ವಾಕ್ ಮಾಡಿ ಆಮೇಲೆ ಬಟ್ಟೆ ಬಿಚ್ಚು ಅಂದರು ; ಹೋಟೆಲ್ ರೂಮ್‌ನಲ್ಲಿ ಕಹಿ ಅನುಭವ, ಬಿಕ್ಕಿದ 50 ವರ್ಷದ ನಟಿ

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ದ ಮನಸ್ಸುಗಳು ಖೆಡ್ಡಾ ಎಂಬ ಅರಿವು ಇದ್ದರೂ ಬಿದ್ದು ಏಳುವ ಸೀಚುವೇಷನ್ನುಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ.

ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ, ಒಂದಿಲ್ಲೊಂದು ರೀತಿಯಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಸಮಯ-ಸಂದರ್ಭ ಬಂದಾಗ ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಾರೆ. ಈ ಸಾಲಿಗೀಗ ಶ್ವೇತಾ ಕ್ವಾತ್ರಾ ಸೇರಿಕೊಂಡಿದ್ಧಾರೆ.

Shweta Kawaatra Reveals Her Horrifying Audition Casting Couch Experience

ಯಾರು ಈ ಶ್ವೇತಾ ಕ್ವಾತ್ರಾ..?

ಹೌದು, ಶ್ವೇತಾ ಕ್ವಾತ್ರಾ.. ಒಂದ್ಕಾಲದಲ್ಲಿ ಕಿರುತೆರೆಯಲ್ಲಿ ಮೆರೆದ ಚೆಲುವೆ. ರ್‍ಯಾಂಪ್ ಮೇಲೆ ಬೆಕ್ಕಿನ ನಡಿಗೆ ಮಾಡುತ್ತಿದ್ದ ಶ್ವೇತಾ ಬಣ್ಣದ ಪ್ರಪಂಚಕ್ಕೆ ಬಂದಿದ್ದು ತೀರಾ ಆಕಸ್ಮಿಕವಾಗಿ. ನಟಿಯಾಗುವ ಯಾವ ಹಂಬಲವೂ ಇವರಿಗೆ ಇರಲಿಲ್ಲ. ಆದರೆ ವಿಧಿಲಿಖಿತ ಬೇರೆಯೇ ಇತ್ತು.

2000ನೇ ಇಸ್ವಿಯಲ್ಲಿ ಪ್ರಸಾರವಾದ ಜಗದ್ವಿಖ್ಯಾತ ಧಾರಾವಾಹಿ 'ಕಹಾನಿ ಘರ್ ಘರ್ ಕೀ'' ಮೂಲಕ ಕಿರುತೆರೆ ಪ್ರೇಕ್ಷಕರ ವಲಯದಲ್ಲಿ ಮನೆ ಮಾತಾದ ಶ್ವೇತಾ ಕ್ವಾತ್ರಾ 2005ರಲ್ಲಿ ''ಮೈ ಬ್ರದರ್ ನಿಖಿಲ್'' ಚಿತ್ರದ ಮೂಲಕ ಚಿತ್ರರಂಗಕ್ಕೂ ಬಂದರು.

Also Read
3 ದಿನ ಆಡಿಷನ್ ಮಾಡಿದರು, ಕಾಸು ಕೊಟ್ಟರು ; ಆಮೇಲೆ ಆ ಅರ್ಥದಲ್ಲಿ ಕರೆದ್ರು- ಬಿಗ್ ಬಾಸ್ ಸ್ಫರ್ಧಿ ಭಾವುಕ
3 ದಿನ ಆಡಿಷನ್ ಮಾಡಿದರು, ಕಾಸು ಕೊಟ್ಟರು ; ಆಮೇಲೆ ಆ ಅರ್ಥದಲ್ಲಿ ಕರೆದ್ರು- ಬಿಗ್ ಬಾಸ್ ಸ್ಫರ್ಧಿ ಭಾವುಕ

ಇದರ ನಡುವೆ ''ಘರ್ ಏಕ್ ಮಂದಿರ್''.. ''ಕುಸುಮ್''.. ''ಕುಮ್‌ಕುಮ್''.. ''ಸಿಐಡಿ''.. ''ಬಾಲ್ ವೀರ್'' .. ಹೀಗೆ ಹಲವಾರು ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಶ್ವೇತಾ ''ಮರ್ಡರ್ 2''.. ''ಅಜರ್''.. ಅಂತಹ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದರು.

ಇಂಥಾ ಶ್ವೇತಾ ಕ್ವಾತ್ರಾ ಸದ್ಯ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಈ ಝಗಮಗಿಸುವ ಲೋಕಕ್ಕೆ ಬಂದ ಆರಂಭದ ದಿನಗಳಲ್ಲಿ ತಮ್ಮನ್ನು ಯಾಮಾರಿಸುವ ಪ್ರಯತ್ನವನ್ನು ಹಲವರು ಮಾಡಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

Shweta Kawaatra Reveals Her Horrifying Audition Casting Couch Experience
Recommended For You
ಈಗ ಯಾರು ದೈಹಿಕ ಸುಖದ ಬೇಡಿಕೆ ಇಡಲ್ಲ, ಬದಲಿಗೆ.. ; ಚಿತ್ರರಂಗದ ಹೊಸ ಟೆಕ್ನಿಕ್ ಹೇಳಿದ ನಟಿ
ಈಗ ಯಾರು ದೈಹಿಕ ಸುಖದ ಬೇಡಿಕೆ ಇಡಲ್ಲ, ಬದಲಿಗೆ.. ; ಚಿತ್ರರಂಗದ ಹೊಸ ಟೆಕ್ನಿಕ್ ಹೇಳಿದ ನಟಿ

ಮಧ್ಯವರ್ತಿಗಳ ಹಾವಳಿ

ಈ ಕುರಿತು ''ಶೈನಿ ನಾರಂಗ್'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶ್ವೇತಾ ಕ್ವಾತ್ರಾ ನಮ್ಮ ಈ ರಂಗದಲ್ಲಿ ನಿರ್ದೇಶಕ ಅಥವಾ ನಿರ್ಮಾಪಕರಿಗಿಂತ ಈ ಮಧ್ಯವರ್ತಿಗಳ ಹಾವಳಿ ಜಾಸ್ತಿ ಇದೆ ಎಂದು ಹೇಳಿದ್ದಾರೆ. ಕೆಲಸ ಕೊಡಿಸುವ ನೆಪದಲ್ಲಿ ಎದುರಾಗುವ ಈ ಏಜೆಂಟ್‌ಗಳೇ ಇಂತಹ ಕೆಲಸಕ್ಕೆ ನೂಕುತ್ತಾರೆ ಎಂದು ಹೇಳಿರುವ ಶ್ವೇತಾ ಹೊಸಬರಲ್ಲಿನ ಮುಗ್ದತೆ ಮತ್ತು ಅವರಲ್ಲಿನ ಅಸಹಾಯಕತೆಯೇ ಇವರ ಬಂಡವಾಳ ಎಂದಿದ್ದಾರೆ.

ಕಚೇರಿಯಲ್ಲಿ ಬೆಡ್ ಯಾಕೆ ..?

ಇನ್ನು ಯಾರದಾದ್ದರೂ ಆಫೀಸ್ ಇರಲಿ, ಆಫೀಸ್ ಅಂದರೆ ಅಲ್ಲಿ ಕುಂತು ಮಾತನಾಡಬೇಕು, ಚರ್ಚೆ ನಡೆಯಬೇಕು ಆದರೆ ಇಲ್ಲಿ ಆಫೀಸ್‌ಗಳಲ್ಲಿ ಬೆಡ್ ವ್ಯವಸ್ಥೆ ಇರುತ್ತೆ. ಯಾಕೆ..? ಇದು ಯೋಚನೆ ಮಾಡಬೇಕಾದ ವಿಷಯ ಅಲ್ಲವಾ ಎಂದು ಪ್ರಶ್ನೆ ಮಾಡಿರುವ ಶ್ವೇತಾ ನನ್ನೆದುರು ಹಲವರು ಅಸಭ್ಯವಾದ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.

ಹೊಂದಾಣಿಕೆಯ ಕುರಿತು ನೇರ ಪ್ರಶ್ನೆ

ಮುಂದುವರೆದು ನೀವು ನನಗೆ ಹೊಂದಾಣಿಕೆ ಮಾಡಿಕೊಳ್ತೀರಾ..? ರಾಜಿಯಾಗ್ತೀರಾ..? ಎಂದು ನೇರವಾಗಿಯೇ ನನಗೆ ಪ್ರಶ್ನೆ ಕೇಳಿದವರು ಕೂಡ ಇದ್ದಾರೆ ಎಂದು ಹೇಳಿರುವ ಶ್ವೇತಾ ಆರಂಭದಲ್ಲಿ ನನಗೆ ಇವರ ಈ ಭಾಷೆ ಅರ್ಥವೇ ಆಗುತ್ತಿರಲಿಲ್ಲ. ಆಗ ನಾನು ನೀವೇನು ಹೇಳುತ್ತಿದ್ದೀರಾ ಎಂದು ಕೇಳುತ್ತಿದ್ದೆ, ಆಗ ಅವರು ಮುಖ ಸಿಂಡರಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

ಒಳಗೊಳಗೆ ಭಯ ಆಗುತ್ತಿತ್ತು

ನನಗೆ ಆ ಸಮಯದಲ್ಲಿ ಆ ಅರ್ಥದಲ್ಲಿಯೇ ಇವರು ನನ್ನ ಕೇಳ್ತಿದ್ದಾರಾ ಎನ್ನುವ ಅನುಮಾನ ಕಾಡುತ್ತಿತ್ತು ಎಂದು ಹೇಳಿರುವ ಶ್ವೇತಾ, ಒಬ್ಬ ಹುಡುಗಿಯಾಗಿ ನಾನು ಒಳಗೊಳಗೆ ತುಂಬಾನೇ ಭಯ ಪಡುತ್ತಿದ್ದೆ ಎಂದಿದ್ದಾರೆ. ಅದೆಲ್ಲವೂ ಪದಗಳಲ್ಲಿ ಹೇಳಲು ಸಾಧ್ಯ ಇಲ್ಲ ಎಂದಿದ್ದಾರೆ.

You May Also Like
ಇಬ್ಬರು ನಟಿಯರು, ಒಂದು ರಾತ್ರಿ, ಎರಡು ಲಕ್ಷ ; ಹೈಟೆಕ್ ಹೋಟೆಲ್‌ ದಂಧೆ, ಮೇಕಪ್ ಆರ್ಟಿಸ್ಟ್ ಬಾಯ್ಬಿಟ್ಟ ಸತ್ಯವೇನು?
ಇಬ್ಬರು ನಟಿಯರು, ಒಂದು ರಾತ್ರಿ, ಎರಡು ಲಕ್ಷ ; ಹೈಟೆಕ್ ಹೋಟೆಲ್‌ ದಂಧೆ, ಮೇಕಪ್ ಆರ್ಟಿಸ್ಟ್ ಬಾಯ್ಬಿಟ್ಟ ಸತ್ಯವೇನು?

ಹೋಟೆಲ್‌ನಲ್ಲಿ ಆಡಿಷನ್

ಅದೊಂದು ದಿನ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಆಡಿಷನ್ ಇತ್ತು, ನಾನು ಕೂಡ ಅಲ್ಲಿ ಹೋಗಿದ್ದೇ ಎಂದು ಹೇಳಿರುವ ಶ್ವೇತಾ, ನನ್ನಂತೆಯೇ ಅಲ್ಲಿ ಹಲವಾರು ಹುಡುಗಿಯರು ಕನಸೊತ್ತು ಬಂದಿದ್ದರು, ಈ ಹಿನ್ನೆಲೆ ನನಗೆ ಭಐ ಆಗಲಿಲ್ಲ. ಆದರೆ ಮನದಲ್ಲಿ ಹಿಂಜರಿಕೆ ಇದ್ದೇ ಇತ್ತು ಎಂದಿದ್ದಾರೆ.


ಬಟ್ಟೆ ಕಳಚುವಂತೆ ಹೇಳಿದಾಗ ಆದ ಆಘಾತ

ಆದರೂ ನಾನು ಆಡಿಷನ್ ನೀಡುವ ತೀರ್ಮಾನ ಮಾಡಿದೆ, ನನ್ನ ಸರತಿಗಾಗಿ ಕಾಯುತ್ತಿದ್ದೆ ಎಂದು ಹೇಳಿರುವ ಶ್ವೇತಾ ಕ್ವಾತ್ರಾ, ಆ ನಂತರ ಆಡಿಷನ್ ನೀಡಲು ನಾನು ರೂಮ್ ಒಳಗೆ ಹೋದೆ, ಅಲ್ಲಿ ಬರಹಗಾರರು, ನಿರ್ದೇಶಕ ಮತ್ತು ನಿರ್ಮಾಪಕ ಎಲ್ಲರು ಇದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.

ಮೊದಲೇ ನನಗೆ ಭಯ ಇತ್ತು. ಅವರನ್ನೆಲ್ಲ ಕಂಡು ಇನ್ನೂ ಭಯ ಹೆಚ್ಚಾಯ್ತು ಎಂದು ಹೇಳಿರುವ ಶ್ವೇತಾ ಆಗ ಎಲ್ಲಿ ಒಮ್ಮೆ ನಡೆದು ತೋರಿಸು ಎಂದು ನನಗೆ ಹೇಳಿದರು. ಅದ್ರಂತೆ ನಾನು ನಡೆದು ತೋರಿಸಿದೆ, ಆ ನಂತರ ನೇರವಾಗಿ ಬಟ್ಟೆ ಕಳಚುವಂತೆ ನನಗೆ ಹೇಳಿದರು ಎಂದು ಭಾವುಕರಾಗಿದ್ದಾರೆ.


ದಡ್ಡತನ ಮತ್ತು ಧೈರ್ಯ

ಅವರಾಡಿದ ಈ ಮಾತು ಕೇಳಿ ನಾನು ಅಕ್ಷರಶಃ ಅವತ್ತು ಬೆಚ್ಚಿ ಬಿದ್ದಿದೆ ಎಂದು ಹೇಳಿರುವ ಶ್ವೇತಾ, ನಾನು ಅವರೇನು ಹೇಳಿದ್ದಾರೆ ಎಂದು ಖಚಿತ ಪಡಿಸಿಕೊಳ್ಳಲು ಮತ್ತೊಮ್ಮೆ ಅವರಲ್ಲಿ ಕೇಳಿದಾಗ, ಅವರು ಮತ್ತದೇ ಮಾತು ಹೇಳಿದರು ಎಂದಿದ್ದಾರೆ.

ಎರಡ್ಮೂರು ಕಿಸ್ಸಿಂಗ್ ಸೀನ್, ಕಾಲು, ಎದೆ ; ಸಿನಿಮಾದಲ್ಲಿ ಚಾನ್ಸ್ ಕೊಡ್ತೀನಿ ಎಂದವನ ಮೈಚಳಿ ಬಿಡಿಸಿದ ನಟಿ
ಎರಡ್ಮೂರು ಕಿಸ್ಸಿಂಗ್ ಸೀನ್, ಕಾಲು, ಎದೆ ; ಸಿನಿಮಾದಲ್ಲಿ ಚಾನ್ಸ್ ಕೊಡ್ತೀನಿ ಎಂದವನ ಮೈಚಳಿ ಬಿಡಿಸಿದ ನಟಿ

ನಾನು ಆಗ ಅಲ್ಲಿಂದ ಪಾರಾಗಲು, ಹಾಗೂ-ಹೀಗೂ ಧೈರ್ಯೃ ಮಾಡಿ ಯಾಕೆ ಬಟ್ಟೆ ಬಿಚ್ಚಬೇಕು..? ಎಂದು ಪ್ರಶ್ನೆ ಮಾಡಿದೆ. ಆಗ ಅವರು ಸ್ವಿಮ್ ಸೂಟ್ ಹಾಕಿಕೊಂಡರೆ ನೀವು ಹೇಗೆ ಕಾಣ್ತೀರಾ ಅಂತ ನಾವು ನೋಡಬೇಕು ಎಂದು ಹೇಳಿದರು ಎಂದು ನೆನಪು ಮಾಡಿಕೊಂಡಿರುವ ಶ್ವೇತಾ, ಅವರಾಡಿದ ಈ ಮಾತು ಕೇಳಿ ಥ್ಯಾಂಕ್ ಯೂ ಎಂದು ಹೇಳಿ ನಾನು ಅಲ್ಲಿಂದ ಓಡಿ ಬಂದೆ ಎಂದು ಬಿಕ್ಕಿದ್ದಾರೆ. ಸದ್ಯ ಶ್ವೇತಾ ಕ್ವಾತ್ರಾ ಅವರ ಈ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಅಂದ್ಹಾಗೇ ಶ್ವೇತಾ ಸದ್ಯ ಬೆಳ್ಳಿತೆರೆ ಮತ್ತು ಕಿರುತೆರೆಯಿಂದ ದೂರವಾಗಿದ್ದಾರೆ. ಖ್ಯಾತ ನಟ ಮಾನವ್ ಗೋಹಿಲ್ ಅವರ ಜೊತೆ ಮದುವೆಯಾಗಿರುವ ಶ್ವೇತಾ ದುಬೈನಲ್ಲಿಯೇ ಬದುಕು ರೂಪಿಸಿಕೊಂಡಿದ್ದಾರೆ. ಅಲ್ಲಿನ ರಿಯಲ್ ಎಸ್ಟೇಟ್ ಕುರಿತು ಮಾಹಿತಿಯನ್ನು ಹಂಚಿಕೊಳ್ಳುತ್ತಾ, ಲೈಫ್ ಸ್ಟೈಲ್ ವಿಡಿಯೋಗಳನ್ನು ಶೇರ್ ಮಾಡುತ್ತಾ ನೆಮ್ಮದಿಯಾಗಿದ್ದಾರೆ. ಸದ್ಯ ಶ್ವೇತಾಗೆ 50ರ ಹರೆಯ. ಎದೆಯೆತ್ತರಕ್ಕೆ ಬೆಳೆದ ಒಬ್ಬಳು ಮಗಳು ಇವರಿಗಿದ್ದಾಳೆ.

English summary
"They asked me to strip!" Popular TV actress Shweta Kawaatra reveals a horrifying casting couch incident from her early audition days and how she escaped.
Read more about: casting couch ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X