Urfi Javed Arrest: ಅಶ್ಲೀಲ ಡ್ರೆಸ್ ಧರಿಸಿದ್ದಕ್ಕೆ ಉರ್ಫಿ ಜಾವೇದ್ ಬಂಧನ..? ನೆಟ್ಟಿಗರಿಗ್ಯಾಕೆ ಅನುಮಾನ?
Urfi Javed Arrested: ಹಿಂದಿಯ ಕಿರುತೆರೆ ನಟಿ ಹಾಗೂ ಸೋಶಿಯಲ್ ಮೀಡಿಯಾ ಪರ್ಸನಾಲಿಟಿ ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ಇಂದು (ನವೆಂಬರ್ 3) ಬೆಳ್ಳಂಬೆಳಗ್ಗೆ ಮಹಿಳಾ ಪೊಲೀಸರು ಉರ್ಫಿ ಜಾವೇದ್ ಕರೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಮುಂಬೈನಲ್ಲಿ ಉರ್ಫಿ ಜಾವೇದ್‌ರನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ ಎನ್ನಲಾದ ವಿಡಿಯೋವನ್ನು ಪಾಪರಾಜಿ ವೈರಲ್ ಭಯಾನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದೇ ವಿಡಿಯೋ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಉರ್ಫಿ ಜಾವೇದ್‌ರನ್ನು ಪ್ರಶ್ನೆ ಮಾಡುತ್ತಿದ್ದಾರೆ. " ಇಷ್ಟು ಚಿಕ್ಕ ಬಟ್ಟೆಯನ್ನು ಧರಿಸಿ ಯಾರು ಓಡಾಡುತ್ತಾರೆ?" ಎಂದು ಮಹಿಳಾ ಪೊಲೀಸರು ಉರ್ಫಿ ಜಾವೇದ್‌ಗೆ ಪ್ರಶ್ನೆ ಮಾಡುತ್ತಿದ್ದಾರೆ.
ಈ ವೇಳೆ ಉರ್ಫಿ ಜಾವೇದ್ ಬ್ಯಾಕ್ ಲೆಸ್ ರೆಡ್ ಟಾಪ್ ಹಾಗೂ ಡೆನಿಮ್ ಪ್ಯಾಂಟ್ ಧರಿಸಿ ಕಾಫಿ ಶಾಪ್‌ಗೆ ಹೋಗಿದ್ದರು ಎನ್ನಲಾಗಿದೆ. ಆ ವೇಳೆ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಉರ್ಫಿ ಜಾವೇದ್ ಮತ್ತೆ ಮತ್ತೆ ಬಂಧನಕ್ಕೆ ಕಾರಣಗಳೇನು? ಅನ್ನೋದನ್ನು ಕೇಳುತ್ತಿದ್ದಾರೆ. ಅದಕ್ಕೆ ಉತ್ತರ ನೀಡುತ್ತಲೇ ಪೊಲೀಸ್ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಆದರೆ, ನಿಜವಾಗಿಯೂ ಉರ್ಫಿ ಜಾವೇದ್‌ರನ್ನು ಪೊಲೀಸರು ಬಂಧಿಸಿದ್ದಾರೆಯೇ? ಅನ್ನೋ ಬಗ್ಗೆ ಖಚಿತ ಮಾಹಿತಿ ಇಲ್ಲ. ಉರ್ಫಿಯನ್ನು ನಿಜವಾಗಿಯೂ ಬಂಧಿಸಿದ್ದಾರೆಯೇ? ಅಥವಾ ಇದು ಕೇವಲ ತಮಾಷೆಗಾಗಿ ಮಾಡಿದ ವಿಡಿಯೋನಾ ಅನ್ನೋದರ ಬಗ್ಗೆ ಖಚಿತ ಮಾಹಿತಿ ಇನ್ನೂ ಸಿಕ್ಕಿಲ್ಲ.
ಸೋಶಿಯಲ್ ಮೀಡಿಯಾದಲ್ಲೂ ಕೂಡ ಈ ವಿಡಿಯೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. " ಆಕೆನೇ ತಮಾಷೆಗಾಗಿ ಈ ವಿಡಿಯೋ ಮಾಡಿರಬಹುದು" ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. " ಹೌದಣ್ಣೋ.. ನನಗೂ ಇದು ತಮಾಷೆಗಾಗಿ ಮಾಡಿರಬಹುದು ಎಂದು ಅನಿಸುತ್ತಿದೆ" ಎಂದು ನೆಟ್ಟಿಗರು ಹೇಳಿದ್ದಾರೆ.
ಉರ್ಫಿ ಜಾವೇದ್ ಆಗಾಗ ತನ್ನ ಬೋಲ್ಡ್ ಧಿರಿಸಿನಿಂದ ಸುದ್ದಿಯಲ್ಲಿ ಇರುತ್ತಾರೆ. ಕೆಲವೊಮ್ಮೆ ವಿವಾದಕ್ಕೆ ಸಿಕ್ಕಿಕೊಂಡಿದ್ದು ಕೂಡ ಇದೆ. ಕಳೆದ ತಿಂಗಳಷ್ಟೇ ಉರ್ಫಿ ಜಾವೇದ್ ವಿರುದ್ಧ ದೂರು ಕೂಡ ದಾಖಲಾಗಿತ್ತು. ಆ ಬಳಿಕ ಉರ್ಫಿ ಜಾವೇದ್ ಮುಂಬೈನ ಬಾಂದ್ರ ಪೊಲೀಸ್ ಸ್ಟೇಷನ್‌ಗೂ ಹೋಗಿ ಬಂದಿದ್ದರು.
ಉರ್ಫಿ ಜಾವೇದ್ ಧಿರಿಸಿನಿಂದಲೇ ಹಲವು ಬಾರಿ ಟ್ರೋಲ್‌ಗೆ ಒಳಗಾಗಿದ್ದರು. ಕೆಲವು ಗುಂಪುಗಳು ಟಾರ್ಗೆಟ್ ಮಾಡಿದ್ದರು. ಮತ್ತೆ ಕೆಲವು ಉರ್ಫಿ ಜಾವೇದ್‌ರನ್ನು ಜರಿದಿದ್ದರು. ಮಾಜಿ ಬಿಗ್‌ಬಾಸ್ ಸ್ಪರ್ಧಿಯಾಗಿರುವ ಉರ್ಫಿ ಜಾವೇದ್ ಟ್ರೋಲ್, ಟಾರ್ಗೆಟ್ ಹಾಗೂ ದೂರುಗಳಿಗೆ ತಲೆಕೆಡಿಸಿಕೊಂಡಿಲ್ಲ. " ಜನಪ್ರಿಯತೆಯನ್ನು ಪಡೆಯಲೆಂದೇ ಈ ಚಿತ್ರರಂಗವಿದೆ. ಅಲ್ಲಿ ಗಮನ ಸೆಳೆಯುವುದರಲ್ಲಿ ತಪ್ಪೇನಿದೆ?" ಎಂಬುದು ಉರ್ಫಿ ಜಾವೇದ್ ವಾದವಾಗಿತ್ತು.
ಉರ್ಫಿ ಜಾವೇದ್ ವಿವಾದಕ್ಕೆ ಸಿಕ್ಕಿಕೊಂಡಾಗ ಕೆಲ ಸೆಲೆಬ್ರೆಟಿಗಳು ಬೆಂಬಲಕ್ಕೆ ನಿಂತಿದ್ದರು. ಕೆಲ ತಾರೆಯರು ಬಿಕಿನಿ ಧರಿಸಿ ಪೋಸ್ ಕೊಡುತ್ತಾರೆ. ಅವರ ಬಗ್ಗೆ ಏನು ಮಾತಾಡುವುದಿಲ್ಲ. ಅಂತಹದ್ದರಲ್ಲಿ ಉರ್ಫಿ ಜಾವೇದ್ ಧಿರಿಸಿನ ಬಗ್ಗೆ ಯಾಕೆ ವಿವಾದ ಎಂಬುದು ಕೆಲವರು ಪ್ರಶ್ನೆ ಮಾಡಿದ್ದರು. ಸದ್ಯ ಉರ್ಫಿ ಬಂಧನ ವಿಡಿಯೋ ವೈರಲ್ ಆಗಿದೆ. ಆದರೆ, ಅದು ನಿಜವೇ? ಇಲ್ಲ ಕೇವಲ ತಮಾಷೆಗಾಗಿಯೇ? ಎಂಬುದು ಖಚಿತಗೊಳ್ಳಬೇಕಿದೆ.


Click it and Unblock the Notifications











