For Quick Alerts
  ALLOW NOTIFICATIONS  
  For Daily Alerts

  'ದಿ ಕಪಿಲ್ ಶರ್ಮಾ ಶೋ'ನಿಂದ ಕಪಿಲ್ ಆನ್‌ಸ್ಕ್ರೀನ್ ವೈಫ್ ಹೊರಕ್ಕೆ?

  By Suneel
  |

  ಖ್ಯಾತ ಟಿವಿ ನಿರೂಪಕ ಕಪಿಲ್ ಶರ್ಮಾ ರವರ 'ದಿ ಕಪಿಲ್ ಶರ್ಮಾ ಶೋ' ನಲ್ಲಿಯ ಡಾ.ಮಶೂರ್ ಗುಲಟಿ ಮತ್ತು ರಿಂಕು ಭಾಬಿ ಪಾತ್ರ ನಿರ್ವಹಿಸುತ್ತಿದ್ದ ಸುನಿಲ್ ಗ್ರೋವರ್ ಇತ್ತೀಚೆಗಷ್ಟೆ ಈ ಶೋ ನಿಂದ ಹೊರಬೀಳುತ್ತಾರೆ ಎಂದು ಸುದ್ದಿಯಾಗಿತ್ತು. ಈಗ ಇದೇ ಶೋನ ಇನ್ನೊಬ್ಬ ಜನಪ್ರಿಯ ಪಾತ್ರಧಾರಿ ಈ ಶೋ ನಿಂದ ಹೊರಬರುವ ಬಗ್ಗೆ ಸುದ್ದಿ ಆಗಿದೆ.

  'ದಿ ಕಪಿಲ್ ಶರ್ಮಾ ಶೋ'ನಲ್ಲಿ ಕಪಿಲ್ ಶರ್ಮಾ ಗೆ ಸುಮೋನಾ ಚಕ್ರವರ್ತಿ ರವರು ಆನ್ ಸ್ಕ್ರೀನ್ ವೈಫ್ ಆಗಿ ಕಾಣಿಸಿಕೊಳ್ಳುವುದರ ಮೂಲಕ ಹಿಂದಿ ಕಿರುತೆರೆ ಪ್ರಿಯರ ಮನಗೆದ್ದಿದ್ದಾರೆ. ಆದರೆ ಈಗ ಸುಮೋನಾ ರವರು ಶೋ ನಿಂದ ಹೊರಹೋಗಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಈ ಹಿಂದೆ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಮತ್ತು ಪ್ರಸ್ತುತ 'ದಿ ಕಪಿಲ್ ಶರ್ಮಾ ಶೋ' ಎರಡು ಕಾರ್ಯಕ್ರಮಗಳಿಂದ ಹೆಚ್ಚು ಜನಪ್ರಿಯತೆ ಪಡೆದಿರುವ ಹಿನ್ನೆಲೆಯಲ್ಲಿ ಸುಮೋನಾ ಚಕ್ರವರ್ತಿ ದೀರ್ಘಕಾಲದ ಹೊಸ ಶೋ ವೊಂದಕ್ಕೆ ಆಫರ್ ಸಿಕ್ಕಿದ್ದು ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ 'ದಿ ಕಪಿಲ್ ಶರ್ಮಾ ಶೋ' ನಿಂದ ಹೊರಹೋಗಲಿದ್ದಾರೆ ಎಂದು ತಿಳಿದಿದೆ.['ದಿ ಕಪಿಲ್ ಶರ್ಮಾ ಶೋ'ನಿಂದ ಸುನಿಲ್ ಗ್ರೋವರ್ ಹೊರಬೀಳ್ತಾರಾ?, ಉತ್ತರ ಇಲ್ಲಿದೆ..]

  ಆದರೆ ಇನ್ನು ಹಲವು ಮೂಲಗಳು ಸುಮೋನಾ ಚಕ್ರವರ್ತಿ 'ದಿ ಕಪಿಲ್ ಶರ್ಮಾ ಶೋ' ಮೇಕರ್ ಗಳ ಜೊತೆ ಹಲವು ಕಾರಣಗಳಿಂದ ಬೇಸರಗೊಂಡಿದ್ದಾರೆ. ಈ ಕಾರಣದಿಂದ ಅವರೇ ಶೋ ತ್ಯಜಿಸಲು ಪ್ಲಾನ್ ಮಾಡಿದ್ದಾರೆ ಎನ್ನುತ್ತಿವೆ. ಸುಮೋನ ಈ ಶೋ ನಲ್ಲಿ ಡಾ.ಮಶೂರ್ ಗುಲಟಿ ಮಗಳು ಸರಳ ಪಾತ್ರದಲ್ಲಿ ಕಪಿಲ್ ಶರ್ಮಾ ರ ಆನ್ ಸ್ಕ್ರೀನ್ ವೈಫ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಬದಲಾಗಿ 'ದಿ ಕಪಿಲ್ ಶರ್ಮಾ ಶೋ' ನಿರ್ಮಾಣಕಾರರೇ ಹೊಸ ಮುಖ ಪರಿಚಯಿಸಲು ನಿರ್ಧರಿಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.[ಕಪಿಲ್ ಶೋ'ನಿಂದ ಹೊರಬಂದ ಸುನಿಲ್ ಗ್ರೋವರ್ ಹೊಸ 'ಕಾಮಿಡಿ ಶೋ'ಗೆ ಸಾರಥಿ!]

  ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಸುಮೋನಾ ರವರನ್ನು ಸಂಪರ್ಕಿಸಿದಾಗ, "ಕಂಡಿತ ಇಲ್ಲ. ನಾನು 'ದಿ ಕಪಿಲ್ ಶರ್ಮಾ ಶೋ' ನಿಂದ ಹೊರಹೋಗುತ್ತಿಲ್ಲ. ಈ ಶೋನಲ್ಲಿ ಅಭಿನಯಿಸುವುದನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ. ಈ ಕಾರ್ಯಕ್ರಮ ತ್ಯಜಿಸುವ ಬಗ್ಗೆ ಇನ್ನು ಯಾವುದೇ ನಿರ್ಧಾರ ಮಾಡಿಲ್ಲ" ಎಂದಿರುವುದು ತಿಳಿದಿದೆ. ಆದರೆ ಸುಮೋನಾ ಚಕ್ರವರ್ತಿ ಬಗ್ಗೆ ಕೇಳಿಬಂದಿರುವ ಈ ಸುದ್ದಿ ನಿಜವೇ ಅಥವಾ ರೂಮರ್ಸ್ ಇರಬಹುದಾ ಎಂಬುದರ ಬಗ್ಗೆ ಖಚಿತತೆ ಇಲ್ಲ.

  English summary
  The Kapil Sharma Show has been making headlines since its launch. Be it controversies over the nursing staff from different medical colleges and hospitals being unhappy with their portrayal on the show or the dipping TRP. Now, the show is once again in news. One of the key members of the show Sumona Chakravarti is reported to be unhappy with the makers and is apparently planning to quit the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X