»   » ಬಾಹುಬಲಿ ದಾಖಲೆಯನ್ನ ಬ್ರೇಕ್ ಮಾಡುವುದು ಇವರಿಂದ ಸಾಧ್ಯವಂತೆ!

ಬಾಹುಬಲಿ ದಾಖಲೆಯನ್ನ ಬ್ರೇಕ್ ಮಾಡುವುದು ಇವರಿಂದ ಸಾಧ್ಯವಂತೆ!

Posted By:
Subscribe to Filmibeat Kannada

ಪ್ರಭಾಸ್ ಅಭಿನಯದ 'ಬಾಹುಬಲಿ-2' ಚಿತ್ರ ಮಾಡಿರುವ ದಾಖಲೆ ಒಂದೆರೆಡಲ್ಲ. ಅತಿ ವೇಗವಾಗಿ 100 ಕೋಟಿ, 250 ಕೋಟಿ, 500 ಕೋಟಿ, 1000 ಕೋಟಿ ಹಾಗೂ 1500 ಕೋಟಿ ಗಳಿಸಿರುವ ದಾಖಲೆ ತನ್ನ ಹೆಸರಿನಲ್ಲಿ ಬರೆದುಕೊಂಡಿದೆ. ಬಾಲಿವುಡ್ ಸೇರಿದಂತೆ ಇದು ಭಾರತೀಯ ಚಿತ್ರರಂಗದಲ್ಲೇ ಮೊದಲು.[ಶಾರೂಖ್ ಚಿತ್ರದ ಈ ದಾಖಲೆಯನ್ನ 'ಬಾಹುಬಲಿ' ಬ್ರೇಕ್ ಮಾಡಲಾಗಿಲ್ಲ..!]

ಈ ದಾಖಲೆಯನ್ನ ಯಾರು ಬ್ರೇಕ್ ಮಾಡ್ತಾರೆ ಎಂಬ ಟಾಕ್ ಸಿನಿಮಾ ಜಗತ್ತಿನಲ್ಲಿ ಚರ್ಚೆಯಾಗುತ್ತಿದೆ. ಹೀಗಿರುವಾಗ, ಬಾಲಿವುಡ್ ನಟ ವಿವೇಕ್ ಒಬೆರಾಯ್, ಮತ್ತೊಬ್ಬ ಬಾಲಿವುಡ್ ನಟ ಈ ದಾಖಲೆಯನ್ನ ಬ್ರೇಕ್ ಮಾಡ್ತಾರೆ ಎಂದು ಹೇಳಿದ್ದಾರೆ.

Salman Khan To Break Baahubali 2 Records Says Vivek Oberoi

ಹೌದು, ಸಲ್ಮಾನ್ ಖಾನ್ ಅವರ 'ಟ್ಯೂಬ್ ಲೈಟ್' ಚಿತ್ರದ ಬಗ್ಗೆ ಮಾತನಾಡಿದ ವಿವೇಕ್ ಒಬೆರಾಯ್, ಪ್ರಭಾಸ್ ಬಾಹುಬಲಿಯ ದಾಖಲೆಯನ್ನ ಸಲ್ಮಾನ್ ಖಾನ್ ಮುರಿಯಬೇಕು, ಅವರಿಂದ ಸಾಧ್ಯ ಎಂದು ಭವಿಷ್ಯ ನುಡಿದಿದ್ದಾರೆ.['ಟ್ಯೂಬ್ ಲೈಟ್' ಮೂಲಕ ಹೊಸ ದಾಖಲೆಗೆ ಸಾಕ್ಷಿಯಾದ ಸಲ್ಮಾನ್ ಖಾನ್]

ಸದ್ಯ, ಸಲ್ಮಾನ್ ಖಾನ್ ಅಭಿನಯಿಸಿರುವ 'ಟ್ಯೂಬ್ ಲೈಟ್' ಚಿತ್ರದ ಟ್ರೈಲರ್ ನೋಡುತ್ತಿದ್ದರೇ, ಬಾಹುಬಲಿ ಚಿತ್ರದ ರೆಕಾರ್ಡ್ ಬ್ರೇಕ್ ಆಗುವ ಲಕ್ಷಣಗಳು ಕಾಣುತ್ತಿದೆ, 'ಟ್ಯೂಬ್ ಲೈಟ್' ಚಿತ್ರಕ್ಕೆ ಈ ತಾಕತ್ ಇದೆ ಎಂದು ವಿವೇಕ್ ಒಬೆರಾಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Salman Khan To Break Baahubali 2 Records Says Vivek Oberoi

ದಾಖಲೆಗಳು ಎನ್ನುವುದು ಶಾಶ್ವತವಲ್ಲ. ಯಾರ ದಾಖಲೆ ಯಾರು ಬೇಕಾದರೂ ಮುರಿಯಬಹುದು. ಸದ್ಯ, ಬಾಹುಬಲಿ ಚಿತ್ರದ್ದು ದೊಡ್ಡ ದಾಖಲೆ ಇರಬಹುದು. ಆದ್ರೆ, ಮುಂದೊಂದು ದಿನ ಬಾಹುಬಲಿಯನ್ನು ಮೀರಿಸಿದ ಚಿತ್ರ ಬರಬಹುದು. ವಿವೇಕ್ ಒಬೆರಾಯ್ ಅವರು ಹೇಳಿದಂತೆ ಅದು 'ಟ್ಯೂಬ್ ಲೈಟ್' ಚಿತ್ರವೇ ಅದಾಗಿದ್ದರೂ ಆಗಿರಬಹುದು. ಅದೇನೆ ಇರಲಿ, ಕಾದುನೋಡೋಣ.['ಬಾಹುಬಲಿ' ನಂತರ 1000 ಕೋಟಿ ಗಳಿಸಿದ ಭಾರತದ ಮತ್ತೊಂದು ಚಿತ್ರ]

English summary
Bollywood Actor Vivek Oberoi Says He Wants Salman Khan To Break Records Of Prabhas Baahubali 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada