"ನನ್ನ ಪತ್ನಿ ಮಂತ್ರಿಯೊಂದಿಗೆ ಅಫೇರ್ ಇಟ್ಟುಕೊಂಡಿದ್ದಳು": ಅಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದ ಸಂಜಯ್ ದತ್

ಬಾಲಿವುಡ್‌ ನಟ ಸಂಜಯ್ ದತ್ ಬದುಕೇ ಸಿನಿಮಾ ಆಯ್ತು. ತನ್ನ ಬದುಕಿನಲ್ಲಿ ಅದೆಷ್ಟೋ ತಪ್ಪುಗಳನ್ನು ಮಾಡಿ ಕೆಟ್ಟವನು ಎನಿಸಿಕೊಂಡು ನಟ ಈಗ ಒಳ್ಳೆಯ ಹಾದಿ ಹಿಡಿದಿದ್ದಾರೆ. ಸಂಜಯ್ ದತ್ ತನ್ನ ತಪ್ಪುಗಳನ್ನು ಒಪ್ಪಿಕೊಂಡು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಈಗ ಎಲ್ಲರ ಅಚ್ಚು ಮೆಚ್ಚಿನ ಸೂಪರ್‌ಸ್ಟಾರ್.

'ಕೆಜಿಎಫ್ ಚಾಪ್ಟರ್ 2' ಬಳಿಕ ಅಧೀರನಾಗಿ ಕಂಡ ಮೇಲೆ ಸಂಜಯ್ ದತ್ ಇಮೇಜ್ ಬದಲಾಗಿದೆ. ದಕ್ಷಿಣ ಭಾರತದಲ್ಲೂ ಸಂಜಯ್ ದತ್ ಹವಾ ಜೋರಾಗಿಯೇ ನಡೆಯುತ್ತಿದೆ. ಡ್ರಗ್ಸ್, ಬಾಂಬೆ ಬಾಂಬ್ ಬ್ಲಾಸ್ಟ್ ಪ್ರಕರಣ, ಇವೆಲ್ಲದರಿಂದ ಮುಕ್ತಿ ಪಡೆದು ಹೊಸ ಇಮೇಜ್ ಬಳಸಿಕೊಂಡಿದ್ದಾರೆ. ಈಗಂತೂ ನಟನೆ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

When Sanjay Dutt revealed his past life that My Wife Had An Affair With My Minister

ಸಂಜಯ್ ದತ್ ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಹಲವು ಬಾರಿ ಏರಿ ಇಳಿತಗಳನ್ನು ಕಂಡಿದ್ದಾರೆ. ಇದೇ ವೇಳೆ ತನ್ನ ಪತ್ನಿ ಮಂತ್ರಿಯೊಂದಿಗೆ ಅಫೇರ್ ಇಟ್ಟುಕೊಂಡಿದ್ದಳು. ಅವಳನ್ನು ಸಾಯಿಸಿ ಬಿಟ್ಟೆ ಎಂದರ ಕರ್ಮವನ್ನೇ ಇಂದು ಅನುಭವಿಸುತ್ತಿದ್ದೇನೆ ಎಂದು ಹೇಳಿದ್ದರು. ಅಷ್ಟಕ್ಕೂ ಸಂಜಯ್ ದತ್ ಈ ಮಾತು ಹೇಳಿದ್ದೇಕೆ? ಪತ್ನಿ ಅಫೇರ್, ಕರ್ಮದ ಬಗ್ಗೆ ಹೇಳಿದ್ದೇನು?

ಪತ್ನಿ ಅಫೇರ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?

ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಶೋನಲ್ಲಿ ಒಮ್ಮೆ ಸಂಜಯ್ ದತ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಕರಣ್ ಜೊತೆ ಮಾತಾಡುವಾಗ ಸಂಜಯ್ ದತ್ ಕೆಲವು ವೈಯಕ್ತಿ ವಿಷಯಗಳನ್ನು ಹಂಚಿಕೊಂಡಿದ್ದರು. "ನನ್ನ ಪತ್ನಿ ಮಂತ್ರಿಯೊಂದಿಗೇ ಅಫೇರ್ ಇಟ್ಟುಕೊಂಡಿದ್ದಳು. ಅವಳನ್ನು ಕೊಂದು ಬಿಟ್ಟೆ. ಅದೇ ಕರ್ಮ ನನ್ನನ್ನು ಕಾಡುತ್ತಿದೆ" ಎಂದು ಸಂಜಯ್ ದತ್ ಕೇಳಿದ್ದರು. ಅಷ್ಟಕ್ಕೂ ಈ ಹೇಳಿಕೆಯ ಹಿಂದೊಂದು ಟ್ವಿಸ್ಟ್ ಇದೆ. ಅದೇನು ತಿಳಿಯಲು ಮುಂದೆ ಓದಿ..

When Sanjay Dutt revealed his past life that My Wife Had An Affair With My Minister

ಪತ್ನಿ ಅಫೇರ್ ಕಥೆಯೇನು?

ಕರಣ್ ಜೋಹರ್ ಶೋನಲ್ಲಿ ಸಂಜಯ್ ದತ್ ತಮ್ಮ ಹಿಂದಿನ ಜನ್ಮದ ಬಗ್ಗೆ ಹೇಳಿಕೊಂಡಿದ್ದರು. " ಅಶೋಕ ಸಾಮ್ರಾಜ್ಯವಿದ್ದ ಕಾಲದಲ್ಲಿ ನಾನು ರಾಜನಾಗಿದ್ದೆ. ನನ್ನ ಮಂತ್ರಿಯೊಂದಿಗೆ ನನ್ನ ಪತ್ನಿ ಅಫೇರ್ ಇಟ್ಟುಕೊಂಡಿದ್ದಳು. ಯುದ್ಧದಲ್ಲಿ ನಾನು ಸಾಯಲಿ ಅಂತಾನೇ ಕಳುಹಿಸಿದ್ದಳು. ಆದರೆ, ನಾನು ಸಾಕಷ್ಟು ಯೋಧರನ್ನು ಯುದ್ಧದಲ್ಲಿ ಸಾಯಿಸಿದೆ. ಬಳಿಕ ಇಬ್ಬರ ಅಫೇರ್ ಬಗ್ಗೆ ಗೊತ್ತಾಗಿ, ಪತ್ನಿಯನ್ನು ಹಾಗೂ ಮಂತ್ರಿ ಸಾಯಿಸಿ ಬಿಟ್ಟೆ" ಎಂದು ಹಿಂದಿನ ಜನ್ಮದ ಬಗ್ಗೆ ಸಂಜಯ್ ದತ್ ಮಾತಾಡಿದ್ದರು.

ಕರ್ಮದ ಬಗ್ಗೆ ಹೇಳಿದ ಕಥೆಯೇನು?

ಸಂಜಯ್ ದತ್ ಮದ್ರಾಸ್ ಸಮೀಪದ ಹಳ್ಳಿಯೊಂದರಲ್ಲಿ ತನ್ನ ಹಿಂದಿನ ಭವಿಷ್ಯ ಹೇಳಿದ್ದರ ಘಟನೆಯನ್ನು ಕರಣ್‌ ಜೋಹರ್‌ಗೆ ವಿವರಿಸಿದ್ದರು. "ಗಂಗಾವತಿಯಲ್ಲಿ ನನ್ನ ಗೆಳೆಯ ಇದ್ದಾನೆ. ಶಿವನಾರಿ ಬಗ್ಗೆ ಅವನು ನನಗೆ ಮಾಹಿತಿ ನೀಡಿದ್ದನು. ಇದು ಮದ್ರಾಸ್‌ನಿಂದ ಎರಡು ಗಂಟೆ ಪ್ರಯಾಣ. ಅಲ್ಲಿನವರಿಗೆ ರಜನಿಕಾಂತ್ ಒಬ್ಬರೇ ಗೊತ್ತಿರೋದು. ಅವರನ್ನು ಬಿಟ್ಟರೆ ಬೇರೆ ಯಾರೂ ಗೊತ್ತಿಲ್ಲ. ಸಣ್ಣ ಹಳ್ಳಿ. ಅಲ್ಲಿ ಹಸ್ತ ನೋಡಿ ಭವಿಷ್ಯ ಹೇಳುತ್ತಾರೆ." ಎಂದು ಅಲ್ಲಿ ಹೇಳಿದ ಸಂಜಯ್ ದತ್ ಹಿಂದಿನ ಭವಿಷ್ಯದ ರಹಸ್ಯವನ್ನು ರಿವೀಲ್ ಮಾಡಿದ್ದಾರೆ.

ಕರ್ಮದ ಬಗ್ಗೆ ಸಂಜಯ್ ದತ್ ಏನಂತಾರೆ?

ಹಿಂದಿನ ಜನ್ಮದಲ್ಲಿ ಇಬ್ಬರು ವ್ಯಕ್ತಿಗಳನ್ನು ಸಾಯಿಸಿದ್ದರಿಂದ ಈ ಜನ್ಮದಲ್ಲಿ ಆ ಕರ್ಮವನ್ನು ಅನುಭವಿಸಬೇಕಾಗಿದೆ ಎಂದು ಸಂಜಯ್ ದತ್ 'ಕಾಫಿ ವಿತ್ ಕರಣ್' ಶೋನಲ್ಲಿ ಹೇಳಿದ್ದರು. " ಹಿಂದಿನ ಜನ್ಮದಿಂದಲೇ ನಾನು ಒಳ್ಳೆಯ ಕುಟುಂಬದಲ್ಲಿ ಹುಟ್ಟಿದೆ. ಹಾಗಾಗಿಯೇ ನಾನು ಈಗ ಬದುಕಬೇಕಾಗಿದೆ. ಆ ಕಾರಣಕ್ಕೆ ನಾನು ಈ ವೃತ್ತಿಯಲ್ಲಿದ್ದೇನೆ." ಎಂದು ಸಂಜಯ್ ಹೇಳಿದ್ದರು. ಹಾಗೇ ತಾಯಿ ನರ್ಗೀಸ್ ದತ್, ಮೊದಲ ಪತ್ನಿ ರಿಚಾ ಶರ್ಮಾ ಕಳೆದುಕೊಂಡಿದ್ದು, ಬಂಧನ, ಜೈಲುವಾಸ, ಇವೆಲ್ಲವೂ ಹಿಂದಿನ ಜನ್ಮದ ಕರ್ಮ ಎಂದು ಸಂಜಯ್ ದತ್ ಹೇಳಿದ್ದರು.

More from Filmibeat

English summary
When Sanjay Dutt revealed his past life that My Wife Had An Affair With My Minister, I Killed Her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X