»   » 'ದಿ ಕಪಿಲ್ ಶರ್ಮಾ ಶೋ'ನಿಂದ ಸುನಿಲ್ ಗ್ರೋವರ್ ಹೊರಬೀಳ್ತಾರಾ?, ಉತ್ತರ ಇಲ್ಲಿದೆ..

'ದಿ ಕಪಿಲ್ ಶರ್ಮಾ ಶೋ'ನಿಂದ ಸುನಿಲ್ ಗ್ರೋವರ್ ಹೊರಬೀಳ್ತಾರಾ?, ಉತ್ತರ ಇಲ್ಲಿದೆ..

Posted By:
Subscribe to Filmibeat Kannada

ಖ್ಯಾತ ಟಿವಿ ನಿರೂಪಕ ಕಪಿಲ್ ಶರ್ಮಾ ಇತ್ತೀಚೆಗಷ್ಟೆ ತಾವು ಮದುವೆ ಆಗಲಿರುವ ಹುಡುಗಿ ಯಾರು ಎಂದು ರಿವೀಲ್ ಮಾಡಿ, ಖುಷಿಯಲ್ಲಿದ್ದರು. ಆದ್ರೆ ಅದರ ಬೆನ್ನಲ್ಲೇ ಈಗ ಚರ್ಚೆಗೆ ಗ್ರಾಸವಾಗಿದ್ದಾರೆ.[ಕಪಿಲ್ ಶರ್ಮಾ ಮದುವೆ ಆಗಲಿರುವ ಹುಡುಗಿ ಯಾರು ಗೊತ್ತೇ?]

'ದಿ ಕಪಿಲ್ ಶರ್ಮಾ ಶೋ'ನಲ್ಲಿಯ ಡಾ.ಮಶೂರ್ ಗುಲಟಿ ಮತ್ತು ರಿಂಕು ಭಾಬಿ ಪಾತ್ರ ನಿರ್ವಹಿಸುತ್ತಿದ್ದ ಸುನಿಲ್ ಗ್ರೋವರ್ ಮೇಲೆ ಕಪಿಲ್ ಶರ್ಮಾ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸುನಿಲ್ ಗ್ರೋವರ್ ಶೋ ನಿಂದ ಹೊರಬೀಳಲಿದ್ದಾರೆ ಎಂಬ ಊಹಾಪೋಹಗಳ ಸುದ್ದಿಯು ಬಿತ್ತರವಾಗಿತ್ತು. ಈ ಬಗ್ಗೆ ಕಪಿಲ್ ಶರ್ಮಾ ಅವರೇ ಈಗ ಪ್ರತಿಕ್ರಿಯೆ ನೀಡಿದ್ದು, ಸ್ಪಷ್ಟನೆ ಕೊಟ್ಟಿದ್ದಾರೆ.

ಸುನಿಲ್ ಗ್ರೋವರ್ ನಲ್ಲಿ ಕ್ಷಮೆ ಕೇಳಿದ ಕಪಿಲ್

ಸುನಿಲ್ ಗ್ರೋವರ್ 'ದಿ ಕಪಿಲ್ ಶರ್ಮಾ ಶೋ' ನಿಂದ ಹೊರಬೀಳುತ್ತಾರಾ? ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಕಪಿಲ್ ಶರ್ಮಾ ತಮ್ಮಿಬ್ಬರ ನಡುವೆ ನಡೆದ ಜಗಳದ ಬಗ್ಗೆ ಕ್ಷಮೆ ಕೇಳಿದ್ದು, " ನಾನೇನಾದ್ರು ನಿಮಗೆ ತುಂಬಾ ಬೇಸರವಾಗುವಂತೆ ನಡೆದುಕೊಂಡಿದ್ದರೆ ಕ್ಷಮಿಸಿ ಸುನಿಲ್. ನಾನು ನಿಮ್ಮನ್ನು ಎಷ್ಟು ಪ್ರೀತುಸುತ್ತೇನೆ ಎಂಬುದು ನಿಮಗೆ ಗೊತ್ತು. ನಾನು ಕೂಡ ಬೇಸರಗೊಂಡಿದ್ದೇನೆ. ಆದರೆ ನಿಮ್ಮ ಮೇಲಿನ ಪ್ರೀತಿ ಯಾವಾಗ್ಲು ಇದ್ದೇ ಇರುತ್ತದೆ' ಎಂದು ಟ್ಟೀಟ್ ಮಾಡಿದ್ದಾರೆ.

ಫಸ್ಟ್ ಆಫ್ ಆಲ್ ಈ ಸುದ್ದಿ ಎಲ್ಲಿಂದ ಬಂತು?

"ಮೊದಲಿಗೆ ಈ ವಿಷಯ ಎಲ್ಲಿಂದ ಬಂತು. ನಾನು ಸುನಿಲ್ ಜೊತೆ ಫ್ಲೈಟ್ ನಲ್ಲಿ ಜಗಳ ಆಡಿದ್ದೇನೆ ಎಂದು ಯಾರು ಹೇಳಿದ್ದು, ಹೇಳಿದೋರನ್ನ ನಂಬಬಹುದೇ? ಕೆಲವರು ಇಂತಹ ಘಟನೆಗಳನ್ನು ಎಂಜಾಯ್ ಮಾಡುತ್ತಾರೆ. ಆದ್ದರಿಂದ ಈ ಸಣ್ಣ ವಿಷಯ ದೊಡ್ಡದಾಗಿದೆ" ಎಂದು ಫೇಸ್ ಬುಕ್ ನಲ್ಲಿ ಕಪಿಲ್ ಶರ್ಮಾ ಅಪ್ ಡೇಟ್ ಮಾಡಿದ್ದಾರೆ.

ಸುನಿಲ್ ಜೊತೆ ಪ್ರತಿದಿನ ಸಮಯ ಕಳೆಯುತ್ತೇನೆ..

"ನಾವಿಬ್ಬರು ಜೊತೆಯಲ್ಲಿ ಊಟ ಮಾಡುತ್ತೇವೆ, ಟ್ರಾವೆಲ್ ಮಾಡುತ್ತೇವೆ. ವರ್ಷಕ್ಕೆ ನನ್ನ ಸಹೋದರನನ್ನು ಒಮ್ಮೆ ಮೀಟ್ ಮಾಡುತ್ತೇನೆ. ಆದ್ರೆ ಸುನಿಲ್ ಜೊತೆ ಪ್ರತಿದಿನ ಹೆಚ್ಚು ಸಮಯ ಕಳೆಯುತ್ತೇನೆ. ಅವನ ಮೇಲೆ ಪ್ರೀತಿ ಜಾಸ್ತಿ. ಅವನನ್ನು ಗೌರವಿಸುತ್ತೇನೆ" - ಕಪಿಲ್ ಶರ್ಮಾ, ಟಿವಿ ನಿರೂಪಕ

ಜಗಳ ಆಗಿರೋದು ಸತ್ಯ

ಸುನಿಲ್ ಮೇಲಿನ ಹಲ್ಲೆಯ ಕುರಿತು ಪ್ರತಿಕ್ರಿಯಿಸಿರುವ ಕಪಿಲ್, "ಜಗಳ ಆಗಿರೋದು ಸತ್ಯ. ನಾವು ಸಹ ಸಾಧಾರಣ ಮನುಷ್ಯರೇ. ಯಾರ ಮಧ್ಯೆ ಭಿನ್ನಾಭಿಪ್ರಾಯ ಬರೋದಿಲ್ಲ ಹೇಳಿ. ಈ ಸಮಸ್ಯೇನಾ ನಾವೇ ಬಗೆಹರಿಸಿಕೊಳ್ತೀವಿ. ಸುನಿಲ್ ನನ್ನ ಹಿರಿಯ ಅಣ್ಣನ ರೀತಿ. ಫ್ಯಾಮಿಲಿ ಅಂದ ಮೇಲೆ ಇವೆಲ್ಲಾ ಸಾಮಾನ್ಯ" ಎಂದು ಹೇಳಿದ್ದಾರೆ

ನಮ್ಮಿಬ್ಬರ ನಡುವಿನ ಘಟನೆ ಮುಖ್ಯವೇ?

ಕಪಿಲ್ ಶರ್ಮಾ, ತಮ್ಮ ಬಗ್ಗೆ ಮತ್ತು ಸುನಿಲ್ ಗ್ರೋವರ್ ಬಗ್ಗೆ ಮಾಧ್ಯಮಗಳು ಹೆಚ್ಚು ಸುದ್ದಿ ಬಿತ್ತರಿಸುವುದರ ಹಿನ್ನೆಲೆಯಲ್ಲಿ, "ನಾನು ಮಾಧ್ಯಮಗಳಿಗೆ ಗೌರವ ನೀಡುತ್ತೇನೆ. ಇತರೆ ಗಂಭೀರ ವಿಷಯಗಳಿಗಿಂತ ನಮ್ಮಿಬ್ಬರ ನಡುವಿನ ಘಟನೆ ಅಷ್ಟೊಂದು ಮುಖ್ಯವೇ? ಎಂದು ಪ್ರಶ್ನಿಸಿದ್ದಾರೆ.

ಶೋ ನಿಂದ ಸುನಿಲ್ ಹೊರಬೀಳೊಲ್ಲ ಅನ್ನೋದು ಕನ್ಫರ್ಮ್!

ಕಪಿಲ ಶರ್ಮಾ, ಸುನಿಲ್ ಗ್ರೋವರ್ ರಲ್ಲಿ ಸಹಜವಾಗಿ ಕ್ಷಮೆ ಕೇಳಿರುವುದರಿಂದ, ಸುನಿಲ್ ಬಗ್ಗೆ ಹೆಚ್ಚು ಗೌರವದಿಂದ ಹೀಗೆಲ್ಲಾ ಹೇಳಿದ ಮೇಲು, 'ದಿ ಕಪಿಲ್ ಶರ್ಮಾ ಶೋ'ನಿಂದ ಸುನಿಲ್ ಹೊರಬೀಳುವುದಿಲ್ಲ ಅನ್ನೋದು ಕನ್ಫರ್ಮ್ ತಾನೆ.

ಸುನಿಲ್ ಗ್ರೋವರ್ ಮತ್ತು ಕಪಿಲ್ ಮಧ್ಯೆ ನಡೆದಿದ್ದ ಘಟನೆ ಇಷ್ಟೇ..

"ಸುನಿಲ್ ಗ್ರೋವರ್, ಕಪಿಲ್ ಶರ್ಮಾ ಮತ್ತು ಅವರ ಟೀಮ್ ಇತ್ತೀಚೆಗಷ್ಟೆ ಮೆಲ್ಬೋರ್ನ್ ನಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿ ವಿಮಾನದಲ್ಲಿ ಹಿಂದಿರುಗುವ ವೇಳೆ ಕಪಿಲ್ ಮಧ್ಯಪಾನ ಮಾಡಿದ ಮತ್ತಿನಲ್ಲಿ ಸುನಿಲ್ ಗ್ರೋವರ್ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು" ಎಂದು ವರದಿಯಾಗಿತ್ತು.

English summary
Previously News reported Comedian Sunil Grover did not shoot for Kapil Sharma's show on Monday after allegedly being assaulted by Kapil Sharma. But now This may have changed now, Because Kapil Sharma tweeted an apology on Monday night that Sunil Grover appears to have acknowledged.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada