"ಮಿಲ್ಕಿ ಬ್ಯೂಟಿ ತಮನ್ನಾ ಜೊತೆ ಮೊದಲ ಡೇಟ್ ಮಾಡಲು 20-25 ದಿನ ಹಿಡಿದಿತ್ತು"; ನಟ ವಿಜಯ್ ವರ್ಮಾ

ಬಾಲಿವುಡ್‌ ನಟ ವಿಜಯ್ ವರ್ಮಾ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಡೇಟಿಂಗ್ ಮಾಡುತ್ತಿರೋ ವಿಷಯ ಗೊತ್ತೇ ಇದೆ. ಕ್ಯಾಮರಾ ಮುಂದೆ ಈ ಬಾಲಿವುಡ್ ಜೋಡಿಯ ಅಪಿಯರೆನ್ಸ್ ಅವರ ಅಭಿಮಾನಿಗಳಿಗೆ ಹಿಡಿಸಿದೆ. ಒಬ್ಬರಿಗೊಬ್ಬರು ಗೌರವದಿಂದ ಕಾಣುವ ರೀತಿ ಎಲ್ಲರಿಗೂ ಹಿಡಿಸಿದೆ. ಇಬ್ಬರೂ ತಮ್ಮ ಲವ್‌ ಸ್ಟೋರಿ ಬಗ್ಗೆ ಹೇಳಿಕೊಂಡ ಬಳಿಕ ಸಂದರ್ಶನಗಳಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಓಪನ್ ಆಗಿ ಮಾತಾಡುತ್ತಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವಿಜಯ್ ವರ್ಮಾ ತಮ್ಮ ಪ್ರೀತಿ ಹುಟ್ಟಿದ್ದೇಗೆ ಅನ್ನುವುದನ್ನು ಹೇಳಿಕೊಂಡಿದ್ದಾರೆ. ಜನಪ್ರಿಯ ಯೂಟ್ಯೂಬರ್ ಹಾಗೂ ಕಾಮಿಡಿಯನ್ ತನ್ಮಯ್ ಭಟ್ ಜೊತೆಗಿನ ಸಂದರ್ಶನದಲ್ಲಿ ವಿಜಯ್ ವರ್ಮಾ ತನ್ನ ಹಾಗೂ ತಮನ್ನಾ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

Vijay Varma first date with Tamannaah

ಮಿಲ್ಕಿ ಬ್ಯೂಟಿ ತಮನ್ನಾ ಹಾಗೂ ವಿಜಯ್ ವರ್ಮಾ ನಡುವೆ 'ಲಸ್ಟ್ ಸ್ಟೋರಿಸ್' ವೆಬ್ ಸೀರಿಸ್ ಶೂಟ್ ಮಾಡುವ ವೇಳೆ ಪ್ರೀತಿ ಹುಟ್ಟಿತ್ತು ಎಂದು ಅಂದುಕೊಂಡಿದ್ದಾರೆ. ಆದರೆ, ವಿಜಯ್ ವರ್ಮಾ ನಾವಿಬ್ಬರು ಲಸ್ಟ್ ಸ್ಟೋರಿಸ್ ವೆಬ್ ಸೀರಿಸ್ ಶೂಟಿಂಗ್ ವೇಳೆ ಡೇಟಿಂಗ್ ಮಾಡುತ್ತಿರಲಿಲ್ಲ. ಈ ವೆಬ್ ಸೀರಿಸ್ ಶೂಟಿಂಗ್ ಮುಗಿಯುವ ವೇಳೆ ತಮನ್ನಾ ಹಾಗೂ ವಿಜಯ್ ವರ್ಮಾ ನಡುವೆ ಒಂದು ಬಾಂಡಿಂಗ್ ಬೆಳೆದಿತ್ತು. ಅಲ್ಲಿಂದ 20 ರಿಂದ 25 ದಿನಗಳ ಬಳಿಕೆ ಈ ಜೋಡಿ ಮೊದಲ ಡೇಟಿಂಗ್ ಹೋಗಿತ್ತು.

ವಿಜಯ್ ವರ್ಮಾ ತನ್ನ ಮೊದಲ ಡೇಟಿಂಗ್ ಬಗ್ಗೆ ಒಪನ್ ಆಗಿ ಮಾತಾಡಿದ್ದಾರೆ. ನಟಿ ತಮನ್ನಾ ಜೊತೆ ಮೊದಲ ಡೇಟ್ ಹೇಗಿತ್ತು? ಪ್ರೀತಿ ಶುರುವಾಗಿದ್ದು ಹೇಗೆ? ಅನ್ನುವುದನ್ನು ಯೂಟ್ಯೂಬರ್ ಜೊತೆ ಹಂಚಿಕೊಂಡಿದ್ದಾರೆ. "ಲಸ್ಟ್‌ ಸ್ಟೋರಿ ಶೂಟಿಂಗ್ ಮುಗಿಯುವ ವೇಳೆ ಪಾರ್ಟಿ ಮಾಡುವ ಬಗ್ಗೆ ಚರ್ಚೆ ಆಗುತ್ತಿತ್ತು. ಆದರೆ ಅದು ನಡೆಯಲಿಲ್ಲ. ಆದ್ದರಿಂದ ನಾವೇ ಪಾರ್ಟಿ ಮಾಡಲು ನಿರ್ಧರಿಸಿದ್ದೆವು. ಕೇವಲ ನಾಲ್ಕು ಜನ ಇದ್ದೆವು. ಆ ದಿನ ನಾನು ನಿನ್ನೊಂದಿಗೆ ಇನ್ನೂ ಹೆಚ್ಚು ದಿನ ಹ್ಯಾಂಗ್ ಔಟ್ ಮಾಡಬೇಕು ಎಂದು ಹೇಳಿದ್ದೆ. ಅಲ್ಲಿಂದ ಸುಮಾರು 20 ರಿಂದ 25 ದಿನಗಳ ಬಳಿಕ ನಾವು ಮೊದಲ ಡೇಟ್‌ಗೆ ಹೋಗಿದ್ದೆವು" ಎಂದು ವಿಜಯ್ ವರ್ಮಾ ಹೇಳಿದ್ದಾರೆ.

Vijay Varma first date with Tamannaah

ತಮನ್ನಾ ಹಾಗೂ ವಿಜಯ್ ವರ್ಮಾ ಇಬ್ಬರೂ ತಮ್ಮ ಲವ್ ಸ್ಟೋರಿಯನ್ನು ಬೇಗನೇ ಕನ್ಫರ್ಮ್ ಮಾಡುತ್ತಿದ್ದರು. ಇವರಿಬ್ಬರೂ ಗಾಳಿ ಸುದ್ದಿಗಳಿಗೆ ಸಿಕ್ಕಿಕೊಳ್ಳಲಿಲ್ಲ. ಇಲ್ಲಿಂದ ವಿಜಯ್ ಹಾಗೂ ತಮನ್ನಾ ಇಬ್ಬರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಗಳಲ್ಲಿ ಇಬ್ಬರೂ ಕೈ ಕೈ ಹಿಡಿದು ಆಗಮಿಸುತ್ತಿದ್ದಾರೆ. ಪಾಪರಾಜಿಗಳಿಗೆ ಪೋಸ್ ಕೊಡುತ್ತಿದ್ದಾರೆ. ಇಷ್ಟೇ ಅಲ್ಲದೆ ಹೊಸ ವರ್ಷವನ್ನು ತಮನ್ನಾ ಹಾಗೂ ವಿಜಯ್ ವರ್ಮಾ ಲಂಡನ್‌ನಲ್ಲಿ ಆಚರಣೆ ಮಾಡಿದ್ದರು.

'ಲಸ್ಟ್ ಸ್ಟೋರೀಸ್ 2'ನಲ್ಲಿ ಸುಜಯ್ ಘೋಶ್ ನಿರ್ದೇಶಿಸಿದ ಪಾರ್ಟ್‌ನಲ್ಲಿ ವಿಜಯ್ ವರ್ಮಾ ಹಾಗೂ ತಮನ್ನಾ ನಡುವಿನ ಕೆಮಿಸ್ಟ್ರಿ ವರ್ಕ್‌ಔಟ್ ಆಗಿತ್ತು. ಅವರಿಬ್ಬರ ರೊಮ್ಯಾಂಟಿಕ್ ಸೀನ್‌ಗಳು ಆ ಸೀರಿಸ್‌ನ ಹೈಲೈಟ್ ಆಗಿತ್ತು. ಹೀಗಾಗಿ ಲಸ್ಟ್ ಸ್ಟೋರಿಸ್ ಶೂಟಿಂಗ್ ವೇಳೆನೇ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ಓಡಾಡಿತ್ತು. ಆದರೆ, ಆ ವೇಳೆ ಡೇಟಿಂಗ್ ಮಾಡುತ್ತಿರಲಿಲ್ಲ ಎಂದು ವಿಜಯ್ ವರ್ಮಾ ಹೇಳಿಕೊಂಡಿದ್ದಾರೆ.

Tamannaah: ಬಾಲಿವುಡ್‌ಗೆ ಹೋಗಿ ಸೌತ್ ಸಿನಿಮಾಗಳ ಬಗ್ಗೆ ತಮನ್ನಾ ಆಘಾತಕಾರಿ ಹೇಳಿಕೆ!
ಸದ್ಯ ವಿಜಯ್ ವರ್ಮಾ ಹಾಗೂ ತಮನ್ನಾ ಮದುವೆ ವಿಚಾರ ಸುದ್ದಿಯಲ್ಲಿದೆ. ಸ್ವತ: ತಮನ್ನಾ ಮದುವೆ ಬಗ್ಗೆ ಹೆಚ್ಚು ಫೋರ್ಸ್ ಮಾಡುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಇದೇ ವರ್ಷ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾ? ಅನ್ನೋದನ್ನು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

More from Filmibeat

English summary
Vijay Varma says It took 20-25 days for the first date with Tamannaah
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X