»   » 'ಟ್ಯೂಬ್ ಲೈಟ್' ಮೂಲಕ ಹೊಸ ದಾಖಲೆಗೆ ಸಾಕ್ಷಿಯಾದ ಸಲ್ಮಾನ್ ಖಾನ್

'ಟ್ಯೂಬ್ ಲೈಟ್' ಮೂಲಕ ಹೊಸ ದಾಖಲೆಗೆ ಸಾಕ್ಷಿಯಾದ ಸಲ್ಮಾನ್ ಖಾನ್

Posted By:
Subscribe to Filmibeat Kannada

'ಸುಲ್ತಾನ್' ನಟ ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರ ಟೀಸರ್ ಮತ್ತು ಹಾಡುಗಳಿಂದ ಬಾಲಿವುಡ್ ಸಿನಿ ಪ್ರೇಮಿಗಳಲ್ಲಿ ಬಹು ನಿರೀಕ್ಷೆ ಹುಟ್ಟುಹಾಕಿದೆ. ತೆರೆಗೆ ಅಪ್ಪಳಿಸಲು ಚಿತ್ರತಂಡ ಪ್ರೊಮೋಷನ್ ಚಟುವಟಿಕೆಗಳನ್ನು ಈಗಾಗಲೇ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಹೊಸ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ.[ಮಿಸ್ ಮಾಡದೇ ನೋಡಿ ಸಲ್ಮಾನ್ ಖಾನ್ ರೇಡಿಯೋ ಹಾಡು!]

ಅದೇನಂದ್ರೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ 'ಟ್ಯೂಬ್ ಲೈಟ್' ಚಿತ್ರದ ಸಲ್ಮಾನ್ ಖಾನ್ ಪಾತ್ರ ಎಮೋಜಿ ಆಗಿ ಹೊರಹೊಮ್ಮಿದೆ. ಮುಂದೆ ಓದಿ.

ಎಮೋಜಿ ಕ್ಯಾರೆಕ್ಟರ್ ಪಡೆದ ಮೊದಲ ಬಾಲಿವುಡ್ ನಟ

ಹೌದು. 'ಟ್ಯೂಬ್ ಲೈಟ್' ಚಿತ್ರದ ಸಲ್ಮಾನ್ ಖಾನ್ ಪಾತ್ರ ಈಗ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವಿಶೇಷ ಎಮೋಜಿ ಕ್ಯಾರೆಕ್ಟರ್ ಆಗಿ ಕ್ರಿಯೇಟ್ ಆಗಿದೆ. ಈ ಮೂಲಕ ಪ್ರಪಂಚದಾದ್ಯಂತ 319 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಟ್ವಿಟರ್ ನಲ್ಲಿ ಸ್ವಂತ ಎಮೋಜಿ ಪಡೆದ ಮೊದಲ ಬಾಲಿವುಡ್ ನಟ ಎಂಬ ಹೆಗ್ಗಳಿಕೆಗೆ ಸಲ್ಮಾನ್ ಖಾನ್ ಪಾತ್ರರಾಗಿದ್ದಾರೆ.

ಟ್ವಿಟರ್ ಮತ್ತು ಚಿತ್ರತಂಡ ಸಹಯೋಗದಿಂದ ಎಮೋಜಿ

ಟ್ವಿಟರ್ ಕಂಪನಿ ಮತ್ತು 'ಟ್ಯೂಬ್ ಲೈಟ್' ಚಿತ್ರತಂಡ ಎರಡು ಸಹಯೋಗದಲ್ಲಿ ಚಿತ್ರದ ಪ್ರಮೋಷನ್ ಗಾಗಿ ಹೊಸ ಟ್ರೆಂಡ್ ಹುಟ್ಟುಹಾಕಲು ಸಲ್ಮಾನ್ ಖಾನ್ ರವರ ಎಮೋಜಿ ಮೂಲಕ ಮುಂದಾಗಿದ್ದಾರೆ.

ಸಲ್ಮಾನ್ ಖಾನ್ ಎಮೋಜಿ

ಅಂದಹಾಗೆ ಸಲ್ಮಾನ್ ಖಾನ್ 'ಟ್ಯೂಬ್ ಲೈಟ್' ಚಿತ್ರದಲ್ಲಿ ಎರಡು ಶೂಗಳನ್ನು ಕತ್ತಿಗೆ ನೇತುಹಾಕಿಕೊಂಡು ಸೆಲ್ಯೂಟ್ ಮಾಡಿರುವ ದೃಶ್ಯವನ್ನು ಟ್ವಿಟರ್ ನಲ್ಲಿ ಎಮೋಜಿ ಕ್ಯಾರೆಕ್ಟರ್ ಆಗಿ ಕ್ರಿಯೇಟ್ ಮಾಡಲಾಗಿದೆ.

ಎಮೋಜಿ ಪಡೆಯುವುದು ಹೇಗೆ?

ಟ್ವಿಟರ್ ಸಂದೇಶ ಬರೆಯುವಲ್ಲಿ ಸಲ್ಮಾನ್ ಖಾನ್ ಎಮೋಜಿ ಪಡೆಯಲು #TubelightKiEid ಅಥವಾ #Tubelight ಎಂದು ಟೈಪಿಸಿ.

ಕಬೀರ್ ಖಾನ್ ಟ್ವೀಟ್

'ಟ್ಯೂಬ್ ಲೈಟ್' ಚಿತ್ರದ ನಿರ್ದೇಶಕ ಕಬೀರ್ ಖಾನ್ ರವರು, " 'ಟ್ಯೂಬ್ ಲೈಟ್' ಚಿತ್ರ ಟ್ವಿಟರ್ ನಲ್ಲಿ ಸ್ವಂತ ಎಮೋಜಿ ಕ್ಯಾರೆಕ್ಟರ್ ಪಡೆದ ಬಾಲಿವುಡ್ ನ ಮೊದಲ ಚಿತ್ರವಾಗಿದೆ. ಇದನ್ನು ಪ್ರಕಟಗೊಳಿಸಲು ಸಂತೋಷವಾಗುತ್ತಿದೆ" ಎಂದು ಅವರು ಎಮೋಜಿ ಬಳಸಿ ಟ್ವೀಟ್ ಮಾಡಿದ್ದಾರೆ.

'ಟ್ಯೂಬ್ ಲೈಟ್' ಬಿಡುಗಡೆ ಯಾವಾಗ

'ಟ್ಯೂಬ್ ಲೈಟ್' ಚಿತ್ರ ರಂಜಾನ್ ಹಬ್ಬದ ಪ್ರಯುಕ್ತ ಜೂನ್ 23 ರಂದು ದೇಶದಾದ್ಯಂತ ಬಿಡುಗಡೆ ಆಗಲಿದೆ.

English summary
Salman Khan and team 'Tubelight' have started their promotional activities for the film. And to start with, the film team has come with Salman Khan's Twitter character emoji on this social media platform.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada