»   » ಕಪಿಲ್ ಶೋ'ನಿಂದ ಹೊರಬಂದ ಸುನಿಲ್ ಗ್ರೋವರ್ ಹೊಸ 'ಕಾಮಿಡಿ ಶೋ'ಗೆ ಸಾರಥಿ!

ಕಪಿಲ್ ಶೋ'ನಿಂದ ಹೊರಬಂದ ಸುನಿಲ್ ಗ್ರೋವರ್ ಹೊಸ 'ಕಾಮಿಡಿ ಶೋ'ಗೆ ಸಾರಥಿ!

Posted By:
Subscribe to Filmibeat Kannada

'ದಿ ಕಪಿಲ್ ಶರ್ಮಾ ಶೋ'ನಲ್ಲಿಯ ಡಾ.ಮಶೂರ್ ಗುಲಟಿ ಮತ್ತು ರಿಂಕು ಭಾಬಿ ಪಾತ್ರ ನಿರ್ವಹಿಸುತ್ತಿದ್ದ ಸುನಿಲ್ ಗ್ರೋವರ್ ಇತ್ತೀಚೆಗಷ್ಟೆ ಸುದ್ದಿಯಲ್ಲಿದ್ದರು. ಕಾರಣ ಕಪಿಲ್ ಶರ್ಮಾ ಇವರ ಮೇಲೆ ಹಲ್ಲೆ ನಡಿಸಿದ್ದು. ಇದೇ ಹಿನ್ನೆಲೆಯಲ್ಲಿ ಸುನಿಲ್ ಗ್ರೋವರ್ 'ದಿ ಕಪಿಲ್ ಶರ್ಮಾ ಶೋ' ನಿಂದ ಹೊರಬೀಳುತ್ತಾರೆ ಎಂಬ ಸುದ್ದಿಯೂ ಸಹ ಹರಿದಾಡಿತ್ತು.['ದಿ ಕಪಿಲ್ ಶರ್ಮಾ ಶೋ'ನಿಂದ ಸುನಿಲ್ ಗ್ರೋವರ್ ಹೊರಬೀಳ್ತಾರಾ?, ಉತ್ತರ ಇಲ್ಲಿದೆ..]

ಇದಕ್ಕೆಲ್ಲಾ ತೆರೆ ಎಳೆದಿದ್ದ ಕಪಿಲ್, ಸುನಿಲ್ ಗ್ರೋವರ್ ರವರಲ್ಲಿ ಕ್ಷಮೆಯಾಚಿಸಿ, ಶೋ ನಿಂದ ಹೊರಗೆ ಹೋಗುತ್ತಾರಾ? ಎಂಬ ಅನುಮಾನಕ್ಕೆ ವಿರಾಮ ಸಹ ಹಾಕಿದ್ದರು. ಅಂದಹಾಗೆ ಈಗ ಲೇಟೆಸ್ಟ್ ವರದಿಗಳ ಪ್ರಕಾರ ಸುನಿಲ್ ಗ್ರೋವರ್ ರವರೇ ಹೊಸ ಕಾಮಿಡಿ ಶೋ ಹೋಸ್ಟ್ ಆಗಲಿದ್ದಾರೆ ಎಂದು ತಿಳಿದಿದೆ.

Sunil Grover to get new show on channel airing Kapil's show

ಹೌದು, ಇಷ್ಟು ದಿನ ಸೋನಿ ಟಿವಿಯಲ್ಲಿ 'ದಿ ಕಪಿಲ್ ಶರ್ಮಾ ಶೋ'ನಲ್ಲಿ ಆಕ್ಟ್ ಮಾಡುತ್ತಿದ್ದ ಕಾಮಿಡಿಯನ್ ಸುನಿಲ್ ಗ್ರೋವರ್ ಗೆ, ಇದೇ ಚಾನೆಲ್ ಈಗ ಹೊಸ ಕಾಮಿಡಿ ಶೋ ಹೋಸ್ಟ್ ಮಾಡಲು ಆಫರ್ ನೀಡಿದೆಯಂತೆ.

Sunil Grover to get new show on channel airing Kapil's show

ವಿಶೇಷ ಅಂದ್ರೆ ಕಪಿಲ್ ಶೋ ದಲ್ಲಿ ಇದ್ದ ಅಲಿ ಅಸ್ಗರ್, ಸುಗಂಧ ಮಿಶ್ರಾ ಮತ್ತು ಚಂದನ್ ಪ್ರಭಾಕರ್ ರವರು ಸುನಿಲ್ ಗ್ರೋವರ್ ನ ಹೊಸ ಕಾಮಿಡಿ ಶೋ ದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮೂಲಗಳ ಪ್ರಕಾರ ಸೋನಿ ಟಿವಿಯಲ್ಲಿ ಮೂಡಿಬರಲಿರುವ ಸುನಿಲ್ ಗ್ರೋವರ್ ಹೊಸ ಕಾಮಿಡಿ ಶೋ ಜೂನ್ ತಿಂಗಳಿಂದ ಪ್ರಸಾರವಾಗಲಿದೆ ಎಂದು ತಿಳಿದಿದೆ.

English summary
As per reports, comedian Sunil Grover has been offered to host a new comedy show by Sony TV, the channel which also airs 'The Kapil Sharma Show'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada