Dhamaal 4 Box Office Day 6 ; ಅಜಯ್ ದೇವಗನ್ ಅಂಡ್ ಗ್ಯಾಂಗ್‌ಗೆ ಆಘಾತ, 6ನೇ ದಿನ ಗಳಿಕೆಯಲ್ಲಿ ಭಾರಿ ಕುಸಿತ ಕಂಡ 'ಧಮಾಲ್ 4'

ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಬಾಲಿವುಡ್‌ನವರು, ಮಾತಿಗೂ ಮುನ್ನ ನಮ್ಮ ಸಿನಿಮಾದ ಗಳಿಕೆ ನೂರು ಕೋಟಿಯ ಗಡಿ ದಾಟಿದೆ ಎಂಬ ಮಾತುಗಳನ್ನಾಡ್ತಿದ್ದರು. ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದರು. ಆದರೆ ಆ ನಂತರ ಲೆಕ್ಕ ತಪ್ಪಿತು. ಸಲೀಸಾಗಿ ನೂರು ಕೋಟಿಯನ್ನ ಗಳಿಸುತ್ತಿದ್ದ ಬಾಲಿವುಡ್‌ನಲ್ಲಿ ಐವತ್ತು ಕೋಟಿಗೂ ಹಾಹಾಕಾರ ಎದ್ದಿತು. ಕಳೆದ ಎರಡು ವರ್ಷ ಹೊರತು ಪಡಿಸಿದರೆ, ಕೊರೊನಾ ನಂತರ ಬಾಲಿವುಡ್ ಅನುಭವಿಸಿದ್ದು ಬಹುತೇಕ ನಷ್ಟನೇ.

ಇಂಥಾ ಬಾಲಿವುಡ್ ಪಾಲಿಗೆ ಈ ವರ್ಷದ ಆರಂಭ ಚೆನ್ನಾಗಿತ್ತು. ಆದರೆ.. ಆ ನಂತರದ ಪ್ರದರ್ಶನ ಅಷ್ಟಕಷ್ಟೇ. ''ಧುರಂಧರ್ 2''.. ''ಬಾರ್ಡರ್ 2''.. ''ವೆಲ್ಕಮ್ ಟು ದಿ ಜಂಗಲ್''.. ''ಭೂತ್ ಬಂಗ್ಲಾ'' ಹೊರತು ಪಡಿಸಿದರೆ ಹಿಂದಿ ಉದ್ಯಮಕ್ಕೆ ದಕ್ಕಿದ್ದು ಕೇವಲ ನಿರಾಸೆ ಮಾತ್ರ.

Dhamaal 4 Box Office Day 6 Ajay Devgn s Comedy Hits Weekday Speedbump
Also Read
Toxic VS Eetha ; ಯಶ್‌ ಅಬ್ಬರ, ಕಣದಿಂದ ಹಿಂದೆ ಸರಿದ ಶ್ರದ್ಧಾ ಕಪೂರ್ - ರಾಯ ಹಾವಳಿಗೆ ಮತ್ತೆ ಬೆದರಿದ ಬಾಲಿವುಡ್
Toxic VS Eetha ; ಯಶ್‌ ಅಬ್ಬರ, ಕಣದಿಂದ ಹಿಂದೆ ಸರಿದ ಶ್ರದ್ಧಾ ಕಪೂರ್ - ರಾಯ ಹಾವಳಿಗೆ ಮತ್ತೆ ಬೆದರಿದ ಬಾಲಿವುಡ್

ಹೀಗಾಗಿ ಅಜಯ್ ದೇವಗನ್ ಅಭಿನಯದ ''ಧಮಾಲ್ 4'' ಮೇಲೆ ಎಲ್ಲರ ನಿರೀಕ್ಷೆ ಇತ್ತು. ಈ ನಿರೀಕ್ಷೆ ಹುಸಿಯಾಗುತ್ತಾ..? ಅಥವಾ ''ಧಮಾಲ್ 4'' ಗೆದ್ದು ಬೀಗುತ್ತಾ..? ಎನ್ನುವುದಕ್ಕೆ ಉತ್ತರ ಮುಂಬರುವ ದಿನಗಳಲ್ಲಿ ಸಿಗಲಿದೆಯಾದರೂ ಸದ್ಯ ಬಾಕ್ಸಾಫೀಸ್‌ನಲ್ಲಿ ''ಧಮಾಲ್ 4'' ತೆವಳುತ್ತಿದೆ.

ಬಂಪರ್ ಓಪನಿಂಗ್ ನಂತರ ಕುಸಿದ ಧಮಾಲ್ 4

ಹೌದು, ''ಧಮಾಲ್ 4''.. ಕಳೆದ ವಾರ (ಜುಲೈ 10) ತೆರೆಗೆ ಬಂದಿದ್ದ ಮಲ್ಟಿ ಸ್ಟಾರರ್ ಸಿನಿಮಾ. ಅಜಯ್ ದೇವಗನ್ ಅಂತಹ ಸ್ಟಾರ್ ಇದ್ದರೂ ಮೊದಲ ದಿನ ಕೇವಲ 14 ಕೋಟಿಯನ್ನು ಗಳಿಸಿದ್ದ ಈ ಚಿತ್ರ ಶನಿವಾರ ಮತ್ತು ಭಾನುವಾರ ಮಾತ್ರ ಬಾಕ್ಸಾಫೀಸ್‌ನಲ್ಲಿ ಮ್ಯಾಜಿಕ್ ಮಾಡಿತ್ತು. ಕೇವಲ ಮೂರೇ ದಿನದಲ್ಲಿ ₹65 ಕೋಟಿಯನ್ನು ದೋಚಿತ್ತು. ಈ ಮೂಲಕ ಹೊಸದೊಂದು ಭರವಸೆ ಮೂಡಿಸಿತ್ತು.

ಆದರೆ ಸೋಮವಾರ (ಜುಲೈ 13) ಈ ಚಿತ್ರದ ಗಳಿಕೆಯಲ್ಲಿ ಶೇಕಡಾ 69.3% ಕುಸಿತ ಕಂಡು ಬಂದಿತ್ತು. ಚಿತ್ರ ₹8.75 ಕೋಟಿಯನ್ನು ಮಾತ್ರ ಗಳಿಸಿತ್ತು. ಇನ್ನು ಸಾಮಾನ್ಯವಾಗಿ ಸೋಮವಾರದ ಗಳಿಕೆಯ ಆಧಾರದ ಮೇಲೆ ವಾರದ ಉಳಿದ ದಿನಗಳ ಗಳಿಕೆ ಕುಸಿಯುತ್ತಾ ಸಾಗುತ್ತದೆ. ಹೀಗಾಗಿ ಹಲವರು ''ಧಮಾಲ್'' ಢಮಾರ್ ಎಂದು ಅಂದುಕೊಂಡಿದ್ದರು.

ಆದರೆ. ಬಾಕ್ಸಾಫೀಸ್ ಅಚ್ಚರಿಯ ಗೂಡು. ಇಲ್ಲಿ ಯಾವತ್ತು ಏನು ಬೇಕಾದರೂ ಮಿರಾಕಲ್ ಆಗಬಹುದು. ಇದಕ್ಕೆ ಕೈಗನ್ನಡಿ ಎಂಬಂತೆ ''ಧಮಾಲ್ 4'' ಚಿತ್ರದ ಗಳಿಕೆಯಲ್ಲಿ ಮೊನ್ನೆ ಅಂದರೆ ಮಂಗಳವಾರ (ಜುಲೈ 14) 8.6% ಏರಿಕೆ ಕಂಡು ಬಂದಿತ್ತು. ಸೋಮವಾರಕ್ಕಿಂತ ಮಂಗಳವಾರದ ಗಳಿಕೆ ಹೆಚ್ಚಾಗಿದ್ದು ಚಿತ್ರ ₹9.50 ಕೋಟಿ ಗಳಿಸಿತ್ತು. ಆದರೆ ನಿನ್ನೆ (ಜುಲೈ 16) ಚಿತ್ರದ ಗಳಿಕೆಯಲ್ಲಿ ಮತ್ತೆ 31.6% ಕುಸಿತ ಕಂಡು ಬಂದಿದೆ. ಕೇವಲ ₹6.50 ಕೋಟಿಯನ್ನು ಮಾತ್ರ ಚಿತ್ರ ಗಳಿಸಿದೆ. ಈ ಮೂಲಕ ಆರು ದಿನದಲ್ಲಿ ₹89.75 ಕೋಟಿಯನ್ನು ''ಧಮಾಲ್ 4'' ಗಳಿಸಿದೆ.

Dhamaal 4 Box Office Day 6 Ajay Devgn s Comedy Hits Weekday Speedbump
Recommended For You
 ವಾಕ್ ಮಾಡಿ ಆಮೇಲೆ ಬಟ್ಟೆ ಬಿಚ್ಚು ಅಂದರು ; ಹೋಟೆಲ್ ರೂಮ್‌ನಲ್ಲಿ ಕಹಿ ಅನುಭವ, ಬಿಕ್ಕಿದ 50 ವರ್ಷದ ನಟಿ
ವಾಕ್ ಮಾಡಿ ಆಮೇಲೆ ಬಟ್ಟೆ ಬಿಚ್ಚು ಅಂದರು ; ಹೋಟೆಲ್ ರೂಮ್‌ನಲ್ಲಿ ಕಹಿ ಅನುಭವ, ಬಿಕ್ಕಿದ 50 ವರ್ಷದ ನಟಿ

ಸ್ಯಾಕ್ನಿಲ್ ಪ್ರಕಾರ ಧಮಾಲ್ 4 ಚಿತ್ರದ 4ದಿನದ ಗಳಿಕೆ ಈ ಕೆಳಗಿನಂತಿದೆ.

ಮೊದಲ ದಿನ (ಶುಕ್ರವಾರ) ₹14.00 ಕೋಟಿ
ಎರಡನೇ ದಿನ (ಶನಿವಾರ) ₹22.50 ಕೋಟಿ
ಮೂರನೇ ದಿನ (ಭಾನುವಾರ) ₹28.50 ಕೋಟಿ
ನಾಲ್ಕನೇ ದಿನ ( ಸೋಮವಾರ)₹8.75 ಕೋಟಿ
ಐದನೇ ದಿನ (ಮಂಗಳವಾರ)₹9.50ಕೋಟಿ
ಆರನೇ ದಿನ (ಬುಧವಾರ) ₹6.50ಕೋಟಿ

ಒಟ್ಟು ಭಾರತದ ಗಳಿಕೆ (ನೆಟ್) ₹89.75 ಕೋಟಿ

ಗೆಲ್ಲುತ್ತಾ ''ಧಮಾಲ್ 4''..?

ಬಾಲಿವುಡ್‌ನ ಟ್ರೇಡ್ ಪಂಡಿತ ರೋಹಿತ್ ಜೈಸ್ವಾಲ್ ಪ್ರಕಾರ ''ಧಮಾಲ್ 4'' ಚಿತ್ರಕ್ಕೆ 150 ಕೋಟಿ ಖರ್ಚಾಗಿದೆ. ಆ ಪೈಕಿ ಸದ್ಯ ಭಾರತದಿಂದಲೇ 90 ಕೋಟಿ ಹಣ ಮರಳಿ ಬಂದಿದೆ. ಇನ್ನು ವಿದೇಶದಲ್ಲಿ 17 ಕೋಟಿಯನ್ನು ಚಿತ್ರ ಗಳಿಸಿದೆ. ಸೇಫ್ ಜೋನ್‌ಗೆ ಬರಲು ಇನ್ನು 50 ಕೋಟಿಯ ಅವಶ್ಯಕತೆ ಇದೆ. ಈ ವೀಕೆಂಡ್ ಚಿತ್ರಕ್ಕೆ ಬೂಸ್ಟ್ ಸಿಕ್ಕರೆ ಗಳಿಕೆಯಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಈ ವಾರಾಂತ್ಯದ ಗಳಿಕೆಯ ಮೇಲೆ ''ಧಮಾಲ್ 4'' ಚಿತ್ರದ ಫಲಿತಾಂಶ ನಿಂತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Ajay Devgn’s Dhamaal 4 slows down on weekdays but successfully crosses the ₹89 crore net barrier in India on Day 6. Read the full box office report and analysis now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X