ಸಾನಿಯಾ ಜೊತೆ ಶಾಹಿದ್ ಕಪೂರ್ ಡೇಟಿಂಗ್ ನಡೆದಿತ್ತೇ?

By Suneel

ಕರಣ್ ಜೋಹರ್ 'ಕಾಫಿ ವಿತ್ ಕರಣ್ ' ಟಿವಿ ಶೋ ನಲ್ಲಿ ಸೆಲಬ್ರಿಟಿಗಳನ್ನು ಕಾಲ್ ಎಳೆಯೋದು ಸಹಜ. ಜೊತೆಗೆ ಹಲವರ ಪ್ರೀತಿ ಪ್ರೇಮ, ಮದುವೆ, ಗಾಸಿಪ್ ವಿಷಯಗಳನ್ನು ತಮ್ಮ ಟಾಕ್ ಶೋ ನಲ್ಲೇ ಬಾಯಿಬಿಡಿಸಿಬಿಡುತ್ತಾರೆ.['ಅಮೀರ್ ಖಾನ್ ಭಾರತದ ಮೋಸ್ಟ್ ಇಂಟೆಲಿಜೆಂಟ್ ಆಕ್ಟರ್': ಹೇಳಿದ್ದು ಯಾರು?]

ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ಗಾಸಿಪ್ 8 ವರ್ಷಗಳ ಹಿಂದೆ ಸಿಕ್ಕಾಪಟ್ಟೆ ಹರಿದಾಡಿತ್ತು. ಆದರೆ ರೂಮರ್ ಬಗ್ಗೆ ಇಂದು ಕರಣ್ ಜೋಹರ್, ಸಾನಿಯಾ ಮಿರ್ಜಾ ಅವರಿಂದಲೇ ಬಾಯಿಬಿಡಿಸಿದ್ದಾರೆ. ಅಸಲಿ ಕರಣ್ ತಮ್ಮ ಟಾಕ್ ಶೋ ನಲ್ಲಿ ಕೇಳಿದ್ದು ಏನು? ಸಾನಿಯಾ ಮಿರ್ಜಾ ಹೇಳಿದ್ದೇನು? ಮುಂದೆ ಓದಿ.

ಕರಣ್ ಜೋಹರ್ ಟಾಕ್ ಶೋ

ಕರಣ್ ಜೋಹರ್ ಟಾಕ್ ಶೋ

ವಿಶ್ವ ಪ್ರಸಿದ್ಧ ಭಾರತೀಯ ಟೆನಿಸ್ ಆಟಗಾತಿ ಸಾನಿಯಾ ಮಿರ್ಜಾ ಇತ್ತೀಚೆಗೆ ತಮ್ಮ ಸ್ನೇಹಿತೆ ಫರ್ಹಾ ಖಾನ್ ಜೊತೆಗೆ 'ಕಾಫಿ ವಿತ್ ಕರಣ್' ಶೋ ಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಕರಣ್ ಜೋಹರ್, ಸಾನಿಯಾ ಡೇಟಿಂಗ್ ಬಗ್ಗೆ ಕೆದುಕಿದ್ದಾರೆ.[ಆತ್ಮಕತೆಯಲ್ಲಿ ಸೆಕ್ಸ್ ಲೈಫ್ ಬಗ್ಗೆ ಹೇಳಿಕೊಂಡಿರುವ ಕರಣ್ ಜೋಹರ್
]

ಲವ್, ಡೇಟಿಂಗ್, ಮದುವೆ

ಲವ್, ಡೇಟಿಂಗ್, ಮದುವೆ

ಕರಣ್ - ಲವ್, ಡೇಟಿಂಗ್ ಮತ್ತು ಮದುವೆ ವಿಷಯದಲ್ಲಿ ನಿಮ್ಮ ಲೈಫ್ ಗೆ ಬಾಲಿವುಡ್ ನಟ ಯಾರಾದರು ಎಂಟರ್ ಆಗಿದ್ರ?
ಸಾನಿಯಾ ಮಿರ್ಜಾ- ಖಂಡಿತ ಇಲ್ಲ... ಎಂಟು ವರ್ಷಗಳ ಹಿಂದೆ ನಾನು ವಿದೇಶ ಪ್ರಯಾಣದಲ್ಲಿ ಇದ್ದದ್ದೇ ಹೆಚ್ಚು. ಆ ರೀತಿ ಏನು ನನ್ನ ಜೀವನದಲ್ಲಿ ನಡೆದಿಲ್ಲ.

ಶಾಹಿದ್ ಜೊತೆ ಡೇಟಿಂಗ್ ಇರಲಿಲ್ವಾ...

ಶಾಹಿದ್ ಜೊತೆ ಡೇಟಿಂಗ್ ಇರಲಿಲ್ವಾ...

ಕರಣ್ - ಶಾಹಿದ್ ಕಪೂರ್ ಮತ್ತು ನಿಮ್ಮ ನಡುವೆ ಡೇಟಿಂಗ್ ಇದೆ ಎಂಬ ವದಂತಿಗಳು ಇದ್ದವು. ಇವು ನಿಜವೇ?
ಸಾನಿಯಾ ಮಿರ್ಜಾ - ನನಗೀಗ ಯಾವುದು ನೆನಪಿಲ್ಲ. ಅಂತಹ ಯಾವ ಘಟನೆಗಳು ನಡೆದಿರುವ ಹಾಗಿಲ್ಲ. ಅಲ್ಲದೇ ಎಂಟು ವರ್ಷ ಅಂದ್ರೆ ಇದು ತುಂಬಾ ಹಳೇ ವಿಷಯ. ಈಗಿನ ಹಾಗೆ ಆಗಲೂ ನಾನು ಪ್ರಯಾಣದಲ್ಲಿಯೇ ಬಿಜಿ ಆಗಿರುತ್ತಿದೆ.

ಮದುವೆ ಆಗೋದಾದ್ರೆ..

ಮದುವೆ ಆಗೋದಾದ್ರೆ..

ಕರಣ್ ಜೋಹರ್ - ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಇಬ್ಬರಲ್ಲಿ ಯಾರನ್ನು ಮದುವೆ ಆಗಲು ಮತ್ತು ಯಾರನ್ನು ಹಗ್ ಮಾಡಲು ಇಷ್ಟಪಡುತ್ತೀರಿ?
ಸಾನಿಯಾ ಮಿರ್ಜಾ - ಹಾ...ನಾನು ರಣವೀರ್ ಸಿಂಗ್ ರನ್ನು ಹಗ್ ಮಾಡಲು, ರಣಬೀರ್ ಕಪೂರ್ ಅನ್ನು ಮದುವೆ ಆಗಲು ಇಷ್ಟಪಡುತ್ತೇನೆ.

ಕೊಲ್ಲುವುದಾದರೆ..?

ಕೊಲ್ಲುವುದಾದರೆ..?

ಕರಣ್ ಜೋಹರ್- ರಣವೀರ್, ರಣಬೀರ್ ಕಪೂರ್ ಮತ್ತು ಶಾಹಿದ್ ಕಪೂರ್ ಮೂವರಲ್ಲಿ ನೀವು ಯಾರನ್ನು ಕೊಲ್ಲಲು ಬಯಸುತ್ತೀರಿ...
ಸಾನಿಯಾ ಮಿರ್ಜಾ - ಅದು.. ಶಾಹಿದ್ ಕಪೂರ್ ನನ್ನು ಕೊಲ್ಲಲು ಇಷ್ಟ.

ಡೇಟಿಂಗ್ ನಡೆದು ನಿಂತು ಹೋಗಿರಬಹುದು..

ಡೇಟಿಂಗ್ ನಡೆದು ನಿಂತು ಹೋಗಿರಬಹುದು..

ಸಾನಿಯಾ ಮಿರ್ಜಾ ಶಾಹಿದ್ ಕಪೂರ್ ಅನ್ನು ಕೊಲ್ಲಲು ಇಷ್ಟ ಎಂದು ಹೇಳಿರುವ ಬಗ್ಗೆ ವಿಶ್ಲೇಷಿಸಿದರೆ, ಬಹುಶಃ ಎಂಟು ವರ್ಷಗಳ ಹಿಂದೆ ಶಾಹಿದ್ ಮತ್ತು ಸಾನಿಯಾ ಮಿರ್ಜಾ ನಡುವೆ ಡೇಟಿಂಗ್ ನಡೆದು ಬ್ರೇಕಪ್ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

More from Filmibeat

English summary
Indian Tennis Player Sania Mirza was latest host in the Koffee With Karan show with her close friend from Bollywood - Farah Khan. While the duo entertained host Karan Johar with some hilarious answers. Here is what you can know..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X