Dunki: 'ಡಂಕಿ' ಅಂದರೆ ಏನು? ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಕೊಟ್ಟ ಕಿಂಗ್ ಖಾನ್!
ಶಾರುಖ್ ಖಾನ್ ಈ ವರ್ಷದ ಮೋಸ್ಟ್ ಸಕ್ಸಸ್‌ಪುಲ್ ಹೀರೊ. ಒಂದರ ಹಿಂದೊಂದು ಮೆಗಾ ಸಿನಿಮಾಗಳನ್ನು ಕೊಟ್ಟಿರೋ ನಟ. ಸತತ ಆರು ಸೋಲುಗಳಿಂದ ಕಮ್ ಬ್ಯಾಕ್ ಮಾಡಿರೋ ಶಾರುಖ್ ಖಾನ್ 'ಪಠಾಣ್' ಹಾಗೂ 'ಜವಾನ್' ಎರಡು ಮೆಗಾ ಸಿನಿಮಾಗಳನ್ನು ಕೊಟ್ಟಿದ್ದಾರೆ. ಈ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಡಂಕಿ' ರಿಲೀಸ್‌ಗೆ ರೆಡಿಯಾಗುತ್ತಿದೆ.
'ಡಂಕಿ' ಶಾರುಖ್ ಖಾನ್ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ ನಟಿಸಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನವಿರುವುದರಿಂದ ಉತ್ತರ ಭಾರತದಲ್ಲಿ ಈ ಸಿನಿಮಾ ಬಗ್ಗೆ ಕ್ರೇಜ್ ಜೋರಾಗಿದೆ. ಅಲ್ಲದೆ ವಿದೇಶದಲ್ಲೂ ಈ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ಸಿನಿಮಾ ಬಗ್ಗೆ ಎಷ್ಟು ಕ್ಯೂರಿಯಾಸಿಟಿ ಇದೆಯೋ.. ಅಷ್ಟೇ ಕುತೂಹಲ ಸಿನಿಮಾದ ಟೈಟಲ್ ಮೇಲಿತ್ತು. ಆದರೆ, 'ಡಂಕಿ' ಅಂದರೆ ಏನು ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಕೊನೆಗೂ ಆ ಗುಟ್ಟನ್ನು ಶಾರುಖ್ ಖಾನ್ ಬಿಟ್ಟುಕೊಟ್ಟಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಕಿಂಗ್ ಖಾನ್ 'ಡಂಕಿ' ಅರ್ಥವನ್ನು ರಿವೀಲ್ ಮಾಡಿದ್ದಾರೆ.
ಶಾರುಖ್ ಖಾನ್ ಇತ್ತೀಚೆಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಮ್ಮ ಅಭಿಮಾನಿಗಳಿಗೆ 'AskSRK ಸೆಷನ್ ನಡೆಸಿದ್ದರು. ಇದರಲ್ಲಿ ಕಿಂಗ್ ಖಾನ್‌ಗೆ ಅಭಿಮಾನಿಗಳು ತಮ್ಮಿಷ್ಟದ ಪ್ರಶ್ನೆಯನ್ನು ಕೇಳಬಹುದು. ಈ ವೇಳೆ ಶಾರುಖ್ ಖಾನ್‌ಗೆ 'ಡಂಕಿ' ಅಂದರೆ ಏನು ಎಂದು ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದ. ಇದಕ್ಕೆ ಕಿಂಗ್ ಖಾನ್ ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ.

ಕಿಂಗ್ ಖಾನ್ ಹಾಸ್ಯಾಸ್ಮದವಾಗಿ "ಫಂಕಿ...ಹಂಕಿ....ಅಥವಾ ಮಂಕಿ ಎಂದು ಉಚ್ಚರಿಸಲಾಗುತ್ತಿದೆ" ಎಂದು ಉತ್ತರ ಕೊಟ್ಟಿದ್ದಾರೆ. ಅಸಲಿಗೆ ಈ ಪದವನ್ನು ಪಂಜಾಬ್ ಭಾಗದಲ್ಲಿ ಹೆಚ್ಚು ಬಳಕೆಯಾಗುತ್ತೆ. ಅಕ್ರಮವಾಗಿ ಗಡಿಯೊಳಗೆ ಪ್ರವೇಶ ಮಾಡುವುದನ್ನು ಅಲ್ಲಿ 'ಡಂಕಿ' ಎಂದು ಕರೆಯುತ್ತಾರೆ. 'ಡಂಕಿ' ಎಂದರೆ ಕತ್ತೆ (Donkey) ಎಂಬ ಅರ್ಥವನ್ನೂ ನೀಡುತ್ತದೆ.
ಅಪ್ಪನಿಗೆ 58.. ಮಗಳಿಗೆ 23.. ಅಪ್ಪ-ಮಗಳ ಮೊದಲ ಸಿನಿಮಾ ಕ್ರೇಜ್ ಹೇಗಿದೆ? ಟೈಟಲ್ ಏನು?
'ಮುನ್ನಾಬಾಯ್ ಎಂಬಿಬಿಎಸ್', '3 ಈಡಿಯಟ್ಸ್', 'ಪಿಕೆ','ಸಂಜು' ಅಂತಹ ಮೆಗಾ ಸಿನಿಮಾಗಳನ್ನು ಕೊಟ್ಟಿದ್ದು ನಿರ್ದೇಶಕ ರಾಜ್‌ಕುಮಾರ್ ಹಿರಾನಿ. ಈಗ 'ಡಂಕಿ' ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಈ ಸಿನಿಮಾದಲ್ಲಿ ತೋರಿಸಲಾಗಿದೆ.
ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಸ್ಟೋರಿ ಬರೆದಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ ಖಾನ್, ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ನಟ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದ್ಹಾಗೆ, 'ಡಂಕಿ' ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ನಿರ್ಮಾಣ ಮಾಡಿದೆ. ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ 'ಡಂಕಿ'ಗೆ ಹಣ ಹೂಡಿದ್ದಾರೆ. ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಡಿಸೆಂಬರ್ 21ಕ್ಕೆ ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.


Click it and Unblock the Notifications











