. ವಿಶೇಷ ಅಂದ್ರೆ ದಂಗಲ್ ಸಿನಿಮಾ 5300 ಥಿಯೇಟರ್‌ಗಳಲ್ಲಿ ಪ್ರಪಂಚದಾದ್ಯಂತ ಡಿಸೆಂಬರ್ 23 ರಿಂದ ತೆರೆ ಕಂಡಿದೆ. ಕೆಲವು ದಿನಗಳ ಹಿಂದಿನಿಂದ ದಂಗಲ್ ಸಿನಿಮಾ ಸುಲ್ತಾನ್‌ ಸಿನಿಮಾ ದಾಖಲೆಯನ್ನು ಬ್ರೇಕ್‌ ಮಾಡಲಿದೆಯೇ ಎಂಬ ಪ್ರಶ್ನಾರ್ಥಕ ಮಾತುಗಳೂ ಕೇಳಿಬರುತ್ತಿದ್ದವು. ಅದಕ್ಕೆ ಈಗ ಉತ್ತರ ಎಲ್ಲರಿಗೂ ಸಿಕ್ಕಿರಬಹುದು. ಇನ್ನೂ ಆನ್‌ಲೈನ್‌ ತಾಣಗಳಲ್ಲಿ ದಂಗಲ್‌ ಸಿನಿಮಾ ಟಿಕೆಟ್‌ ಬುಕ್ಕಿಂಗ್ ಒಂದೇ ದಿನದಲ್ಲಿ 1 ದಶಲಕ್ಷ ದಾಟಿತ್ತು.

  ಮಾಜಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ನೈಜ ಕಥೆಯನ್ನಾಧರಿಸಿ ಚಿತ್ರ ನಿರ್ಮಿಸಲಾಗಿದೆ. ಅಮೀರ್ ಖಾನ್ 'ಮಹಾವೀರ್ ಸಿಂಗ್' ಆಗಿ ಅಭಿನಯಿಸಿದ್ದಾರೆ. ಈ ಸಿನಿಮಾ ನೋಡಿದ ಸಲ್ಮಾನ್‌ ಖಾನ್ ಸ್ವತಃ 'ದಂಗಲ್‌' ಸಿನಿಮಾ ಸುಲ್ತಾನ್‌ಗಿಂತ ಬೆಟರ್‌ ಎಂದು ಟ್ವೀಟ್‌ ಮಾಡಿದ್ದರು. ಇನ್ನೂ ಹಲವರು ಆಸ್ಕರ್‌ ಪ್ರಶಸ್ತಿಗೆ ನಾಮಿನೇಟ್ ಆಗಲಿ ಎಂದು ಶುಭ ಹಾರೈಸಿದ್ದರು.

  English summary
  Dangal box office collection day 2: Aamir Khan film was expected to collect Rs 30 crore on the first day. However, it fell short by a small amount.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X