ರಿಲೀಸ್‌ಗೂ ಮುನ್ನವೇ 'ಬಾಹುಬಲಿ-2' ದಾಖಲೆ ಮುರಿದ ಸಲ್ಲು 'ಟ್ಯೂಬ್‌ಲೈಟ್'
ನಟ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಟ್ಯೂಬ್‌ಲೈಟ್' ಜೂನ್ 23 ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಬಗೆಗಿನ ಹೊಸ ವಿಷಯ ಏನಂದ್ರೆ ಈಗಾಗಲೇ ದೇಶದಾದ್ಯಂತ ಜನಪ್ರಿಯತೆ ಗಳಿಸಿರುವ ಟಾಲಿವುಡ್ ನಟ ಪ್ರಭಾಸ್ ಅಭಿನಯದ 'ಬಾಹುಬಲಿ-2' ಚಿತ್ರದ ದಾಖಲೆಯೊಂದನ್ನು ಮುರಿದಿದೆ ಎಂಬ ಸುದ್ದಿ ಮೂಲಗಳಿಂದ ತಿಳಿದಿದೆ.[ಭಾರತ-ಪಾಕ್ ಸಮಸ್ಯೆಗೆ ಸಲ್ಮಾನ್ ಹೇಳಿದ ಪರಿಹಾರವಿದು..]
ಹೌದು, ಕಬೀರ್ ಖಾನ್ ನಿರ್ದೇಶನದ 'ಟ್ಯೂಬ್‌ಲೈಟ್' ಚಿತ್ರ ಬಿಡುಗಡೆಗೂ ಮುನ್ನವೇ ಎಸ್.ಎಸ್.ರಾಜಮೌಳಿ ನಿರ್ದೇಶನದ ಪ್ರಖ್ಯಾತ 'ಬಾಹುಬಲಿ-2' ಚಿತ್ರವನ್ನು, ಬಿಡುಗಡೆ ಆಗುವ ಚಿತ್ರಮಂದಿರಗಳ ಪೈಕಿ ಬೀಟ್ ಮಾಡಿದೆ. 'ಟ್ಯೂಬ್‌ಲೈಟ್' ಚಿತ್ರ ಪ್ರಪಂಚದಾದ್ಯಂತ 10,000 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಮೂಲಗಳಿಂದ ತಿಳಿದಿದೆ. ಆದರೆ 'ಬಾಹುಬಲಿ-2' ಚಿತ್ರ ಬಿಡುಗಡೆ ಆದ ಸಂದರ್ಭದಲ್ಲಿ 9000 ಚಿತ್ರ ಮಂದಿರಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಿತ್ತು. ಭಾರತ ದೇಶ ಒಂದರಲ್ಲಿಯೇ 6,500 ಸ್ಕ್ರೀನ್ ಗಳಲ್ಲಿ ತೆರೆಕಂಡಿತ್ತು.

ಅಂತೂ ಸಲ್ಮಾನ್ ಖಾನ್ ಚಿತ್ರ 'ಬಾಹುಬಲಿ-2' ಚಿತ್ರದ ದಾಖಲೆಗಳನ್ನು ಧೂಳಿಪಟ ಮಾಡುವ ಯುದ್ಧದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು ಸಕ್ಸಸ್ ಆಗಿದೆ. ಆದರೆ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯಲ್ಲಿಯೂ ಇದೇ ರೀತಿ ಪ್ರಭಾಸ್ 'ಬಾಹುಬಲಿ-2' ಚಿತ್ರದ ದಾಖಲೆಯನ್ನು ಮುರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.['ಬಾಹುಬಲಿ' ಮುಂದೆ ಬಹಿರಂಗವಾಗಿ ಸೋಲು ಒಪ್ಪಿಕೊಂಡ ಸಲ್ಮಾನ್ ಖಾನ್.!]
'ಟ್ಯೂಬ್‌ಲೈಟ್' ಚಿತ್ರ 1962 ರ ಕಾಲಘಟ್ಟದ ಭಾರತ ಮತ್ತು ಚೀನ ದೇಶಗಳ ನಡುವಿನ ಯುದ್ಧ ಕುರಿತ ಚಿತ್ರ. ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ಜೊತೆಯಾಗಿ ಚೀನ ಮೂಲದ ನಟಿ Zhu Zhu ಅಭಿನಯಿಸಿದ್ದಾರೆ.


Click it and Unblock the Notifications











