»   » 'ಬಾಹುಬಲಿ' ಮುಂದೆ ಬಹಿರಂಗವಾಗಿ ಸೋಲು ಒಪ್ಪಿಕೊಂಡ ಸಲ್ಮಾನ್ ಖಾನ್.!

'ಬಾಹುಬಲಿ' ಮುಂದೆ ಬಹಿರಂಗವಾಗಿ ಸೋಲು ಒಪ್ಪಿಕೊಂಡ ಸಲ್ಮಾನ್ ಖಾನ್.!

Posted By:
Subscribe to Filmibeat Kannada

ಬಾಲಿವುಡ್ ನಲ್ಲಿ ಬಾಕ್ಸ್ ಆಫೀಸ್ ಪಂಡಿತರಿಗೆ ಒಂದೇ ನಂಬಿಕೆ. ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ನಿರ್ಮಾಣ ಮಾಡಿರುವ ದಾಖಲೆಯನ್ನ ಸಲ್ಮಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರ ಬ್ರೇಕ್ ಮಾಡುತ್ತೆ ಅಂತ. ಆದ್ರೆ, ಈ ನಂಬಿಕೆ ಸ್ವತಃ ಸಲ್ಲು ಭಾಯ್ ಗೂ ಇಲ್ಲ.[ಬಾಹುಬಲಿ ದಾಖಲೆಯನ್ನ ಬ್ರೇಕ್ ಮಾಡುವುದು ಇವರಿಂದ ಸಾಧ್ಯವಂತೆ!]

ಈಗಾಗಲೇ 'ಟ್ಯೂಬ್ ಲೈಟ್' ಚಿತ್ರದ ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾಗಿದೆ. ಎಲ್ಲ ಕಡೆಯಿಂದಲೂ ಟ್ರೈಲರ್ ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿಯೇ 'ಬಾಹುಬಲಿ' ದಾಖಲೆಯನ್ನ 'ಟ್ಯೂಬ್ ಲೈಟ್' ಮುರಿದೇ ಮುರಿಯುತ್ತೆ ಎಂಬ ವಾದ ಕೇಳಿ ಬರುತ್ತಿದೆ. ಆದ್ರೆ, ಚಿತ್ರ ಬಿಡುಗಡೆಗೂ ಮುಂಚೆಯೇ ಸಲ್ಮಾನ್ ಖಾನ್ ಸೋಲು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ 'ಬಾಹುಬಲಿ' ದಾಖಲೆ ಮುರಿಯಲು ಸಾಧ್ಯವಿಲ್ಲವೆಂದಿದ್ದಾರೆ. ಮುಂದೆ ಓದಿ........

'ಬಾಹುಬಲಿ' ದಾಖಲೆ ಮುರಿಯುವುದು ಕಷ್ಟ.!

ಸ್ವತಃ ಸಲ್ಮಾನ್ ಖಾನ್ ಅವರೇ 'ಬಾಹುಬಲಿ' ದಾಖಲೆ ಮುರಿಯುವುದು ಕಷ್ಟವೆಂದಿದ್ದಾರೆ. 'ಟ್ಯೂಬ್ ಲೈಟ್' ಚಿತ್ರದ ಪ್ರೆಸ್ ಮೀಟ್ ನಲ್ಲಿ ಮಾಧ್ಯಮದವರು ಕೇಳಿದ ಪ್ರೆಶ್ನೆಗೆ ಉತ್ತರ ಕೊಟ್ಟ ಸಲ್ಲು, 'ಬಾಹುಬಲಿ' ಚಿತ್ರದಷ್ಟು ಯಶಸ್ಸು ಗಳಿಸಲು ಕಷ್ಟವೆಂದು ಅಭಿಪ್ರಾಯ ಪಟ್ಟಿದ್ದಾರೆ.['ಟ್ಯೂಬ್ ಲೈಟ್' ಮೂಲಕ ಹೊಸ ದಾಖಲೆಗೆ ಸಾಕ್ಷಿಯಾದ ಸಲ್ಮಾನ್ ಖಾನ್]

ಕಾರಣ ಏನು ಅಂತ ಕೇಳಿ?

'ಬಾಹುಬಲಿ' ಚಿತ್ರದ ಹಿಂದಿ ವರ್ಷನ್ ಈ ಮಟ್ಟದ ಯಶಸ್ಸು ಕಂಡಿದೆ. ಇದಕ್ಕೆ ಕಾರಣ ಬಾಲಿವುಡ್ ಪ್ರೇಕ್ಷಕರು. ಒಂದು ಡಬ್ಬಿಂಗ್ ಸಿನಿಮಾ ಎನ್ನುವುದನ್ನ ಮರೆತು 'ಬಾಹುಬಲಿ' ಚಿತ್ರವನ್ನ ಗೆಲ್ಲಿಸಿದ್ದಾರೆ. ಇದರಿಂದ ರೆಕಾರ್ಡ್ ನಿರ್ಮಾಣವಾಗಿದೆ'' ಎಂದರು.[ಸಲ್ಮಾನ್ ಖಾನ್ 'ಟ್ಯೂಬ್ ಲೈಟ್' ಬೆಳಗುವ ಟೈಂ ಬಂತು.!]

ನನಗೆ ಒತ್ತಡವಿಲ್ಲ

''ನನಗೆ ಬಾಹುಬಲಿ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಬೇಕು ಎನ್ನುವ ಯಾವುದೇ ಒತ್ತಡವಿಲ್ಲ'' ಎಂದು ಹೇಳುವ ಮೂಲಕ ಬಾಹುಬಲಿ ಚಿತ್ರದ ಮುಂದೆ ಸೋಲು ಒಪ್ಪಿಕೊಂಡಿದ್ದಾರೆ.[ಶಾರೂಖ್ ಚಿತ್ರದ ಈ ದಾಖಲೆಯನ್ನ 'ಬಾಹುಬಲಿ' ಬ್ರೇಕ್ ಮಾಡಲಾಗಿಲ್ಲ..!]

ಬಾಲಿವುಡ್ ಗಿದೆ ನಂಬಿಕೆ

ಸಲ್ಮಾನ್ ಖಾನ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಯಾವತ್ತಿದ್ರೂ ಕಿಂಗ್ ಎನ್ನುವುದು ಈ ಹಿಂದಿನ ಚಿತ್ರಗಳು ಸಾಬೀತು ಪಡಿಸಿದೆ. ಹೀಗಾಗಿ, ಸಲ್ಮಾನ್ ಖಾನ್ ಗೆ ನಂಬಿಕೆ ಇಲ್ಲದಿದ್ದರೂ ಬಾಲಿವುಡ್ ಮಂದಿಗೆ ಮಾತ್ರ ಸಲ್ಲು 'ಟ್ಯೂಬ್ ಲೈಟ್' ಚಿತ್ರದ ಬಗ್ಗೆ ನಂಬಿಕೆ ಹೆಚ್ಚಿದೆ.

ಸಲ್ಲು ರೆಕಾರ್ಡ್ ಬ್ರೇಕ್ ಮಾಡ್ತಾರೆ.!

ಇನ್ನು ಟ್ಯೂಬ್ ಲೈಟ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಬಾಲಿವುಡ್ ವಿವೇಕ್ ಒಬೆರಾಯ್, ಸಲ್ಮಾನ್ ಖಂಡಿತ ಬಾಹುಬಲಿ ಚಿತ್ರದ ರೆಕಾರ್ಡ್ ಬ್ರೇಕ್ ಮಾಡ್ತಾರೆ. ಆ ಶಕ್ತಿ 'ಟ್ಯೂಬ್ ಲೈಟ್' ಚಿತ್ರಕ್ಕಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು.[ಬಾಹುಬಲಿ ದಾಖಲೆಯನ್ನ ಬ್ರೇಕ್ ಮಾಡುವುದು ಇವರಿಂದ ಸಾಧ್ಯವಂತೆ!]

ಈದ್ ಹಬ್ಬಕ್ಕೆ ಟ್ಯೂಬ್ ಲೈಟ್ ರಿಲೀಸ್.!

ಅಂದ್ಹಾಗೆ, ಕಬೀರ್ ಖಾನ್ ನಿರ್ದೇಶನ ಮಾಡಿರುವ 'ಟ್ಯೂಬ್ ಲೈಟ್' ಚಿತ್ರ ಇದೇ ತಿಂಗಳು ಈದ್ ಹಬ್ಬಕ್ಕೆ ತೆರೆಕಾಣಲಿದೆ. ಜೂನ್ 23ಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರ ಚೀನಾ-ಭಾರತ ಯುದ್ಧದ ಕುರಿತು ಮಾಡಿರುವ ಸಿನಿಮಾ. ಮುಖ್ಯಪಾತ್ರದಲ್ಲಿ ಶೋಹಿಲ್ ಖಾನ್ ಕಾಣಿಸಿಕೊಂಡಿದ್ರೆ, ಚೈನಿಸ್ ನಟಿ ಜುಜು ನಾಯಕಿ ಆಗಿದ್ದಾರೆ. ಇನ್ನು ಉಳಿದಂತೆ ಶಾರೂಖ್ ಖಾನ್ ಕೂಡ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಬಂದು ಹೋಗುತ್ತಾರೆ.

English summary
Media People Asked About Tubelight's Probability of Breaking Baahubali 2's sky-high Records, Salman Khan Predicted that it is Not Happening and Also Explained How he Deduced that in his own Words.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada