Hrithik-Saba Azad: ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಗರ್ಭಿಣಿನಾ? ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ಕೊಟ್ರಾ ಸಬಾ ಅಜಾದ್?

ಬಾಲಿವುಡ್‌ ಗ್ರೀಕ್ ಗಾಡ್ ಹೃತಿಕ್ ರೋಷನ್ ವೈಯಕ್ತಿಕ ವಿಷಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ. ಸಿನಿಮಾ ಬಿಟ್ಟು ಫ್ಯಾಮಿಲಿ ಮ್ಯಾಟರ್‌ ಹಂಚಿಕೊಳ್ಳುವುದು ತೀರಾ ವಿರಳ. ಅದರಲ್ಲೂ ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಇನ್ನೂ ಸ್ಟ್ರಿಕ್ಟ್ ಆಗಿ ತಮ್ಮ ನೀತಿಯನ್ನು ಪಾಲಿಸುತ್ತಿದ್ದರು.

ಅದ್ಯಾವಾಗ ಮತ್ತೆ ಪ್ರೀತಿಯಲ್ಲಿ ಬಿದ್ದರೋ ಅಲ್ಲಿಂದ ಸ್ವಲ್ಪ ಓಪನ್ ಆಗಿ ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗುತ್ತಿದ್ದಾರೆ. ಹೃತಿಕ್ ರೋಷನ್ ತಮ್ಮ ಹೊಸ ಗರ್ಲ್‌ಫ್ರೆಂಡ್ ಅನ್ನು ಕೆಲವು ತಿಂಗಳುಗಳ ಹಿಂದಷ್ಟೇ ಪರಿಚಯಿಸಿದ್ದರು. ಅಲ್ಲಿಂದ ಇಬ್ಬರೂ ಮುಕ್ತವಾಗಿಯೇ ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗುತ್ತಿದ್ದಾರೆ.

ಇತ್ತೀಚೆಗಷ್ಟೇ ಗಣೇಶ ಚತುರ್ಥಿಯಂದು ಹೃತಿಕ್ ರೋಷನ್ ಕುಟುಂಬದೊಂದಿಗೆ ಸಬಾ ಅಜಾದ್ ಕಾಣಿಸಿಕೊಂಡಿದ್ದರು. ಅದಾದ ಕೆಲವೇ ದಿನಗಳಲ್ಲಿ ಹೃತಿಕ್ ಗರ್ಲ್‌ಫ್ರೆಂಡ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದೂ ಇನ್‌ಸ್ಟಾಗ್ರಾಂನಲ್ಲಿ ಮಾಡಿದ ಒಂದೇ ಒಂದು ಪೋಸ್ಟ್ ಹಲ್‌ಚಲ್ ಎಬ್ಬಿಸಿದೆ.

hrithik-roshan-saba-azad-pregnant

ಹೃತಿಕ್-ಸಬಾ ಪ್ರೀತಿ ರಿವೀಲ್ ಆಗಿದ್ಯಾವಾಗ?

ಹೃತಿಕ್ ರೋಷನ್ ಹಾಗೂ ಸಬಾ ಅಜಾದ್ ಇಬ್ಬರೂ ಪ್ರೀತಿಯಲ್ಲಿ ಬಿದ್ದಿರೋ ವಿಷಯ ಕಳೆದ ವರ್ಷ ಜನವರಿಯಲ್ಲಿ ರಿವೀಲ್ ಆಗಿತ್ತು. ಇಬ್ಬರೂ ಡೇಟಿಂಗ್‌ಗೆ ಹೋಗಿದ್ದ ವೇಳೆ ಹೃತಿಕ್ ರೋಷನ್ ಹಾಗೂ ಸಬಾ ಇಬ್ಬರೂ ಕೈ ಕೈ ಹಿಡಿದು ಹೊರಬಂದಿದ್ದರು. ಅಲ್ಲಿಂದ ಹೃತಿಕ್ ರೋಷನ್ ಹಾಗೂ ಸಬಾ ಅಜಾದ್ ಲವ್ ಸ್ಟೋರಿಗೆ ಮತ್ತಷ್ಟು ಪುಷ್ಠಿ ಸಿಕ್ಕಿತ್ತು. ಈಗ ಸೋಶಿಯಲ್ ಮೀಡಿಯಾದಲ್ಲಿ ಪ್ರೆಗ್ನೆನ್ಸಿಗೆ ಸಂಬಂಧಿಸಿದಂತೆ ಸಬಾ ಕೇಳಿದ ಪ್ರಶ್ನೆ ವೈರಲ್ ಆಗುತ್ತಿದೆ.

ನಿಮ್ಮ ಸ್ತ್ರೀರೋಗತಜ್ಞ ಯಾರು?

ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಸಬಾ ಅಜಾದ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ಫಾಲೋವರ್ಸ್‌ಗೆ ಪ್ರಶ್ನೆಯೊಂದನ್ನು ಹೇಳಿದ್ದರು. "ನಿಮ್ಮ ಸ್ತ್ರೀರೋಗ ತಜ್ಞ ಯಾರು?" ಎಂದು ಪ್ರಶ್ನೆ ಮಾಡಿದ್ದರು. ಇದರೊಂದಿಗೆ "ಸದ್ಯಕ್ಕೆ ನನ್ನ ಮೆದುಳಿನಲ್ಲಿ ಓಡಾಡುತ್ತಿರುವುದು ಇದೊಂದೇ ಪ್ರಶ್ನೆ" ಎಂದು ಸಬಾ ಅಜಾದ್ ಬರೆದುಕೊಂಡಿದ್ದರು. ಈ ಪೋಸ್ಟ್ ನೋಡುತ್ತಿದ್ದಂತೆ ನೆಟ್ಟಿಗರು ಅಚ್ಚರಿಯಿಂದ ಸಬಾಗೆ ಪ್ರಶ್ನೆ ಮಾಡುತ್ತಿದ್ದಾರೆ.

ಫ್ಯಾನ್ಸ್ ಹೇಳುತ್ತಿರುವ ಪ್ರಶ್ನೆ ಏನು?

ಸಬಾ ಅಜಾದ್ "ನಿಮ್ಮ ಸ್ತ್ರೀರೋಗ ತಜ್ಞ ಯಾರು?" ಯಾರು ಅಂತ ಪ್ರಶ್ನೆಯೊಂದನ್ನು ಹಾಕಿ ನೆಟ್ಟಿಗರ ತಲೆಗೆ ಹುಳವನ್ನು ಬಿಟ್ಟಿದ್ದರು. ಆದರೆ, ಈ ಪ್ರಶ್ನೆಯನ್ನು ನೋಡುತ್ತಿದ್ದಂತೆ ನೆಟ್ಟಿಗರು ಬಿಟ್ಟಿ ಸಲಹೆಗಳನ್ನು ನೀಡುತ್ತಿದ್ದಾರೆ. ಒಬ್ಬರು " ಮೊದಲ ಮದುವೆ ಆಗಿ. ಆಮೇಲೆ ಸ್ತ್ರೀರೋಗ ತಜ್ಞರ ಬಳಿ ಹೋಗಿ" ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು " ಏನಾದರೂ ಗುಡ್ ನ್ಯೂಸ್ ಇದೆಯೇ" ಎಂದು ಪ್ರಶ್ನೆ ಮಾಡಿದ್ದಾರೆ. ಹೀಗೆ ನೆಟ್ಟಿಗರು ಒಬ್ಬೊಬ್ಬರಾಗಿ ಒಂದೊಂದು ರೀತಿ ಪ್ರಶ್ನೆ ಮಾಡುತ್ತಿದ್ದಾರೆ.

ಅಸಲಿ ಮ್ಯಾಟರ್ ಏನು?

ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಸಬಾ ಅಜಾದ್ ನೆಟ್ಟಿಗರು ಚಮಕ್ ಕೊಟ್ಟಿದ್ದರು. ಇಂತಹದ್ದೊಂದು ಪ್ರಶ್ನೆ ಕೇಳುವುದರ ಹಿಂದೊಂದು ಕಾರಣವಿದೆ. ಅಮೆಜಾನ್ ಮಿನಿಟಿವಿಯಲ್ಲಿ ಹೊಸ ಶೋ ಪ್ರಸಾರ ಆಗುತ್ತಿದೆ. ಅದುವೇ "ಹೂ ಇಸ್ ಯುವರ್ ಗೈನಾಕ್". ಇದರಲ್ಲಿ ಸಬಾ ಅಜಾದ್ ವೈದ್ಯೆಯಾಗಿ ಕಾಣಿಸಿಕೊಂಡಿದ್ದಾರೆ. ಅದರ ಶೋ ಬಗ್ಗೆ ವಿನೂತನ ಪ್ರಚಾರವನ್ನು ಹೀಗೆ ಮಾಡಿದ್ದರು.

ಸಿನಿಮಾಗಳಲ್ಲಿ ಹೃತಿಕ್ ರೋಷನ್ ಬ್ಯುಸಿ

ಹೃತಿಕ್ ರೋಷನ್ ಸದ್ಯ ಬಿಗ್ ಬಜೆಟ್ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ಫೈಟರ್' ಸಿನಿಮಾದಲ್ಲಿ ಹೃತಿಕ್ ರೋಷನ್ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ಹೃತಿಕ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಜನವರಿ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಇದರೊಂದಿಗೆ 'ವಾರ್ 2' ಸಿನಿಮಾದಲ್ಲೂ ಕೂಡ ಬ್ಯುಸಿಯಾಗಿದ್ದಾರೆ. ಇದೇ ಸಿನಿಮಾ ಮೂಲಕ ಜೂ.ಎನ್‌ಟಿಆರ್ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

More from Filmibeat

English summary
Rumours is that Hrithik Roshan girl friend Saba Azad pregnant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X