»   » ಆತ್ಮಕತೆಯಲ್ಲಿ ಸೆಕ್ಸ್ ಲೈಫ್ ಬಗ್ಗೆ ಹೇಳಿಕೊಂಡಿರುವ ಕರಣ್ ಜೋಹರ್

ಆತ್ಮಕತೆಯಲ್ಲಿ ಸೆಕ್ಸ್ ಲೈಫ್ ಬಗ್ಗೆ ಹೇಳಿಕೊಂಡಿರುವ ಕರಣ್ ಜೋಹರ್

Posted By: Chethan
Subscribe to Filmibeat Kannada

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಸಲಿಂಗಕಾಮಿಯೇ, ಅಲ್ಲವೇ ಎಂಬ ಪ್ರಶ್ನೆ ಇಂದು ನೆನ್ನೆಯದಲ್ಲ. ಹಲವಾರು ವರ್ಷಗಳ ಹಿಂದೆಯೇ ಜನಪ್ರಿಯ ನಟನೊಬ್ಬನ ಜತೆಗೆ ಜೋಹರ್ ಸಲಿಂಗಿ ಎಂಬ ವದಂತಿಗಳು ಹರಡಿದ್ದವು.

ಈ ಎಲ್ಲಾ ವದಂತಿಗಳಿಗೆ, ಈ ಚಿತ್ರ ನಿರ್ದೇಶಕ ಮೊದಲ ಬಾರಿ ಉತ್ತರಿಸಿದ್ದಾರೆ. ಅದೂ ಎಲ್ಲಿ ? ತಮ್ಮ ಆತ್ಮಕತೆಯಲ್ಲಿ!

ಯೆಸ್. ಶೀಘ್ರದಲ್ಲೇ ಕರಣ್ ಜೋಹರ್ ಅವರ ಆತ್ಮಕತೆ 'ದ ಅನ್ ಸೂಟಬಲ್ ಬಾಯ್' ಎಂಬ ಆತ್ಮಕತೆ ಹೊರಬರಲಿದ್ದು, ಅದರಲ್ಲಿ ಅವರು ತಮ್ಮ ಸೆಕ್ಸ್ ಲೈಫ್ ಬಗ್ಗೆ ಹೇಳಿಕೊಂಡಿರುವುದಾಗಿ ಖುದ್ದು ಅವರೇ ತಿಳಿಸಿದ್ದಾರೆ.

Karan Johar opens up about his sexual orientation

ಪುಸ್ತಕ ಬಿಡುಗಡೆಗೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿರುವ ಕರಣ್, "ನನ್ನ ಲೈಂಗಿಕ ಜೀವನದ ವಿಚಾರಗಳ ಬಗ್ಗೆ ಅನೇಕರಿಗೆ ತಿಳಿದಿದೆ. ಹಾಗಾಗಿ, ಅದನ್ನು ಕೂಗಿ ಹೇಳಬೇಕಿಲ್ಲ. ಹಾಗೊಮ್ಮೆ ನಾನು ಕೂಗಿ ಹೇಳಿದರೆ ನನಗೆ ಕಷ್ಟಗಳು ಎದುರಾಗಲಿವೆ. ಸಂಪ್ರದಾಯವನ್ನು ಗೌರವಿಸುವ ಈ ದೇಶದಲ್ಲಿ ನನ್ನ ಹೇಳಿಕೆಗಳು ನನ್ನನ್ನು ಜೈಲಿಗೂ ದೂಡಬಹುದು. ಹಾಗಾಗಿ, ಆ 'ಮೂರು ಪದಗಳನ್ನು' ನಾನು ಬಹಿರಂಗಪಡಿಸಲಾರೆ" ಎಂದಿದ್ದಾರೆ. ಆದರೆ, ಆ ಬಗ್ಗೆ ಏನಾದರೂ ಸುಳಿವನ್ನು ನೀಡಿದ್ದಾರೆಯೇ ಎಂಬುದಕ್ಕೆ ಆತ್ಮಕತೆ ಓದಿದವರಷ್ಟೇ ಉತ್ತರಿಸಬಹುದೇನೋ!

ಆದರೆ, ಕೆಲ ವರ್ಷಗಳ ಹಿಂದೆ ಕರಣ್ ಜೋಹರ್, ನಟ ಶಾರುಖ್ ಖಾನ್ ನಡುವೆ ಆಕರ್ಷಣೆ ಇದೆ ಎಂಬರ್ಥದಲ್ಲಿ ಗುಲ್ಲೆದ್ದಿತ್ತು. ಇದು ಕರಣ್ ಅವರಿಗೆ ತೀವ್ರ ಆಘಾತ ತಂದಿತ್ತಂತೆ. ಈ ಆಘಾತಗಳನ್ನು ಕರಣ್ ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರಂತೆ. ಒಂದೊಮ್ಮೆ ವರದಿಗಾರನೊಬ್ಬ ಇವರಿಗೆ ಈ ಬಗ್ಗೆ ಕೆದಕಿದ್ದನಂತೆ. ಆಗ ಕೋಪಗೊಂಡಿದ್ದ ಕರಣ್, ''ನೀವು ನೀವು ಅಣ್ಣನೊಂದಿಗೆ ಮಲಗಿರಬಹುದಾದ ವಿಚಾರವನ್ನು ಹೀಗೆ ಪ್ರಶ್ನಿಸಿದರೆ ಹೇಗಿರುತ್ತೆ?'' ಎಂದು ಕೇಳಿದ್ದರಂತೆ. ಅದಕ್ಕೆ ಸಿಟ್ಟಾದ ಆ ವರದಿಗಾರ ''ಇಂಥ ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾದರೂ ಹೇಗೆ ಮನಸ್ಸು ಬಂತು?'' ಎಂದನಂತೆ. ಇದಕ್ಕೆ ಉತ್ತರಿಸಿದ್ದ ಕರಣ್, "ಶಾರುಖ್ ನನ್ನ ದೊಡ್ಡ ಅಣ್ಣನಿದ್ದಂತೆ. ಇದನ್ನು ನಾನು ಈ ಹಿಂದೆ ಹಲವಾರು ಬಾರಿ ಹೇಳಿದ್ದೇನೆ. ಅವರೊಂದಿಗೆ ಸಲುಗೆಯಿಂದಿದ್ದರೆ ಅದು ತಪ್ಪೇ?'' ಎಂದು ಮರುಪ್ರಶ್ನಿಸಿದ್ದರಂತೆ. ಇದೆಲ್ಲವನ್ನೂ ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರಂತೆ ಕರಣ್.

English summary
Karan Johar opens up about his sexual orientation for the first time in his forthcoming biography.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada