»   »  'ದಂಗಲ್' ಟ್ವಿಟರ್ ವಿಮರ್ಶೆ: ಸುಲ್ತಾನ್‌ ಗಿಂತ ಬೆಟರ್

'ದಂಗಲ್' ಟ್ವಿಟರ್ ವಿಮರ್ಶೆ: ಸುಲ್ತಾನ್‌ ಗಿಂತ ಬೆಟರ್

Posted By:
Subscribe to Filmibeat Kannada

ಬಾಲಿವುಡ್ ಸಿನಿಮಾ ಅಂಗಳದಲ್ಲಿ ಸುಲ್ತಾನ್‌ ಚಿತ್ರದ ನಂತರ ಕುಸ್ತಿ ಪಂದ್ಯ ಹಿನ್ನೆಲೆಯ ಮತ್ತೊಂದು ಚಿತ್ರವಾಗಿ ದಂಗಲ್ ಇಂದು(ಡಿಸೆಂಬರ್ 23) ತೆರೆಕಂಡಿದೆ. ಅಮೀರ್ ಖಾನ್ 3 ಹೆಣ್ಣು ಮಕ್ಕಳ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ ಹೆಣ್ಣು ಮಕ್ಕಳಿಗೆ ತಾವೇ ಕುಸ್ತಿ ತರಬೇತಿಯನ್ನು ನೀಡಿರುವುದು ಸಿನಿಮಾದಲ್ಲಿನ ವಿಶೇಷತೆ. ಬಾಕಿ ಕಥೆ ಏನು ಎಂಬುದು ಮಾತ್ರ ಚಿತ್ರ ನೋಡದೆ ತಿಳಿಯುವುದಿಲ್ಲ.

ಮಾಜಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ನೈಜ ಕಥೆಯನ್ನಾಧರಿಸಿ ಚಿತ್ರ ನಿರ್ಮಿಸಲಾಗಿದೆ. ಅಮೀರ್ ಮಹಾವೀರ್ ಸಿಂಗ್ ಆಗಿ ಅಭಿನಯಿಸಿದ್ದಾರೆ.(ನೋಟು ನಿಷೇಧದಿಂದ ಸಮಸ್ಯೆ ಆದರೂ ಪರವಾಗಿಲ್ಲ: ಅಮೀರ್)

ದಂಗಲ್ ಸಿನಿಮಾದ ಫಸ್ಟ್‌ ಡೇ ಫಸ್ಟ್ ಶೋ ನೋಡಿದ ಸಿನಿ ಪ್ರೇಕ್ಷಕರು ಟ್ವಿಟರ್‌ ನಲ್ಲಿ ಏನಂದ್ರು ವಿಮರ್ಶೆಗಳನ್ನ ನೋಡೋಣ ಬನ್ನಿ.(ತಿಥಿ' ನೋಡಿ ನಕ್ಕು-ನಕ್ಕು ಸುಸ್ತಾದ ಹಿಂದಿ ನಟ ಅಮೀರ್ ಖಾನ್)

ಸುಲ್ತಾನ್‌ ಗಿಂತ ಬೆಟರ್: ಸಲ್ಮಾನ್‌ ಹೇಳಿಕೆ

ದಂಗಲ್‌ ಸಿನಿಮಾ ಸುಲ್ತಾನ್‌ಗಿಂತ ಬೆಟರ್‌ ಎಂದು ಸಲ್ಮಾನ್ ಖಾನ್‌ ಟ್ವೀಟ್‌ ಮಾಡಿದ್ದಾರೆ. ಗುರುವಾರ ಸಂಜೆಯೇ ಕುಟುಂಬ ಸಮೇತ ದಂಗಲ್‌ ಸಿನಿಮಾ ವೀಕ್ಷಿಸಿದ ಸಲ್ಮಾನ್‌ ಪರ್ಸನಲಿ ಲವ್‌ ಯು ಅಮೀರ್ ಎಂದು ಟ್ವೀಟ್ ಮಾಡಿದ್ದಾರೆ.

ಬೆಸ್ಟ್‌ ಫಿಲ್ಮ್

5/5 ರೇಟಿಂಗ್ ನೀಡಿ, ದಂಗಲ್ 2016 ರ ಅತ್ಯುತ್ತಮ ಸಿನಿಮಾ ಎಂದು ಫಿಲ್ಮಿ ಫೇರ್ ಟ್ವಿಟರ್‌ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

ಲಗಾನ್‌ ಗಿಂತ ದಂಗಲ್‌ ಗೆ ಉಘೇ

ಲಗಾನ್‌ ಗಿಂತ ಬೆಟರ್ ಎಂದು ರಾಜ ಸೇನ್ ಟ್ವೀಟ್ ಮಾಡಿದ್ದಾರೆ.

ಅಮೀರ್ ಖಾನ್

ಅಮೀರ್ ಖಾನ್ ಟ್ರೂ ಸ್ಟಾರ್ ಆಗಿ ಕಾಣಿಸಿಕೊಂಡಿದ್ದು, ಹ್ಯೂಮನ್ ಬೀಯಿಂಗ್ ಮೌಲ್ಯವನ್ನು ತೋರಿಸಲಾಗಿದೆ ಎಂದು ಟ್ವೀಟಿಸಲಾಗಿದೆ.

ಬಾಲಿವುಡ್‌ನ ಬಿಗ್ಗೆಸ್ಟ್ ಸಿನಿಮಾ

ಈಗಾಗಲೇ ಸಿನಿಮಾ ನೋಡಿದವರು ಬಾಲಿವುಡ್ ಸಿನಿ ಇತಿಹಾಸದಲ್ಲಿ ಬಿಗ್ಗೆಸ್ಟ್ ಸಿನಿಮಾ ದಂಗಲ್‌ ಎಂದಿದ್ದಾರೆ.

ಅದ್ಭುತ ನಟನೆ ಮತ್ತು ಸ್ಫೂರ್ತಿದಾಯಕ

ದಂಗಲ್ ಸಿನಿಮಾವನ್ನು ಉತ್ತಮ ಮಾರ್ಗದಲ್ಲಿ ಹೇಳಲಾಗಿದ್ದು, ಅದ್ಭುತ ನಟನೆ ಮತ್ತು ತುಂಬಾ ಸ್ಫೂರ್ತಿದಾಯಕವಾಗಿದೆ ಎಂದು ಅಶೋಕ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಭಾರತೀಯರಿಗೆ ರಿಯಲ್‌ ಆಗಿ ಸ್ಫೂರ್ತಿದಾಯಕವಾಗಿದೆ ಮತ್ತು ಸಿನಿಮಾ ಬಳಗಕ್ಕೆ ಅಧಿಕ ಹೆಮ್ಮೆ ಪಡುವಂತೆ ಮಾಡಿದೆ ಅಮೀರ್ ಸರ್ ಎಂದು ಆನಂದ್ ಎಲ್ ರೈ ಎಂಬುವವರು ಟ್ವೀಟ್ ಮಾಡಿದ್ದಾರೆ.

ಎಲ್ಲಾ ರೆಕಾರ್ಡ್ ಬ್ರೇಕ್‌ ಮಾಡಲು ಹೊರಟ ದಂಗಲ್

ಸ್ಫೂರ್ತಿದಾಯಕ, ಮನರಂಜನೆ, ಮೂವಿಂಗ್, ಎಂಗೇಜಿಂಗ್. ಎಲ್ಲಾ ರೆಕಾರ್ಡ್‌ ಬ್ರೇಕ್‌ ಮಾಡಲು ಹೊರಟಿದೆ ! ಅತ್ಯದ್ಭುತ ಪ್ರದರ್ಶನ. ಎಲ್ಲರೂ ಹೋಗಿ ನೋಡಿ ಎಂದಿದ್ದಾರೆ

English summary
Aamir Khan And His ‘Dhaakad’ Girls Inspire You With A True Story Of Grit! And here is what first day first show movie watched people saying about Dangle.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada