ಸಲ್ಲೂ ಮೇಲೆ ಶಾರುಖ್ ಗೆ ಏಕೆ ಸಡನ್ ಲವ್
ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹಾಗೂ ಕಿಂಗ್ ಖಾನ್ ಶಾರುಖ್ ನಡುವೆ ಇರುವ ವೈಮನಸ್ಯ ಎಲ್ಲರಿಗೂ ಗೊತ್ತಿರುವ ವಿಚಾರ. ಸಲ್ಮಾನ್ ಖಾನ್ ತಂಗಿ ಅರ್ಪಿತಾ ಮದುವೆ ನಂತರ ಇಬ್ಬರು ಮತ್ತೊಮ್ಮೆ ಗಳಸ್ಯ ಕಂಠಸ್ಯ ಎಂಬಂತೆ ದೋಸ್ತಿ ಬೆಳೆಸಿಕೊಂಡಿದ್ದಾರೆ. ಇದರ ಲೇಟೆಸ್ಟ್ ಸ್ಯಾಂಪಲ್ ನಿನ್ನೆ ರಾತ್ರಿ ಸಿಕ್ಕಿದೆ. ಹಿಟ್ ಅಂಡ್ ರನ್ ಕೇಸಿನ ತೀರ್ಪಿನ ಭೀತಿಯಲ್ಲಿರುವ ಸಲ್ಮಾನ್ ಖಾನ್ ಅವರನ್ನು ಶಾರುಖ್ ಖಾನ್ ಭೇಟಿ ಮಾಡಿದ್ದಾರೆ. [ಕರಣ್-ಅರ್ಜುನ್ ಮತ್ತೆ ಒಂದಾಗಿ ಬರುವ ಕಾಲ ಬರುತ್ತಾ?]
2008ರಲ್ಲಿ ಅಪಘಾತದ ನಂತರ ಸಲ್ಮಾನ್ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಮನೆ ಸೇರಿದ್ದರು. ಮಂಗಳವಾರ ರಾತ್ರಿ ಕೂಡಾ ಇದೇ ಮನೆಯಲ್ಲೇ ಶಾರುಖ್ ಹಾಗೂ ಸಲ್ಮಾನ್ ಸಮ್ಮಿಲನವಾಗಿದೆ. ಶಾರುಖ್ ಖಾನ್ ಅಲ್ಲದೆ ನಿರ್ದೇಶಕ ಡೇವಿಡ್ ಧವನ್ ಸೇರಿದಂತೆ ಅನೇಕ ಗಣ್ಯರು ಸಲ್ಮಾನ್ ಮನೆಗೆ ಭೇಟಿ ಕೊಟ್ಟಿದ್ದಾರೆ. [ಜೈಲಾ, ಬೇಲಾ ಸಲ್ಲು ಮೇಲೆ 2000 ಕೋಟಿ ಬೆಟ್ಟಿಂಗ್]

ಸಲ್ಮಾನ್ ಹಾಗೂ ಶಾರುಖ್ ಇಬ್ಬರು ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಸಲ್ಮಾನ್ ಅವರ ಮುದ್ದಿನ ತಂಗಿ ಅರ್ಪಿತಾ ಖಾನ್ ಹಾಗೂ ಪತಿ ಆಯೂಷ್ ಶರ್ಮ, ಮತ್ತೊಬ್ಬ ತಂಗಿ ಆಲ್ವೀರಾ ಹಾಗೂ ಆಕೆ ಪತಿ ಆತುಲ್ ಅಗ್ನಿಹೋತ್ರಿ, ಸಲ್ಮಾನ್ ಸೋದರರಾದ ಸೊಹೈಲ್ ಹಾಗೂ ಸಲ್ಮಾನ್ ಬಾಡಿಗಾರ್ಡ್ ಶೇರಾ ಮುಂತಾದವರಿದ್ದರು. [ಶಾರೂಖ್ ಈ ಮಟ್ಟಕ್ಕೆ ಬೆಳೆಯೋಕೆ ಸಲ್ಮಾನ್ ಕಾರಣ!]
ಸಲ್ಮಾನ್- ಶಾರುಖ್ ಇಬ್ಬರ ಪುನರ್ ಮಿಲನಕ್ಕೆ ಅರ್ಪಿತಾ ಖಾನ್ ಮದುವೆ ಸಾಕ್ಷಿಯಾಗಿದ್ದು ಸುಳ್ಳಲ್ಲ. ಹಳೆ ದ್ವೇಷ ಮರೆತ 'ಕರಣ್ -ಅರ್ಜುನ್' ಮತ್ತೆ ಹಳೆ ಗೆಳೆತನದ ದಿನಗಳನ್ನು ನೆನಪಿಸಿಕೊಂಡಿದ್ದರು. ಇದರಿಂದ ಬಾಲಿವುಡ್ ಮಂದಿ ಕೂಡಾ ಫುಲ್ ಖುಷ್ ಆಗಿದ್ದರು. ಇದರಿಂದ ಇಂಡಸ್ಟ್ರೀಗೆ ಲಾಭವೋ ಲಾಭ ಎಂದು ಎಣಿಕೆ ಶುರುವಾಗಿತ್ತು. [ಸಲ್ಲೂ ತಂಗಿ ಅರ್ಪಿತಾ ಹರಸಲು ಬಂದ ಶಾರುಖ್]
ಸಲ್ಮಾನ್ ಅವರ ಮೇಲೆ ಸುಮಾರು 2,000 ಕೋಟಿ ರು ಬೆಟ್ಟಿಂಗ್ ನಡೆದಿದೆ. ಸಲ್ಲೂ ನಂಬಿಕೊಂಡು ನಿರ್ಮಾಪಕರು 200 ಕೋಟಿ ರು ಹಣ ಹೂಡಿಕೆ ಮಾಡಿದ್ದಾರೆ. ಸಲ್ಮಾನ್ ಗೆ ಜೈಲಾ? ಬೇಲಾ? ಸದ್ಯದಲ್ಲೇ ತಿಳಿಯಲಿದೆ.


Click it and Unblock the Notifications











