For Quick Alerts
  ALLOW NOTIFICATIONS  
  For Daily Alerts

  ಮಿಸ್ ಮಾಡದೇ ನೋಡಿ ಸಲ್ಮಾನ್ ಖಾನ್ ರೇಡಿಯೋ ಹಾಡು!

  By Suneel
  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಇತ್ತೀಚೆಗಷ್ಟೆ ಬಿಡುಗಡೆ ಆದ 'ಟ್ಯೂಬ್ ಲೈಟ್' ಚಿತ್ರದ ಟೀಸರ್ ಅವರ 'ಸುಲ್ತಾನ್' ಚಿತ್ರಕ್ಕಿಂತ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸುವ ಭರವಸೆ ಮೂಡಿಸಿದೆ.[ಚೀನಾ-ಭಾರತದ ಯುದ್ಧ ಇತಿಹಾಸದ 'ಟ್ಯೂಬ್‌ಲೈಟ್' ಟೀಸರ್ ಔಟ್]

  6 ದಶಕಗಳ ಹಿಂದಿನ ಚೀನಾ ಮತ್ತು ಭಾರತದ ನಡುವಿನ ಯುದ್ಧ ಇತಿಹಾಸ ಕುರಿತ ಈ ಸಿನಿಮಾದ ಟೀಸರ್ ಭಾರತೀಯ ಸಿನಿ ಪ್ರಿಯರಲ್ಲಿ ಚಿತ್ರ ಕುರಿತು ಕುತೂಹಲ ಕೆರಳಿಸಿದೆ. ಮೇ 4 ರಂದು ಟೀಸರ್ ಬಿಡುಗಡೆ ಮಾಡಿದ್ದ ಚಿತ್ರತಂಡವೀಗ ನಿನ್ನೆಯಷ್ಟೇ 'ಟ್ಯೂಬ್ ಲೈಟ್'ನ ಮೊದಲ ವಿಡಿಯೋ ಹಾಡೊಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ.

  ಸಲ್ಮಾನ್ ಖಾನ್ ಮುದ್ದು ಮುದ್ದಾಗಿ ಪೆದ್ದು ಮುಖಭಾವದೊಂದಿಗೆ ಸೂಪರ್ ಸ್ಟೆಪ್ ಹಾಕಿರುವ ರೇಡಿಯೋ ಹಾಡು ಬಿಡುಗಡೆ ಆದ ಒಂದೇ ದಿನದಲ್ಲಿ 39 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಸಲ್ಲು ಅಭಿಮಾನಿಗಳು ಈ ಹಾಡನ್ನು ಅಷ್ಟೊಂದು ಕ್ರೇಜ್ ಆಗಿ ನೋಡಲು ಕಾರಣವಾದರೂ ಏನು ಎಂದು ತಿಳಿಯಬೇಕಾದರೆ ನೀವು ಒಮ್ಮೆ ಈ ಹಾಡನ್ನು ನೋಡಲೇಬೇಕಾಗಿದೆ. ಈ ಹಾಡಿಗೆ ಅಮಿತಾಬ್ ಭಟ್ಟಾಚಾರ್ಯ ಸಾಹಿತ್ಯ, ಪ್ರೀತಮ್ ಸಂಗೀತ ಸಂಯೋಜನೆ ಇದ್ದು, ಕಮಾಲ್ ಖಾನ್ ಮತ್ತು ಅಮಿತ್ ಮಿಶ್ರಾ ಹಾಡಿದ್ದಾರೆ.

  ಕಬೀರ್ ಖಾನ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ 'ಟ್ಯೂಬ್ ಲೈಟ್' ಚಿತ್ರವನ್ನು ಸಲ್ಮಾನ್ ಖಾನ್ ಜೊತೆಗೆ ನಿರ್ದೇಶಕ ಕಬೀರ್ ಖಾನ್ ಸಹ ನಿರ್ಮಾಣ ಮಾಡಿದ್ದಾರೆ. ಸಲ್ಮಾನ್ ಖಾನ್ ಗೆ ಈ ಚಿತ್ರದಲ್ಲಿ ಚೀನಾ ಮೂಲದ ನಟಿ Zhu Zhu ನಾಯಕಿಯಾಗಿ ಅಭಿನಯಿಸಿದ್ದಾರೆ. 'ಟ್ಯೂಬ್ ಲೈಟ್' ಜೂನ್ 23 ರಂದು ದೇಶದಾದ್ಯಂತ ತೆರೆಕಾಣಲಿದೆ. 'ಟ್ಯೂಬ್ ಲೈಟ್' ಚಿತ್ರದ ರೇಡಿಯೋ ಹಾಡನ್ನು ನೋಡಲು ಕ್ಲಿಕ್ ಮಾಡಿ.

  English summary
  Bollywood Actor Salman Khan Starrer 'Tubelight' movie First Song named 'Radio Song' released yesterday(May 16) in youtube. Here is you can watch 'Tubelight' Radio Song..

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X