For Quick Alerts
  ALLOW NOTIFICATIONS  
  For Daily Alerts

  ಶಾರೂಖ್ ಚಿತ್ರದ ಈ ದಾಖಲೆಯನ್ನ 'ಬಾಹುಬಲಿ' ಬ್ರೇಕ್ ಮಾಡಲಾಗಿಲ್ಲ..!

  By Bharath Kumar
  |

  ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಸದ್ಯ ದಾಖಲೆಗಳ ಮೇಲೆ ದಾಖಲೆಯನ್ನ ನಿರ್ಮಿಸಿದೆ. ಮೊದಲ ದಿನದಿಂದ ಇಲ್ಲಿಯವರೆಗೂ ದಕ್ಷಿಣ ಭಾರತ ಮಾತ್ರವಲ್ಲದೇ ಇಡೀ ಭಾರತದಲ್ಲೇ ಯಾರೂ ಮಾಡಿರದ ರೆಕಾರ್ಡ್ ಗಳನ್ನ ತನ್ನ ಹೆಸರಿಗೆ ಬರೆದುಕೊಂಡಿದೆ.

  ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡಿದ್ದ ಅಮೀರ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಅಂತಹ ನಟರ ದಾಖಲೆಗಳನ್ನ ಪುಡಿ ಪುಡಿ ಮಾಡಿರುವ 'ಬಾಹುಬಲಿ', ಬಾಲಿವುಡ್ ಬಾದ್ ಶಾ ಹೆಸರಿನಲ್ಲಿರುವ ಒಂದು ದಾಖಲೆಯನ್ನ ಮಾತ್ರ ಸರಿಗಟ್ಟಲು ಸಾಧ್ಯವಾಗಲಿಲ್ಲ.['ಬಾಹುಬಲಿ' ಚಿತ್ರವನ್ನ ರಿಜೆಕ್ಟ್ ಮಾಡಿದ್ದ ಅತಿರಥ ಮಹಾರಥರಿವರು.!]

  ಅಷ್ಟಕ್ಕೂ, ಶಾರುಖ್ ಖಾನ್ ಹೆಸರಿನಲ್ಲಿರುವ ಆ ದಾಖಲೆ ಯಾವುದು? 'ಬಾಹುಬಲಿ' ಚಿತ್ರದಿಂದ ಅಳಿಸಲು ಸಾಧ್ಯವಾಗದ ಆ ರೆಕಾರ್ಡ್ ಏನು? ಮುಂದೆ ಓದಿ....

  ಮೊದಲ ದಿನದ ಗಳಿಕೆಯಲ್ಲಿ 'ಬಾದ್ ಶಾ' ಬಾಸ್!

  ಮೊದಲ ದಿನದ ಗಳಿಕೆಯಲ್ಲಿ 'ಬಾದ್ ಶಾ' ಬಾಸ್!

  'ಬಾಹುಬಲಿ' ಚಿತ್ರ ಮೊದಲ ದಿನದ ಕಲೆಕ್ಷನ್ 100 ಕೋಟಿ ಗಡಿ ದಾಟಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಸಿದ ಚಿತ್ರ ಎಂಬ ದಾಖಲೆ 'ಬಾಹುಬಲಿ' ಚಿತ್ರದ್ದು. ಆದ್ರೂ, ಶಾರೂಖ್ ಮಾಡಿರುವ ಮೊದಲ ದಿನದ ಕಲೆಕ್ಷನ್ 'ಬಾಹುಬಲಿ'ಯಿಂದ ಬ್ರೇಕ್ ಆಗಲಿಲ್ಲ ಎನ್ನುವುದು ವಿಶೇಷ.

  ಶಾರೂಖ್ ಖಾನ್ ದಾಖಲೆ ಏನು?

  ಶಾರೂಖ್ ಖಾನ್ ದಾಖಲೆ ಏನು?

  ಶಾರೂಖ್ ಖಾನ್ ಅಭಿನಯದ 'ಹ್ಯಾಪಿ ನ್ಯೂ ಇಯರ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ 42.62 ಕೋಟಿ ಗಳಿಸಿದೆ. ಇದುವರೆಗೂ ಮೊದಲ ದಿನ ಅತಿ ಹೆಚ್ಚು ಗಳಿಸಿರುವ ಹಿಂದಿ ಚಿತ್ರ ಎಂಬ ದಾಖಲೆ 'ಹ್ಯಾಪಿ ನ್ಯೂ ಇಯರ್' ಹೆಸರಿನಲ್ಲಿದೆ.['ಬಾಹುಬಲಿ' ನಂತರ 1000 ಕೋಟಿ ಗಳಿಸಿದ ಭಾರತದ ಮತ್ತೊಂದು ಚಿತ್ರ]

  'ಬಾಹುಬಲಿ' ಹಿಂದಿ ಕಲೆಕ್ಷನ್ ಎಷ್ಟು?

  'ಬಾಹುಬಲಿ' ಹಿಂದಿ ಕಲೆಕ್ಷನ್ ಎಷ್ಟು?

  ಇನ್ನು ಮೊದಲ ದಿನ 100 ಕೋಟಿ ಗಳಿಸಿದ್ದ 'ಬಾಹುಬಲಿ', ಹಿಂದಿ ವರ್ಷನ್ ನಲ್ಲಿ ಮೊದಲ ದಿನ ಗಳಿಸಿದ್ದು ಕೇವಲ 41 ಕೋಟಿ ಮಾತ್ರ. ಹೀಗಾಗಿ, ಶಾರೂಖ್ ಚಿತ್ರವೇ ಮೊದಲ ಸ್ಥಾನದಲ್ಲಿದೆ.

  ಶಾರೂಖ್ ಏಕ್ ದಿನ್ ಕಾ 'ಸುಲ್ತಾನ್'

  ಶಾರೂಖ್ ಏಕ್ ದಿನ್ ಕಾ 'ಸುಲ್ತಾನ್'

  ಜಗತ್ತಿನಾದ್ಯಂತ ಮೊದಲ ದಿನ 100 ಕೋಟಿ ಗಳಿಸಿದ 'ಬಾಹುಬಲಿ, ಬಾಲಿವುಡ್ ನಲ್ಲಿ ಶಾರೂಖ್ ಖಾನ್ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಲಿಲ್ಲ. ಈ ಮೂಲಕ ಬಾಲಿವುಡ್ ನಲ್ಲಿ ಈ ದಾಖಲೆ ಕಿಂಗ್ ಖಾನ್ ಹೆಸರಿನಲ್ಲೇ ಇದೆ.['ಬಾಹುಬಲಿ 2' ನೋಡಿ ರಾಜಮೌಳಿ ಬೆನ್ನುತಟ್ಟಿದ ಸೂಪರ್ ಸ್ಟಾರ್ ರಜನಿ]

  1500 ಕೋಟಿ ಗಳಿಸಿದ 'ಬಾಹುಬಲಿ'

  1500 ಕೋಟಿ ಗಳಿಸಿದ 'ಬಾಹುಬಲಿ'

  ಸದ್ಯ, ಬಾಕ್ಸ್ ಆಫೀಸ್ ನಲ್ಲಿ 1500 ಕೋಟಿ ಗಳಿಸಿ ಮುನ್ನಗ್ಗುತ್ತಿರುವ 'ಬಾಹುಬಲಿ' 2000 ಕೋಟಿ ಗಳಿಸಿದ್ರು ಅಚ್ಚರಿಯಿಲ್ಲ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಅನುಷ್ಕಾ ಶೆಟ್ಟಿ, ತಮನ್ನ, ರಮ್ಯಾಕೃಷ್ಣ, ಸತ್ಯರಾಜ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.[ಪರಾಕ್ರಮ ಮೆರೆದ 'ಬಾಹುಬಲಿ', ರಾಜಮೌಳಿ 'ಕಲ್ಪನೆ'ಗೆ ಮಿತಿಯಿಲ್ಲ]

  English summary
  Baahubali 2 fails to beat Shah Rukh Khan’s Happy New Year in First Day Collection – here’s how.....

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X