»   » 'ದಂಗಲ್', 'ಸುಲ್ತಾನ್' ಚಿತ್ರಕ್ಕೆ 'ರಯೀಸ್' ಹೋಲಿಸುವುದಿಲ್ಲ: ಶಾರುಖ್

'ದಂಗಲ್', 'ಸುಲ್ತಾನ್' ಚಿತ್ರಕ್ಕೆ 'ರಯೀಸ್' ಹೋಲಿಸುವುದಿಲ್ಲ: ಶಾರುಖ್

Posted By:
Subscribe to Filmibeat Kannada

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ರಯೀಸ್' ಚಿತ್ರ ಜನವರಿ 25 ರಂದು ತೆರೆ ಮೇಲೆ ಅಪ್ಪಳಿಸಿ, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಲ್ಲದೇ 2017 ನೇ ವರ್ಷದಲ್ಲಿ 100 ಕೋಟಿ ಬಾಕ್ಸ್ ಆಫೀಸ್ ಗಳಿಸಿದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.[ರಯೀಸ್ VS ಕಾಬಿಲ್: ಬಾಕ್ಸ್ ಆಫೀಸ್‌ನಲ್ಲಿ ಗೆದ್ದ ಸಿನಿಮಾ ಯಾವುದು?]

ಇತ್ತೀಚೆಗಷ್ಟೇ 'ರಯೀಸ್' ಸಿನಿಮಾ ಗೆದ್ದ ಹಿನ್ನೆಲೆಯಲ್ಲಿ ಚಿತ್ರತಂಡ ಸೆಲೆಬ್ರೇಶನ್ ಹಮ್ಮಿಕೊಂಡಿತ್ತು. ಈ ವೇಳೆ ಶಾರುಖ್ ಖಾನ್ 'ರಯೀಸ್' ಚಿತ್ರದ ಯಶಸ್ಸಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಶಾರುಖ್ ಗೆ ಕೇಳಿದ ಪ್ರಶ್ನೆ

'ರಯೀಸ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಪಡೆದಿದೆ. ಆದ್ದರಿಂದ ಸಾಮಾನ್ಯವಾಗಿ ಸಲ್ಮಾನ್ ಖಾನ್ ಅವರ 'ಸುಲ್ತಾನ್' ಮತ್ತು ಅಮೀರ್ ಖಾನ್ ಅವರ 'ದಂಗಲ್' ಚಿತ್ರಗಳಿಗೆ 'ರಯೀಸ್' ಅನ್ನು ಕಂಪೇರ್ ಮಾಡಲಾಗುತ್ತಿದೆಯಲ್ಲಾ? ಎಂಬ ಪ್ರಶ್ನೆಯೊಂದು ಮಾಧ್ಯಮ ಮಿತ್ರರ ಕಡೆಯಿಂದ ಶಾರುಖ್ ಖಾನ್ ಅವರಿಗೆ ಕೇಳಲಾಗಿತ್ತು.['ಮಹಿಳೆಯರಿಗೆ ಅಗೌರವ ತೋರಿದರೆ ತಲೆ ಕತ್ತರಿಸುತ್ತೇನೆ': ಶಾರುಖ್]

ಶಾರುಖ್ ಉತ್ತರ

" 'ರಯೀಸ್' ಚಿತ್ರದ ಬಿಜಿನೆಸ್ ಬಗ್ಗೆ ನಮಗೆ ಸಂತೋಷ ಇದೆ. ನಮ್ಮ ನಿರೀಕ್ಷೆಗಿಂತ ಹೆಚ್ಚು ಸಂತೋಷವನ್ನು 'ರಯೀಸ್' ಚಿತ್ರದಿಂದ ಪಡೆದಿದ್ದೇವೆ. ಆದರೆ ಈ ಸಿನಿಮಾವನ್ನು 'ದಂಗಲ್' ಮತ್ತು 'ಸುಲ್ತಾನ್' ಚಿತ್ರಕ್ಕೆ ನಾನು ಹೋಲಿಸುವುದಿಲ್ಲ. 'ರಯೀಸ್' ಚಿತ್ರಕ್ಕಿಂತ ಬಹುದೊಡ್ಡ ಸಿನಿಮಾಗಳು ಅವು" ಎಂದು ಶಾರುಖ್ ಪ್ರತಿಕ್ರಿಯೆ ನೀಡಿದ್ದಾರೆ.[ಶಾರುಖ್ 'ರಯೀಸ್' ಪ್ರಮೋಶನ್ ವೇಳೆ ವ್ಯಕ್ತಿ ಸಾವು]

'ರಯೀಸ್' ಚಿತ್ರವನ್ನು ದಂಗಲ್, 'ಸುಲ್ತಾನ್ ಗೆ ಹೋಲಿಸಿದ್ದು ಏಕೆ?

ರಯೀಸ್ ಚಿತ್ರ ಜನವರಿ 25 ರಂದು ಬಿಡುಗಡೆ ಆಗಿ 5 ದಿನಗಳ ಅಂತ್ಯಕ್ಕೆ 100 ಕೋಟಿ ಗಳಿಸಿದೆ. ಅಮೀರ್ ಖಾನ್ ಅಭಿನಯದ 'ದಂಗಲ್' ಮತ್ತು ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ್' ಚಿತ್ರಗಳು 3 ದಿನಕ್ಕೆ 100 ಕೋಟಿ ಬಾಕ್ಸ್ ಆಫೀಸ್ ಗಳಿಕೆ ದಾಟಿದ್ದವು. ಈಗ 'ರಯೀಸ್' ಚಿತ್ರ 5 ನೇ ದಿನದ ಅಂತ್ಯಕ್ಕೆ 100 ಕೋಟಿ ದಾಟಿದ ಕಾರಣ, ದಂಗಲ್ ಮತ್ತು ಸುಲ್ತಾನ್ ಚಿತ್ರಗಳಿಗೆ ಹೋಲಿಸಲಾಗುತ್ತಿದೆ.

'ದಂಗಲ್' 5 ದಿನಕ್ಕೆ ಗಳಿಸಿದ ಮೊತ್ತ

ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ 5 ದಿನದ ಅಂತ್ಯಕ್ಕೆ 250 ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು.

'ಸುಲ್ತಾನ್' 5 ದಿನಕ್ಕೆ ಗಳಿಸಿದ ಮೊತ್ತ

ಸಲ್ಮಾನ್ ಖಾನ್ ಮತ್ತು ಅನುಷ್ಕ ಶರ್ಮಾ ಅಭಿನಯದ 'ಸುಲ್ತಾನ್' 5 ದಿನದ ಅಂತ್ಯಕ್ಕೆ 180 ಕೋಟಿ ಗಳಿಸಿತ್ತು.

English summary
Shah Rukh Khan is elated with the box office success of his latest release Raees, but actor says there is no point in comparing his movie with the bigger hits like Dangal and Sultan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada