»   » 'ಅಮೀರ್ ಖಾನ್ ಭಾರತದ ಮೋಸ್ಟ್ ಇಂಟೆಲಿಜೆಂಟ್ ಆಕ್ಟರ್': ಹೇಳಿದ್ದು ಯಾರು?

'ಅಮೀರ್ ಖಾನ್ ಭಾರತದ ಮೋಸ್ಟ್ ಇಂಟೆಲಿಜೆಂಟ್ ಆಕ್ಟರ್': ಹೇಳಿದ್ದು ಯಾರು?

Posted By:
Subscribe to Filmibeat Kannada

ಧರ್ಮಾ ಪ್ರೊಡಕ್ಷನ್ ಮಾಲೀಕ ಕರಣ್ ಜೋಹರ್ 'ಅಮೀರ್ ಖಾನ್ ಗೇಮ್ ಚೇಂಜರ್' ಎಂದು ಹೇಳಿದ್ದಾರೆ.['ದಂಗಲ್', 'ಸುಲ್ತಾನ್' ಚಿತ್ರಕ್ಕೆ 'ರಯೀಸ್' ಹೋಲಿಸುವುದಿಲ್ಲ: ಶಾರುಖ್]

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆದ ಅಮೀರ್ ಖಾನ್ ಅವರು ಇತ್ತೀಚೆಗಷ್ಟೆ 'ದಂಗಲ್' ಸಿನಿಮಾ ಯಶಸ್ಸಿನಲ್ಲಿ ಪಾರ್ಟಿ ಒಂದನ್ನು ಆಯೋಜಿಸಿದ್ದರು. ಈ ವೇಳೆ 'ದಂಗಲ್' ಸಿನಿಮಾ ಬಗ್ಗೆ ಮಾತನಾಡುತ್ತ ಅಮೀರ್ ಖಾನ್ ಅವರನ್ನು 'ಭಾರತದ ಅತ್ಯಂತ ಇಂಟೆಲಿಜೆಂಟ್ ಆಕ್ಟರ್' ಎಂದು ಕರಣ್ ಜೋಹರ್ ಹೊರಳಿದ್ದಾರೆ.

ಅಮೀರ್ ಖಾನ್ ಗೇಮ್ ಚೇಂಜರ್

ಬಾಲಿವುಡ್ ಫಿಲ್ಮ್ ಮೇಕರ್ ಕರಣ್ ಜೋಹರ್, 'ಸೂಪರ್ ಸ್ಟಾರ್ ಅಮೀರ್ ಖಾನ್ ಗೇಮ್ ಚೇಂಜರ್ ಮತ್ತು ತಮ್ಮ ಸಿನಿಮಾಗಳಿಗೆ ಅದ್ವಿತೀಯ ಕಾನ್ಸೆಪ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಿನಿಮಾ ರಂಗಕ್ಕೆ ಹೊಸ ಆಯಾಮವನ್ನು ನೀಡಿದ್ದಾರೆ' ಎಂದಿದ್ದಾರೆ.['ದಂಗಲ್' ನಟಿ ಝೈರಾ ವಿವಾದಕ್ಕೆ ಅಮೀರ್ ಖಾನ್ ಎಂಟ್ರಿ]

'ದಂಗಲ್' ಸಕ್ಸಸ್

ಇತ್ತೀಚೆಗಷ್ಟೆ ಏರ್ಪಡಿಸಿದ್ದ 'ದಂಗಲ್' ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ಕರಣ್ ಜೋಹರ್, "ಅಮೀರ್ ಖಾನ್ ಸಿನಿಮಾಗಳಿಗೆ ಆಯ್ಕೆ ಮಾಡಿಕೊಳ್ಳುವ ವಿಷಯಗಳು, ಉದಾಹರಣೆಗೆ 'ತಾರೆ ಝಮೀರ್ ಪರ್', ರಂಗ್ ದೆ ಬಸಂತಿ', 'ಲಗಾನ್', 'ದಿಲ್ ಛಾಹ್ತ ಹೈ' ಅಥವಾ 'ದಂಗಲ್' ಆಗಿರಬಹುದು, ಇವುಗಳು ಭಾರತೀಯ ಸಿನಿಮಾರಂಗಕ್ಕೆ ಹೊಸ ಆಯಾಮಗಳನ್ನು ತಂದುಕೊಟ್ಟಿವೆ" ಎಂದಿದ್ದಾರೆ.

ಅಮೀರ್ ಕಾನ್ಸೆಪ್ಟ್ ಗಳಿಂದ ಬಂದ ಡಿಫರೆಂಟ್ ಸಿನಿಮಾಗಳು

ಅಮೀರ್ ಕಾನ್ಸೆಪ್ಟ್ ಗಳ ಸ್ಫೂರ್ತಿಯಿಂದ 'ಪಿಂಕ್', 'ನೀರ್ಜ' ಮತ್ತು 'ಕಪೂರ್ ಅಂಡ್ ಸನ್ಸ್' ಎಂಬ ಹಲವು ಡಿಫರೆಂಟ್ ಸಿನಿಮಾಗಳು ಇತರರಿಂದ ಮೂಡಿಬಂದವು ಎಂದು ಕರಣ್ ಜೋಹರ್ 'ದಂಗಲ್' ಯಶಸ್ಸಿನ ಬಗ್ಗೆ ಶ್ಲಾಷಿಸಿದ್ದಾರೆ.

'ಮೋಸ್ಟ್ ಇಂಟೆಲಿಜೆಂಟ್ ಆಕ್ಟರ್'

"ನಾನು ಯಾರಿಗೂ ಟ್ಯಾಗ್ ನೀಡುವುದಿಲ್ಲ. ಆದರೆ 51 ವರ್ಷದ ಅಮೀರ್ ಖಾನ್, ಭಾರತದ ಮೋಸ್ಟ್ ಇಂಟೆಲಿಜೆಂಟ್ ಆಕ್ಟರ್. ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಅಮೀರ್ ಅತ್ಯಂತ ಔಟ್ ಸ್ಟ್ಯಾಂಡಿಂಗ್ ನಿರ್ಮಾಪಕ ಮತ್ತು ನಟ" ಎಂದಿದ್ದಾರೆ ಕರಣ್ ಜೋಹರ್.

'ದಂಗಲ್' ಚಿತ್ರದ ಬಗ್ಗೆ ಕರಣ್ ಜೋಹರ್ ಹೇಳಿದ್ದೇನು?

" 'ದಂಗಲ್' ಕಂಪ್ಲೀಟ್ ಹಿಂದೂಸ್ತಾನಿ ಸಿನಿಮಾ.. ಮಹೋನ್ನತವಾಗಿ ಪ್ರೆಸೆಂಟ್ ಮಾಡಲಾಗಿದ್ದು, ಚಿತ್ರ ಪ್ರತಿಯೊಬ್ಬರ ಹೃದಯವನ್ನು ಗೆಲ್ಲುತ್ತದೆ. ಕಳೆದ ದಶಕದಲ್ಲಿ 'ದಂಗಲ್' ಗಿಂತ ಅತ್ಯುತ್ತಮವಾಗಿ ಮೂಡಿಬಂದ ಯಾವುದೇ ಸಿನಿಮಾ ಇಲ್ಲ ಎಂದು ಭಾವಿಸಿದ್ದೇನೆ".

English summary
Karan Johar says Aamir Khan is a game changer & has given a new aspect to the mainstream cinema by choosing unique subjects for his films. KJO also called Aamir the most intelligent actor in India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada