ಇಟಲಿಯಲ್ಲಿ 'ಸ್ವದೇಶ್' ಸಿನಿಮಾದ ನಟಿ ಗ್ರಾಯತಿ ಜೋಶಿ ಕಾರು ಅಪಘಾತ: ವಿಡಿಯೋ ವೈರಲ್

ಶಾರುಖ್ ಖಾನ್ ಸಿನಿಮಾ 'ಸ್ವದೇಶ್' ನೆನಪಿದೆಯಾ? ಕನ್ನಡದಲ್ಲಿ ಶಿವಣ್ಣ ನಟಿಸಿದ 'ಚಿಗುರಿದ ಕನಸು'ನಿಂದ ಪ್ರೇರಣೆ ಪಡೆದ ಸಿನಿಮಾವಿದು. 'ಲಗಾನ್' ಸಿನಿಮಾದ ನಿರ್ದೇಶಕ ಅಶುತೋಷ್ ಗೋವರಿಕರ್ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಮೂಲಕ ಗಮನ ಸೆಳೆದಿದ್ದ ಮತ್ತೊಂದು ಪ್ರತಿಭೆಯೇ ಗಾಯತ್ರಿ ಜೋಶಿ.

2000ದಲ್ಲಿ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡಿದ್ದ ಗಾಯತ್ರಿ ಜೋಶಿ 'ಸ್ವದೇಶ್' ಸಿನಿಮಾ ಮೂಲ ಜನಪ್ರಿಯರಾಗಿದ್ದರು. ನಿನ್ನೆ (ಅಕ್ಟೋಬರ್ 3)ಗಾಯತ್ರಿ ಜೋಷಿ ಹಾಗೂ ಪತಿ ವಿಕಾಸ್ ಓಬೆರಾಯ್ ಕಾರು ಇಲಿಟಿಯಲ್ಲಿ ಅಪಘಾತಕ್ಕೆ ಈಡಾಗಿದೆ.

Shah Rukh Khan Swades actress Gayatri Joshi meets with car accident in Italy

ಗಾಯತ್ರಿ ಜೋಷಿ ಹಾಗೂ ವಿಕಾಸ್ ಓಬೆರಾಯ್ ಇಬ್ಬರೂ ಸದ್ಯ ಇಟಲಿಯಲ್ಲಿ ಇದ್ದಾರೆ. ಅಲ್ಲಿನ ಸಾರ್ಡಿನಿಯಾ ಅನ್ನುವ ಪ್ರದೇಶದಲ್ಲಿ ಭೀಕರ ಸರಣಿ ಕಾರು ಅಘಾತವಾಗಿದೆ. ಫೆರಾರಿ ಹಾಗೂ ಲ್ಯಾಂಬೊರ್ಗಿನಿ ಕಾರುಗಳು ಓವರ್‌ಟೇಕ್ ಮಾಡುವಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟಿ ಗಾಯತ್ರಿ ಜೋಷಿ ಹಾಗೂ ವಿಕಾಸ್ ಓಬೆರಾಯ್ ಇಬ್ಬರೂ ಪ್ರಾಣಾಪಯದಿಂದ ಪಾರಾಗಿದ್ದು, ಫೆರಾರಿಯಲ್ಲಿ ಓವರ್‌ಟೇಕ್ ಮಾಡುತ್ತಿದ್ದ ಸ್ವಿಡ್ಜರ್‌ಲ್ಯಾಂಡ್ ಮೂಲದ ಇಬ್ಬರು ಹಿರಿಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಫ್ರೀ ಪ್ರೆಸ್ ಜರ್ನಲ್‌ನಲ್ಲಿ ನಟಿ ಗಾಯತ್ರಿ ಜೋಶಿ ಅಪಘಾತದ ವಿಷಯವನ್ನು ಕನ್ಫರ್ಮ್ ಮಾಡಿದ್ದಾರೆ. " ವಿಕಾಸ್ ಹಾಗೂ ನಾನು ಇಟಲಿಯಲ್ಲಿ ಇದ್ದೇವೆ. ನಮ್ಮ ಕಾರು ಅಪಘಾತಕ್ಕಿಡಾಗಿದೆ. ದೇವರ ದಯೆಯಿಂದ ನಾವಿಬ್ಬರೂ ಸುರಕ್ಷಿತವಾಗಿದ್ದೇವೆ" ಎಂದು ಫ್ರೀ ಪ್ರೆಸ್ ಜರ್ನಲ್‌ಗೆ ಮಾಹಿತಿಯನ್ನು ನೀಡಿದ್ದಾರೆ.

ಮೂಲಗಳ ಪ್ರಕಾರ, ಸಾರ್ಡಿನಿಯಾ ಸೂಪರ್ ಕಾರ್ ಟೂರ್ ನಡೆಯುತ್ತಿತ್ತು. ವಿಶ್ವದ ದುಬಾರಿ ಕಾರುಗಳ ಪರೇಡ್ ನಡೆಯುತ್ತಿತ್ತು. ಈ ವೇಳೆ ಫೆರಾರಿ ಹಾಗೂ ಲ್ಯಾಂಬೊರ್ಗಿನಿ ಕಾರುಗಳು ಚಲಿಸುತ್ತಿದ್ದ ವ್ಯಾನ್ ಅನ್ನು ಒಮ್ಮೆಗೆ ಓವರ್‌ಟೇಕ್ ಮಾಡಲು ಮುಂದಾದಾಗ ಈ ದುರ್ಘಟನೆ ನಡೆದಿದೆ.

ಫೆರಾರಿ ಕಾರಿನಲ್ಲಿದ್ದ ಸ್ವಿಡ್ಜರ್‌ಲ್ಯಾಂಡ್ ಮೂಲದ ಮೆಲಿಸಾ ಕ್ರೌಟ್ಲಿ (63) ಹಾಗೂ ಮಾರ್ಕಸ್ ಕ್ರೌಟ್ಲಿ (67) ನಿಧನರಾಗಿದ್ದಾರೆ. ಈ ಅಪಘಾತದ ವೇಳೆ ಫೆರಾರಿ ಕಾರು ಹೊತ್ತಿ ಉರಿದಿದೆ ಎಂದೂ ವರದಿಯಾಗಿದೆ. ಅಪಘಾತವದ ದೃಶ್ಯ ಮತ್ತೊಂದು ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ಸೆರೆಯಾಗಿದೆ.

ಗಾಯತ್ರಿ ಜೋಷಿ 'ಸ್ವದೇಶ್' ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದರು. ಸ್ವದೇಶ್ ಸಿನಿಮಾ ಮೂಲಕ ಗಮನ ಸೆಳೆದಿದ್ದರೂ, ಬಾಲಿವುಡ್‌ನಿಂದ ದೂರವೇ ಉಳಿದಿದ್ದರು. 'ಸ್ವದೇಶ್' ಗಾಯತ್ರಿ ನಟಿಸಿದ ಮೊದಲ ಹಾಗೂ ಕೊನೆಯ ಸಿನಿಮಾ. ಇದರೊಂದಿಗೆ ಹಲವು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

2005ರಲ್ಲಿ ಗಾಯತ್ರಿ ಜೋಷಿ ಉದ್ಯಮಿ ವಿಕಾಸ್ ಓಬೆರಾಯ್ ಅನ್ನು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆ ಬಳಿಕ ಗಾಯ್ರತಿ ಜೋಷಿ ಸಿನಿಮಾರಂಗದಿಂದಲೇ ದೂರ ಉಳಿದಿದ್ದರು. ಇತ್ತೀಚೆಗೆ ಬಾಲಿವುಡ್ ನಟರೊಂದಿಗೆ ಪತಿ ವಿಕಾಸ್ ಓಬೆರಾಯ್ ಜೊತೆಯಲ್ಲಿ ಕಾಣಿಸಿಕೊಂಡಿದ್ದರು.

More from Filmibeat

English summary
Shah Rukh Khan Swades actress Gayatri Joshi meets with car accident in Italy:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X